ಟೋಕಿಯೋ ಒಲಿಂಪಿಕ್ಸ್ – 120 ಕ್ರೀಡಾಪಟುಗಳು.. 17 ಸ್ಪರ್ಧೆಗಳು.. ಭಾರತಕ್ಕೇಷ್ಟು ಸಿಗಬಹುದು ಪದಕಗಳು..?
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶ್ವ ಅತೀ ದೊಡ್ಡ ಕ್ರೀಡಾ ಜಾತ್ರೆಯಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಲಿಂಪಿಕ್ ಪದಕ ಗೆಲ್ಲಬೇಕು ಅನ್ನೋ ಕನಸನ್ನು ಕಂಡಿರುತ್ತಾರೆ. ಆದ್ರೆ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಅಂದುಕೊಂಡಷ್ಟು ಸುಲಭವಿಲ್ಲ. ಇಲ್ಲಿ ಪ್ರತಿಭೆ, ಸಾಮಥ್ರ್ಯದ ಜೊತೆಗೆ ಅದೃಷ್ಟವೂ ಬೇಕು. ಜಗತ್ತಿನ ಬಲಿಷ್ಠ ರಾಷ್ಟ್ರಗಳ ಜೊತೆಗೆ ಸಣ್ಣ ಪುಟ್ಟ ರಾಷ್ಟ್ರಗಳ ಕ್ರೀಡಾಪಟುಗಳು ಪದಕಕ್ಕಾಗಿ ಹೋರಾಟ ನಡೆಸುತ್ತಾರೆ.
ಈ ಬಾರಿಯ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ 120 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇದ್ರಲ್ಲಿ ಹಾಕಿ, ಬಾಕ್ಸಿಂಗ್, ಕುಸ್ತಿ, ಮತ್ತು ಶೂಟಿಂಗ್ ವಿಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ 26 ಅಥ್ಲೀಟ್ ಗಳು ಭಾಗವಹಿಸುತ್ತಿದ್ದಾರೆ. ಒಟ್ಟು 17 ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧೆ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಫುಲ್ ಡಿಟೇಲ್ಸ್ ಇಲ್ಲಿದೆ.
ಅಥ್ಲೆಟಿಕ್ಸ್ ವಿಭಾಗ – ಒಟ್ಟು 26 ಸ್ಪರ್ಧಿಗಳು
ಮಹಮ್ಮದ್ ಅನಾಸ್ , ವಿ.ಕೆ. ವಿಸ್ಮಯ, ನಿರ್ಮಲ್ ನೊಹ್, ಜಿಸ್ನಾ ಮ್ಯಾಥ್ಯೂ (4/400 ಮೀಟರ್ ಮಿಕ್ಸೆಡ್ ರಿಲೆ
ಭಾವ್ನಾ ಜಾಟ್ – ಮಹಿಳೆಯರ 20 ಕಿಲೋ ಮೀಟರ್ ನಡಿಗೆ ಸ್ಪರ್ಧೆ
ಇರ್ಫಾನ್ ಥೋಡಿ (ಪುರುಷರ 20 ಕಿಲೋ ಮೀಟರ್ ನಡಿಗೆ ಸ್ಪರ್ಧೆ)
ಸಂದೀಪ್ ಕುಮಾರ್ ( ಪುರುಷರ 20 ಕಿಲೋ ಮೀಟರ್ ನಡಿಗೆ ಸ್ಪರ್ಧೆ).
