ರಾಪಾ: ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ಉಗ್ರ ದಾಳಿ ನಡೆದಿದ್ದು, ಗಾಜಾದಲ್ಲಿ ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿದೆ.
ಗಾಜಾದಲ್ಲಿ ಉಗ್ರ ದಾಳಿ ಮತ್ತೊಮ್ಮೆ ನಡೆದಿದ್ದು, 70 ಜನ ಸಾವನ್ನಪ್ಪಿ, ಸುಮಾರು 280 ಜನ ಗಾಯಗೊಂಡಿದ್ದಾರೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯ ನಂತರ, ಹಮಾಸ್ ಭಯೋತ್ಪಾದಕರನ್ನು ಗುರಿಯಾಗಿಸಿ ಇಸ್ರೇಲ್ ಯುದ್ಧ ಸಾರಿತು. ಆ ನಂತರ ನಡೆದಿದ್ದೆಲ್ಲ ಸಾವು-ನೋವುಗಳು. ಹೀಗಾಗಿ ಗಾಜಾ ನಗರವು ಬಹುತೇಕ ಸ್ಮಶಾನದಂತಾಗಿದೆ. ಈ ಸಂದರ್ಭದಲ್ಲಿಯೇ ಮತ್ತೊಂದು ದಾಳಿ ನಡೆದಿದ್ದು, ಜನ ಭಯಭೀತರಾಗಿದ್ದಾರೆ. ಆಂಬ್ಯುಲೆನ್ಸ್‌ಗಳಿಲ್ಲದ ಕಾರಣ ಕತ್ತೆ ಗಾಡಿಯಲ್ಲಿ ಕರೆತರಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.
ಈ ಮೂಲಕ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿದೆ. ಸತ್ತವರ ಪೈಕಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಾಗಿದ್ದಾರೆ. ಬರೋಬ್ಬರಿ 70 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸುಮಾರು 6 ಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.