ಕರಾವಳಿ ಗಡಿಭಾಗದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದೂ ಸಂಘಟನಕಾರರು, ಒತ್ತಾಯ ಪೂರ್ವಕವಾಗಿ ಕೇಸರಿ ಶಾಲು ಹಾಕಿಸಿದ್ದಾರೆ. ಇತ್ತ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ಎಂದು ಪಟ್ಟು ಹಿಡಿದ್ದಾರೆ. ಹೀಗಾಗಿ ಕೇಸರಿ ಶಾಲು – ಹಿಜಾಬ್ ವಿವಾದ ತಾರಕ್ಕೇರಿದ್ದು, ಬೇರೆ ಬೇರೆ ಜಿಲ್ಲೆಗಳಿಗೆ ವ್ಯಾಪಿಸಿದೆ.
ಹೆಚ್ಚಿನ ಮಾಹಿತಿಗಾಗಿ : Udupi | ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು..?!
ನದಿಗಳ ಜೋಡಣೆ ಘೋಷಣೆಯು ಸರ್ವಾಧಿಕಾರಿ ಧೋರಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದವರು, ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ನದಿಗಳ ಜೋಡಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸುಮಾರು 46 ಸಾವಿರ ಕೋಟಿ ರೂಪಾಯಿ ಇಡುತ್ತೇವೆ ಎಂದು ಹೇಳಿದ್ದಾರೆ. ಇದು ಕಾರ್ಯಸಾಧುವಾದ ಯೋಜನೆ ಅಲ್ಲ ಎಂದರು.
ಹೆಚ್ಚಿನ ಮಾಹಿತಿಗಾಗಿ : Siddaramaiah | ನದಿಗಳ ಜೋಡಣೆ ಘೋಷಣೆ.. ಸರ್ವಾಧಿಕಾರಿ ಧೋರಣೆ
ಕಿದ್ವಾಯಿ ಇಡೀ ದೇಶದಲ್ಲಿ ದೊಡ್ಡ ಕ್ಯಾನ್ಸರ್ ಸಂಸ್ಥೆಯಾಗಿದ್ದು, ಆಧುನೀಕರಣ ಮಾಡಬೇಕಿದೆ. ಕ್ಯಾನ್ಸರ್ ಗುರುತಿಸುವ ಸ್ಕ್ಯಾನ್ ಮಾಡುವ ಅತ್ಯಾಧುನಿಕ ಸವಲತ್ತು ತರಬೇಕಿದೆ. ಇದನ್ನು 10 ಸಾವಿರದೊಳಗೆ ಸ್ಕ್ಯಾನಿಂಗ್ ಮಾಡಿಕೊಡುವ ಅವಕಾಶ ಮಾಡಲಿದ್ದೇವೆ. ಎಲ್ಲಾ ಸ್ಥಳೀಯ ಸೆಂಟರ್ ಗಳಲ್ಲಿ ಕ್ಯಾನ್ಸರ್ ಟ್ರೀಟ್ಮೆಂಟ್ ಸೆಂಟರ್ ಆರಂಭಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: Basavaraja Bommai | ಆರೋಗ್ಯ ಕರ್ನಾಟಕಕ್ಕೆ ಸರ್ಕಾರ ಬದ್ಧ
ಅಂಡರ್ 19 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತದ ಯುವ ಆಟಗಾರರಿಗೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಕೊಹ್ಲಿ ಭಾರತದ ಯುವ ಆಟಗಾರರೊಂದಿಗೆ ಆನ್ಲೈನ್ ಸಂವಾದ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: Team India | ಯಂಗ್ ಇಂಡಿಯಾಗೆ ಕಿಂಗ್ ಕೊಹ್ಲಿ ಟಿಪ್ಸ್
ದಕ್ಷಿಣ ಆಫ್ರಿಕಾದ ಯುವ ಸೆನ್ಸೇಷನ್ ಡೆವಾಲ್ಡ್ ಬ್ರೆವಿಸ್ ಹೊಸ ದಾಖಲೆ ಬರೆದಿದ್ದಾರೆ. ಅಂಡರ್-19 ವಿಶ್ವಕಪ್ನ ಸಿಂಗಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಬ್ರೆವಿಸ್ ಮೆಗಾ ಟೂರ್ನಿಯಲ್ಲಿ ಇದುವರೆಗೆ ಒಟ್ಟು 506 ರನ್ ಗಳಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲೆಯನ್ನು ಮುರಿದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: Dewald Brevis : ಧವನ್ ದಾಖಲೆ ಉಡೀಸ್ ಮಾಡಿದ ಎಬಿಡಿ 2.0