ಪ್ರಿಯಾಂಕ ಗೋಸ್ವಾಮಿ (ಮಹಿಳೆಯರ 20 ಕಿಲೋ ಮೀಟರ್ ನಡಿಗೆ ಸ್ಪರ್ಧೆ)
ರಾಹುಲ್ (ಪುರುಷರ 20 ಕಿಲೋ ಮೀಟರ್ ನಡಿಗೆ ಸ್ಪರ್ಧೆ)
ಅವಿನಾಶ್ ಸಾಬ್ಲೆ (ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆ),
ಎಮ್. ಶ್ರೀಶಂಕರ್ ( ಪುರುಷರ ಲಾಂಗ್ ಜಂಪ್ ಸ್ಪರ್ಧೆ
ಕಮಲ್ ಪ್ರೀತ್ ಕೌರ್ (ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆ )
ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ),
ಶಿವಪಾಲ್ ಸಿಂಗ್ (ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ)
ಸೀಮಾ ಪೂನಿಯಾ (ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆ)
ದುಟಿ ಚಾಂದ್ – ಮಹಿಳೆಯರ 100, 200 ಮೀಟರ್ ಸ್ಪರ್ಧೆ)
ತೇಜಿಂದರ್ ಪಾಲ್ ಸಿಂಗ್ (ಪುರುಷರ ಶಾಟ್‍ಪಟ್ ಸ್ಪರ್ಧೆ)
ಅನ್ನು ರಾಣಿ (ಮಹಿಳೆಯರ ಜಾವೆಲಿನ್ ಸ್ಪರ್ಧೆ)
ಎಮ್. ಪಿ. ಜಬೀರ್ – 400 ಮೀಟರ್ ಹಡ್ರ್ಸಲ್ಸ್ ಸ್ಪರ್ಧೆ)
ಬಾಕ್ಸಿಂಗ್ ವಿಭಾಗ – ಒಟ್ಟು 9 ಮಂದಿ ಸ್ಪರ್ಧಿಗಳು
ಅಮಿತ್ ಪಂಘಾಲ್ – (ಪುರುಷರ 52 ಕೆಜಿ ವಿಭಾಗ)
ಮನೀಷ್ ಕೌಶಿಕ್ – ಪುರುಷರ 63 ಕೆಜಿ ವಿಭಾಗ )
ವಿಕಾಸ್ ಕೃಷ್ಣನ್ – (ಪುರುಷರ 69 ಕೆಜಿ ವಿಭಾಗ)
ಆಶೀಷ್ ಕುಮಾರ್ – (ಪುರುಷರ 75 ಕೆಜಿ ವಿಭಾಗ)
ಸತೀಶ್ ಕುಮಾರ್ – (ಪುರುಷರ 91 ಕೆಜಿ ವಿಭಾಗ)
ಮೇರಿ ಕೋಮ್ – (ಮಹಿಳೆಯರ 51 ಕೆಜಿ ವಿಭಾಗ)
ಸಿಮ್ರಾಂಜಿತ್ ಕೌರ್ – (ಮಹಿಳೆಯರ 60 ಕೆಜಿ ವಿಭಾಗ)
ಲೊವ್ಲಿನಾ ಬೊರ್ಗೊಹೈನ್ – ಮಹಿಳೆಯರ 69 ಕೆಜಿ ವಿಭಾಗ)
ಪೂಜಾ ರಾಣಿ (ಮಹಿಳೆಯರ 75 ಕೆಜಿ ವಿಭಾಗ)
ಈಕ್ವೇಸ್ಟ್ರಿಯನ್ ವಿಭಾಗ – ಒಟ್ಟು ಸ್ಪರ್ಧಿಗಳು – 1 (ಏಕೈಕ ಸ್ಪರ್ಧಿ)
ಫೌದ್ ಮಿರ್ಜಾ – ಪುರುಷರ ವೈಯಕ್ತಿಕ ವಿಭಾಗ
ಫೆನ್ಸಿಂಗ್ ವಿಭಾಗ – ಒಟ್ಟು -1 (ಏಕೈಕ ಸ್ಪರ್ಧಿ)
ಭವಾನಿ ದೇವಿ (ಮಹಿಳೆಯರ ಸಬ್ರೆ ಸ್ಪರ್ಧೆ)
