ಜೈಪುರದಲ್ಲಿ ಶುಕ್ರವಾರ ಕೇವಲ 16 ನಿಮಿಷಗಳಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದ್ದು, ಜನರು ಆತಂಕಗೊಂಡಿರುವ ಕುರಿತು ವರದಿಯಾಗಿದೆ.
ಮೂರನೇ ಭೂಕಂಪ ಇಂದು ಬೆಳಿಗ್ಗೆ 4.25ರ ಹೊತ್ತಿಗೆ ಸಂಭವಿಸಿದೆ. 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.
ಬೆಳಿಗ್ಗೆ 4.22ರ ವೇಳೆಗೆ 3.1 ತೀವ್ರತೆಯ ಭೂಕಂಪ 5 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಅದಕ್ಕೂ ಮೊದಲು 10 ಕಿಲೋಮೀಟರ್ ಆಳದಲ್ಲಿ ನಸುಕಿನ ವೇಳೆ 4.09 ಗಂಟೆಗೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ 4.4 ರಷ್ಟಿತ್ತು ಎಂದು ತಿಳಿದು ಬಂದಿದೆ. ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ. ಜೈಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭೂಕಂಪದ ಅನುಭವ ಆಗಿದೆ. ಎಲ್ಲರೂ ಸುರಕ್ಷಿತವಾಗಿದ್ದೀರಿ ಎಂಬ ನಂಬಿಕೆ ಇದೆ ಎಂದು ವಸುಂದರಾ ರಾಜೇ ಟ್ವೀಟ್ ಮಾಡಿದ್ದಾರೆ.