ಟೋಕಿಯೋ ಒಲಂಪಿಕ್ಸ್ : ಸೆಮೀಸ್ ನಲ್ಲಿ ಭಾರತಕ್ಕೆ ಸೋಲು
ಟೋಕಿಯೋ : ಒಲಂಪಿಕ್ಸ್ ನಲ್ಲಿ ಫೈನಲ್ ಗೇರುವ ಭಾರತ ವನಿತೆಯರ ಹಾಕಿ ತಂಡದ ಕನಸು ಭಗ್ನವಾಗಿದೆ. ವನಿತೆಯರ ಹಾಕಿ ಕ್ರೀಡೆಯಲ್ಲಿ ಇದೇ ಮೊದಲ ಬಾರಿ ಸೆಮಿ ಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರ ತಂಡ ಅಜೆರ್ಂಟೀನಾ ವಿರುದ್ಧದ ಪಂದ್ಯದಲ್ಲಿ 1-2ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕೂಡ ನುಚ್ಚುನೂರಾಗಿದೆ.
ಇನ್ನು ಇಂದಿನ ಸೆಮಿ ಫೈನಲ್ ಪಂದ್ಯದ ಕೇವಲ 2ನೇ ನಿಮಿಷದಲ್ಲಿ ಗುರ್ಜೀತ್ ಕೌರ್ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ಆದರೆ, ಅಜೆರ್ಂಟೀನಾದ ನೋಯೆಲ್ ಬ್ಯಾರಿಯೊನೊವೊ ಅವರು 18ನೇ ನಿಮಿಷದಲ್ಲಿ ಮತ್ತು 36ನೇ ನಿಮಿಷದಲ್ಲಿ ಸಿಕ್ಕಂತಹ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ ಫೈನಲ್ ಕನಸನ್ನು ನುಚ್ಚುನೂರು ಮಾಡಿದರು.
ಇನ್ನು ಭಾರತ ತಂಡ ಕಂಚಿನ ಪದಕ ಗೆಲ್ಲುವ ಅವಕಾಶವಿದ್ದು, ಶುಕ್ರವಾರ ನಡೆಯುವ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.