ಜಿಮ್ನಾಸ್ಟಿಕ್ ವಿಭಾಗ – ಒಟ್ಟು -1 (ಏಕೈಕ ಸ್ಪರ್ಧಿ)
ಪ್ರಣೀತ್ ನಾಯಕ್ (ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ )_
ಗಾಲ್ಫ್ ವಿಭಾಗ – ಒಟ್ಟು -3 ಸ್ಪರ್ಧಿಗಳು
ಅನೀರ್ ಬಾನ್ ಲಹ್ರಿ
ಉದಯನ್ ಮಾನೆ
ಆದಿತಿ ಅಶೋಕ್
ಆರ್ಚೆರಿ ವಿಭಾಗ – ಒಟ್ಟು ನಾಲ್ಕು ಮಂದಿ ಸ್ಪರ್ಧಿಗಳು
ತರುಣ್ ದೀಪ್ ರೈ (ಪುರುಷರ ವೈಯಕ್ತಿಕ ಸ್ಪರ್ಧೆ, ತಂಡ)
ಅಟಾನು ದಾಸ್ – (ಪುರುಷರ ವೈಯಕ್ತಿಕ ವಿಭಾಗ, ತಂಡ )
ಪ್ರವೀಣ್ ಜಾಧವ್ ( ಪುರುಷರ ವೈಯಕ್ತಿಕ ವಿಭಾಗ ತಂಡ)
ದೀಪಿಕಾ ಕುಮಾರಿ (ಮಹಿಳೆಯರ ವೈಯಕ್ತಿಕ ಸ್ಪರ್ಧೆ)
ಸ್ವಿಮ್ಮಿಂಗ್ ವಿಭಾಗ – (ಒಟ್ಟು 3 ಮಂದಿ ಸ್ಪರ್ಧಿಗಳು )
ಶ್ರೀಹರಿ ನಟರಾಜ್ -(ಪುರುಷರ 100 ಮೀಟರ್ ಬ್ಯಾಕ್ ಸ್ಟ್ರೋಕ್)
ಸಾಜನ್ ಪ್ರಕಾಶ್ – (ಪುರುಷರ 200 ಮೀಟರ್ ಬಟರ್ ಫ್ಲೈ)
ಮಾನಾ ಪಟೇಲ್ – 100 ಮೀಟರ್ ಬ್ಯಾಕ್ ಸ್ಟ್ರೊಕ್ )
ಪುರುಷರ ಹಾಕಿ ತಂಡ – ಒಟ್ಟು 16 ಮಂದಿ ಆಟಗಾರರು
ಗೋಲ್ ಕೀಪರ್ – ಪಿ.ಆರ್. ಶ್ರೀಜೇಶ್
ಡಿಫೆಂಡರ್ಸ್- ಹರ್ಮನ್ ಪ್ರೀತ್ ಸಿಂಗ್, ರುಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ.
ಮಿಡ್ ಫೀಲ್ಡರ್ಸ್ – ಹಾರ್ದಿಕ್ ಸಿಂಗ್, ಮನ್ ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್.
ಫಾವಡ್ರ್ಸ್ – ಶಂಶೇರ್ ಸಿಂಗ್, ದಿಲ್ ಪ್ರೀತ್ ಸಿಂಗ್, ಗುರ್ಜತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಯ, ಮನ್ ದೀಪ್ ಸಿಂಗ್.
ಮಹಿಳೆಯರ ಹಾಕಿ ತಂಡ – ಒಟ್ಟು 16 ಮಂದಿ ಆಟಗಾರ್ತಿಯರು
ಗೋಲ್ ಕೀಪರ್ – ಸವಿತಾ, ಡಿಫೆಂಡರ್ಸ್ – ದೀಪ್ ಗ್ರೇಸ್ ಏಕಾ , ನಿಕ್ಕಿ ಪ್ರಧಾನ್, ಗುರ್ಜಿತ್ ಕೌರ್, ಉದಿತಾ, ಮಿಡ್ ಫೀಲ್ಡರ್ – ನಿಶಾ, ನೇಹಾ, ಸುಶೀಲಾ ಚಾನು, ಮೋನಿಕಾ, ನವಜೋತ್ ಕೌರ್, ಸಲಿಮಾ ಟೇಟೆ, ಫಾವಡ್ರ್ಸ್ -ರಾಣಿ ನವನೀತ್ ಕೌರ್, ಲಾಲ್ರೆಂಸಿಯಾಮಿ, ವಂದನಾ ಕಟಾರಿಯಾ, ಶರ್ಮಿಲಾ ದೇವಿ
