ಟೋಕಿಯೋ ಒಲಿಂಪಿಕ್ಸ್ – 17 + 9 ಒಟ್ಟು 26 ಭಾರತದ ಅಥ್ಲೀಟ್ ಗಳು ಸ್ಪರ್ಧೆ..!

1 min read
dutte chand saakshatv tokyo olympics games

ಟೋಕಿಯೋ ಒಲಿಂಪಿಕ್ಸ್ – 17 + 9 ಒಟ್ಟು 26 ಭಾರತದ ಅಥ್ಲೀಟ್ ಗಳು ಸ್ಪರ್ಧೆ..!

 Athletics Federation of India saakshatvಟೋಕಿಯೋ ಒಲಿಂಪಿಕ್ಸ್ ನ ಟ್ರ್ಯಾಕ್ ಆಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ ಭಾರತದ 26 ಮಂದಿ ಅಥ್ಲೀಟ್ ಗಳು ಸ್ಪರ್ಧೆ ನಡೆಸಲಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿಯನ್ನು ಭಾರತೀಯ ಅಥ್ಲೆಟಿಕ್ ಫೆಡರೇಷನ್ ಪ್ರಕಟಿಸಿದೆ
ಭಾರತದ ವೇಗದ ಓಟಗಾರ್ತಿ ದುಟಿ ಚಾಂದ್, ಎಂ.ಪಿ. ಜಬೀರ್, ಎಂ, ಶ್ರೀಶಂಕರ್, ಅವಿನಾಶ್ ಸಬ್ಲೆ, ನೀರಜ್ ಚೋಪ್ರಾ ಸೇರಿದಂತೆ 16 ಅಥ್ಲೀಟ್ ಗಳು ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧೆ ಮಾಡುತತ್ತಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಭಾರತೀಯ ಅಥ್ಲೀಟ್ ಗಳು

ಪುರುಷರ ವಿಭಾಗ –
ಎಂ.ಪಿ. ಜಬೀರ್ (400 ಮೀಟರ್ ಹರ್ಡಲ್ಸ್) ಅವಿನಾಶ್ ಸಬ್ಲೆ 3000 ಮೀಟರ್ ಸ್ಟೀಪಲ್ ಚೇಸ್, ಎಂ, ಶ್ರೀಶಂಕರ್ (ಲಾಂಗ್ ಜಂಪ್), ನೀರಜ್ ಚೋಪ್ರಾ ಮತ್ತು ಶಿವಪಾಲ್ ಸಿಂಗ್ (ಜಾವೆಲಿನ್ ಥ್ರೋ), ತಜಿಂದರ್ ಪಾಲ್ ಸಿಂಗ್ (ಶಾಟ್‍ಪುಟ್), ಕೆ.ಟಿ. ಇರ್ಫಾನ್, ಸಂದೀಪ್ ಕುಮಾರ್, ರಾಹುಲ್ ರೊಹಿಲ್ಲಾ(20 ಕಿಲೋ ಮೀಟರ್ ನಡಿಗೆ), ಗುರುಪ್ರೀತ್ ಸಿಂಗ್ (50 ಕಿಲೋ ಮೀಟರ್ ನಡಿಗೆ), ಅಮೋಜ್ ಜೇಕಬ್, ಆರೋಗ್ಯ ರಾಜೀವ್, ಮಹಮ್ಮದ್ ಅನಾಸ್, ನಾಗನಾಥನ್ ಪಾಂಡಿ, ನೊಹ್ ನಿರ್ಮಲ್ (4/400 ಮೀಟರ್ ರಿಲೆ), ಸಾರ್ಥಕ್ ಭಾಂಬ್ರಿ, ಅಲೆಕ್ಸ್ ಆಂಟನಿ (4/400 ಮಿಶ್ರ ರಿಲೆ )

Dutee Chand Indian sprinter saakshatvಮಹಿಳೆಯರ ವಿಭಾಗ – ದುಟಿ ಚಾಂದ್ (100 ಮೀಟರ್, 200 ಮೀಟರ್ ) ಕಮಲ್ ಪ್ರೀತ್ ಕೌರ್, ಸೀಮಾ ಅಂಟಿಲ್ ಪೂನಿಯಾ (ಡಿಸ್ಕಸ್ ಥ್ರೋ), ಅನು ರಾಣಿ (ಜಾವೆಲಿನ್ ಥ್ರೋ ), ಭಾವನಾ ಜತ್, ಪ್ರಿಯಾಂಕ ಗೋಸ್ವಾಮಿ (20 ಕಿಲೋ ಮೀಟರ್ ನಡಿಗೆ), ರೇವತಿ ವೀರಮಣಿ, ಶುಭಾ ವೆಂಕಟೇಶ್, ಧನ ಲಕ್ಷ್ಮಿ ಶೇಖರ್ (4/400 ಮೀಟರ್ ಮಿಶ್ರ ರಿಲೆ)
ಹೀಗೆ ಒಟ್ಟು 17 ಪುರುಷ ಅಥ್ಲೀಟ್ ಗಳು ಮತ್ತು 9 ಮಂದಿ ಮಹಿಳಾ ಅಥ್ಲೀಟ್ ಗಳು ಭಾಗವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd