ಅಕ್ಟೋಬರ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಗಳನ್ನು ವಿತರಿಸಲು ತಿರುಮಲ ತಿರುಪತಿ ದೇವಸ್ಥಾನ ಮುಂದಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ನ ಟಿಕೆಟ್ಗಳನ್ನು ಜುಲೈ 25 ರಂದು ಟಿಟಿಡಿಯ ಅಧಿಕೃತ ವೆಬ್ ಸೈಟ್ https://tirupatibalaji.ap.gov.in ನಲ್ಲಿ ಬೆಳಿಗ್ಗೆ 10ಕ್ಕೆ ಬಿಡುಗಡೆಯಾಗಲಿದೆ.
4 ಸಾವಿರ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಕ್ಟೋಬರ್ಗೆ ಒಟ್ಟು 15 ಸಾವಿರ ವಿಶೇಷ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗುತ್ತದೆ. 24 ರಂದು ಬೆಳಿಗ್ಗೆ 11 ಗಂಟೆಗೆ ಅಕ್ಟೋಬರ್ ತಿಂಗಳಿಗೆ ಸಂಬಂಧಿಸಿದ ಟಿಕೆಟ್ಗಳನ್ನು ಸಹ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುವುದು ಶ್ರೀವಾಣಿ ಟ್ರಸ್ಟ್ ಹೇಳಿದೆ.
ಅದೇ ದಿನ ಮಧ್ಯಾಹ್ನ 3 ಗಂಟೆಗೆ, ಅಕ್ಟೋಬರ್ ತಿಂಗಳಿನ ವಯೋವೃದ್ಧರು ಮತ್ತು ಅಂಗವಿಕಲರ ದರ್ಶನ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗುತ್ತದೆ. ಈ ತಿಂಗಳ 26 ರಂದು, ಮೈಸೂರು ಮಹಾರಾಜರ ಜನ್ಮದಿನ ಪ್ರಯುಕ್ತವಾಗಿ ( ಉತ್ತರಾಭಾದ್ರ ನಕ್ಷತ್ರದ ಗೌರವಾರ್ಥ ) ಪಲ್ಲವೋತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಪಲ್ಲವೋತ್ಸವವನ್ನು ಟಿಟಿಡಿ ಆಯೋಜಿಸುತ್ತದೆ.