ರೋಯಿಂಗ್ ವಿಭಾಗ – ಒಟ್ಟು ಸ್ಪರ್ಧಿಗಳು – 2
ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ – (ಪುರುಷರ ಲೈಟ್ ವೇಟ್ ಡಬಲ್ ಸ್ಕಲ್ )
ವೇಟ್ ಲಿಫ್ಟಿಂಗ್ ವಿಭಾಗ – ಒಟ್ಟು -1 (ಏಕೈಕ ಸ್ಪರ್ಧಿ)
ಮೀರಾಬಾಯಿ ಚಾನು – (ಮಹಿಳೆಯರ 49 ಕೆಜಿ ವಿಭಾಗ)
ಸೇಲಿಂಗ್ ವಿಭಾಗ -(ಒಟ್ಟು ನಾಲ್ಕು ಮಂದಿ ಸ್ಪರ್ಧಿಗಳು)
ನೇತ್ರಾ ಕುಮಾನನ್ – (ಮಹಿಳೆಯರ ಲೇಸರ್ ರೇಡಿಯಲ್ ಸ್ಪರ್ಧೆ)
ವಿಷ್ಣು ಸರವಣನ್ – (ಪುರುಷರ ಲೇಸರ್ ಸ್ಟ್ಯಾಂಡರ್ಡ್)
ಕೆ.ಸಿ. ಗಣಪತಿ ಮತ್ತು ವರುಣ್ ಥಕ್ಕರ್ – ( ಪುರುಷರ ಸ್ಕೀಫ್ )
ಶೂಟಿಂಗ್ ವಿಭಾಗ – – (ಒಟ್ಟು 15 ಸ್ಪರ್ಧಿಗಳು)
ಸೌರಬ್ ಚಾಧುರಿ ( ಪುರುಷರ 10 ಮೀಟರ್ ಏರ್ ಪಿಸ್ತೂಲ್ – ವೈಯಕ್ತಿಕ ಮತ್ತು ಮಿಕ್ಸೆಡ್ ಸ್ಪರ್ಧೆ)
ಅಬಿಷೇಕ್ ವರ್ಮಾ – (ಪುರುಷರ 100 ಮೀಟರ್ ಏರ್ ಪಿಸ್ತೂಲ್, ವೈಯಕ್ತಿಕ ಮತ್ತು ತಂಡ 0
ದೀಪಕ್ ಕುಮಾರ್ – (ಪುರುಷರ 10 ಮೀಟರ್ ಏರ್ ರೈಫಲ್ – ವೈಯಕ್ತಿಕ ಮತ್ತು ಮಿಕ್ಸೆಡ್)
ದಿವ್ಯಾಂಶು ಸಿಂಗ್ ಪಂವಾರ್ – (ಪುರುಷರ 10 ಮೀಟರ್ ಏರ್ ರೈಫಲ್ – ವೈಯಕ್ತಿಕ ಮತ್ತು ಮಿಕ್ಸೆಡ್)
ಸಂಜೀವ್ ರಜಪೂತ್ – (50 ಮೀಟರ್ ರೈಫಲ್ -3 ಪೋಸಿಷನ್- ವೈಯಕ್ತಿಕ ಸ್ಪರ್ಧೆ)
ಐಶ್ವರ್ಯ ಪ್ರತಾಪ್ ಸಿಂಗ್ ಟೋಮರ್ – 50 ಮೀಟರ್ ಪುರುಷರ ರೈಫಲ್ -3 ಪೋಸಿಷನ್ – ವೈಯಕ್ತಿಕ ಸ್ಪರ್ಧೆ)
ಅಂಗಡ್ ವೀರ್ ಸಿಂಗ್ ಬೈಜ್ವಾ – ಪುರುಷರ ಸ್ಕೀಟ್ ವೈಯಕ್ತಿಕ
ಮೈರಾಜ್ ಅಹಮ್ಮದ್ ಖಾನ್ – (ಪುರುಷರ ಸ್ಕೀಟ್ ವೈಯಕ್ತಿಕ )
ಮನು ಭಾಕೇರ್ – (ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್, ವೈಯಕ್ತಿಕ, 25 ಮೀಟರ್ ಪಿಸ್ತೂಲ್ ವೈಯಕ್ತಿಕ ಮತ್ತು ಮಿಕ್ಸೆಡೆ)
ಯಶಸ್ವಿನಿ ಸಿಂಗ್ ದೇಸ್ವಾಲ್ – (ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್, ವೈಯಕ್ತಿಕ, ಮಿಕ್ಸೆಡ್ )
