ಒಂದೆಡೆ ಕೊರೊನಾ, ಮತ್ತೊಂದೆಡೆ ಪ್ರವಾಹ… ಅಸ್ಸಾಂನ ಜನರ ಬದುಕು ಇದೀಗ ಪ್ರವಾಹದಿಂದಾಗಿ ಮೂರಾಬಟ್ಟೆಯಾಗಿದೆ.. ಕಳೆದ ಬಾರಿಯೂ ಭೀಕರ ಪ್ರವಾಹದಿಂದ ತತ್ತರಿಸಿಹೋಗಿದ್ದ ಜನರು ಅದರ ಕಹಿ ನೆನಪು ಮರಿಯುಷ್ಟರಲ್ಲೇ ಮತ್ತೆ ಪ್ರವಾಹದಿಂದ ನಲುಗಿಹೋಗುವಂತಾಗಿದೆ. ಭಾರೀ ಮಳೆಯಿಂದಾಗಿ ಅಸ್ಸಾಂನ ಅದೆಷ್ಟೋ ಹಳ್ಳಿಗಳು ಜಲಾವೃತವಾಗಿ ಜನರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಸಾವಿರಾರು ಜನರು ಸೂರು ಕಳೆದುಕೊಂಡು ಬೀದಿಗೆ ಬಂದಿದ್ದು, ಇರಲು ಜಾಗವಿಲ್ಲದೆ ತಿನ್ನಲು ಆಹಾರವಿಲ್ಲೆದ, ಕುಡಿಯಲು ಶುದ್ಧ ನೀರಿಲ್ಲದೆ ಪಾಡುಪಡುತ್ತಿದ್ರೆ, ಹಲವರು ಗಂಜಿಕೇAದ್ರಗಳಿಗೆ ಮೊರೆ ಹೋಗ್ತಿದ್ದಾರೆ. ಇಷ್ಟಾದ್ರು ಅಸ್ಸಾಂನಲ್ಲಿ ವರುಣನ ರೌದ್ರನರ್ತನ ನಿಂತಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಲ್ಲಿನ ಜನರಿಗೆ ರೇಷನ್ ತಲುಪಿಸುವ ಕೆಲಸ ಮಾಡ್ತಿದೆ. 
ಕಾಮ್ರುಪ್ ನಲ್ಲಿನ ಗಂಜಿ ಕೇಂದ್ರಗಳಿಗೆ ಆಹಾರ ತಲುಪಿಸುವ ಕೆಲಸವಾಗ್ತಿದೆ. ಈ ಕುರಿತಾಗಿ ಮಾತನಾಡಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಕಾಮ್ರುಪ್ ನ ೧೦ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಸಾವಿರಾರು ಜನರ ಜೀವನ ಅಸ್ತವ್ಯಗೊಂಡಿದೆ. ಸರ್ಕಾರ ಪ್ರವಾಹದ ಪರಿಸ್ಥಿತಿ ನಿಯಂತ್ರಣಕ್ಕೆ ಸಕಲ ಕಾರ್ಯಗಳನ್ನೂ ಮಾಡುತ್ತಿದೆ. ಜನರಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.
ಎ ಎಸ್ ಡಿ ಎ ವರದಿ ಪ್ರಕಾರ ಅಸ್ಸಾಂನಲ್ಲಿ ಅಪ್ಪಳಿಸಿರುವ ನೆರೆಗೆ ಇಲ್ಲಿಯವರೆಗೂ ಸುಮಾರು ೭೦ ಜನರು ಮೃತಪಟ್ಟಿದ್ರೆ, ೫೩ ಲಕ್ಷಕ್ಕೂ ಅಧಿಕ ಮಂದಿಯ ಜೀವನದ ಮೇಲೆ ಕರಾಳ ಪರಿಣಾಮ ಬೀರಿದೆ. ಇದಷ್ಟೇ ಅಲ್ಲದೇ ರೈತರ ಜಮೀನುಗಳು, ಬೆಳೆದ ಬೆಳೆಗಳೆಲ್ಲ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗುವAತಾಗಿದೆ.
ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ
ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ...