ಅಪೂರ್ವಿ ಚಂಡೇಲಾ – ( ಮಹಿಳೆಯರ 10 ಮೀಟರ್ ಏರ್ ರೈಫಲ್- ವೈಯಕ್ತಿಕ)
ಎಲಾವೆನಿಲ್ ವಲೇರಿಯನ್ – (ಮಹಿಳೆಯರ 10 ಮೀಟರ್ ಏರ್ ರೈಫಲ್, ವೈಯಕ್ತಿಕ ಮಿಕ್ಸೆಡ್)
ರಾಹಿ ಸರ್ನೊಬಾಟ್ – ಮಹಿಳೆಯರ 25 ಮೀಟರ್ ಪಿಸ್ತೂಲ್ ವೈಯಕ್ತಿಕ)
ಅಂಜುಮ್ ಮೌದಗಿಲ್ -(ಮಹಿಳೆಯರ 50 ಮೀಟರ್ ಏರ್ ರೈಫಲ್ -3 ಪೊಸಿಷನ್, ವೈಯಕ್ತಿಕ, ಮಿಕ್ಸೆಡ್)
ತೇಜಸ್ವಿನಿ ಸಾವಂತ್ – (ಮಹಿಳೆಯರ 50 ಮೀಟರ್ ರೈಫಲ್ -3 ಪೊಸಿಷನ್ – ವೈಯಕ್ತಿಕ)
ಬ್ಯಾಡ್ಮಿಂಟನ್ ವಿಭಾಗ – (ಒಟ್ಟು 4 ಮಂದಿ ಸ್ಪರ್ಧೆ)
ಪಿ.ವಿ. ಸಿಂಧೂ (ಮಹಿಳೆಯರ ಸಿಂಗಲ್ಸ್ )
ಪಿ. ಸಾಯಿ ಪ್ರಣೀತ್ (ಪುರುಷರ ಸಿಂಗಲ್ಸ್)
ಸಾತ್ವಿಕ್ ಸಾಯಿ ರಾಜ್ ರಾಂಕಿ ರೆಡ್ಡಿ (ಪುರುಷರ ಡಬಲ್ಸ್)
ಚಿರಾಗ್ ಶೆಟ್ಟಿ – (ಪುರುಷರ ಡಬಲ್ಸ್)
ಟೇಬಲ್ ಟೆನಿಸ್ – ಒಟ್ಟು ನಾಲ್ಕು ಮಂದಿ ಸ್ಪರ್ಧಿಗಳು)
ಅಚಾಂತ ಶರತ್ ಕಮಾಲ್ – ಪುರುಷರ ಸಿಂಗಲ್ಸ್ -ಮಿಕ್ಸೆಡ್ ಡಬಲ್ಸ್)
ಸಾತಿಯನ್ ಗುಣಶೇಖರನ್ – (ಪುರುಷರ ಸಿಂಗಲ್ಸ್)
ಮಾನಿಕಾ ಬಾತ್ರಾ – (ಮಹಿಳೆಯರ ಸಿಂಗಲ್ಸ್ – ಮಿಕ್ಸೆಡ್ ಡಬಲ್ಸ್)
ಸುತಿರ್ಥ ಮುಖರ್ಜಿ – (ಮಹಿಳೆಯರ ಸಿಂಗಲ್ಸ್)
ರೆಸ್ಲಿಂಗ್ ವಿಭಾಗ – ಒಟ್ಟು ಎಂಟು ಮಂದಿ ಸ್ಪರ್ಧಿಗಳು
ರವಿ ದಾಹಿಯಾ – (ಪುರುಷರ 57ಕೆಜಿ ಫ್ರಿ ಸ್ಟೈಲ್)
ಬಜ್ರಂಗ್ ಪೂನಿಯಾ – (ಪುರುಷರ 65 ಕೆಜಿ ಫ್ರಿ ಸ್ಟೈಲ್ )
ದೀಪಕ್ ಪೂನಿಯಾ -(ಪುರುಷರ 86 ಕೆಜಿ ಫ್ರಿ ಸ್ಟೈಲ್)
ಸುಮಿತ್ ಮಲಿಕ್ – (ಪುರುಷರ 125 ಕೆಜಿ ಫ್ರಿ ಸ್ಟೈಲ್)
ವಿನೇಶ್ ಪೋಗತ್ – (ಮಹಿಳೆಯರ 53 ಕೆಜಿ ಫ್ರಿ ಸ್ಟೈಲ್)
ಅಂಶು ಮಲಿಕ್ – (ಮಹಿಳೆಯರ 57 ಕೆಜಿ ಫ್ರಿ ಸ್ಟೈಲ್)
ಸೋನಮ್ ಮಲಿಕ್ ( ಮಹಿಳೆಯರ 62 ಕೆಜಿ ಫ್ರಿ ಸ್ಟೈಲ್)
ಸೀಮಾ ಬಿಸ್ಲಾ – (ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್)
ಜೂಡೋ ವಿಭಾಗ – ಒಟ್ಟು -1 (ಏಕೈಕ ಸ್ಪರ್ಧಿ)
ಸುಶೀಲಾ ದೇವಿ – ಮಹಿಳೆಯರ ಲೈಟ್ ವೇಟ್ 48 ಕೆಜಿ)