ಟೋಕಿಯೋ ಒಲಂಪಿಕ್ಸ್ : ಕ್ವಾರ್ಟರ್ ಫೈನಲ್‍ನಲ್ಲಿ ಪೂಜಾ ರಾಣಿಗೆ ಸೋಲು
ಟೋಕಿಯೋ : ಟೋಕಿಯೋ ಒಲಂಪಿಕ್ಸ್ ನಲ್ಲಿ ಬಾಕ್ಸರ್ ಪೂಜಾ ರಾಣಿ ಕ್ವಾರ್ಟರ್‍ಫೈನಲ್‍ನಲ್ಲಿ ಸೋಲನುಭವಿಸಿದ್ದಾರೆ.
ಇದರೊಂದಿಗೆ ಭಾರತದ ಪದಕದ ಕನಸು ಕಮರಿದೆ.
ಇಂದು ನಡೆದ ಮಹಿಳೆಯರ ಮಿಡ್ಲ್‍ವೇಟ್ (75 ಕೆ.ಜಿ.) ವಿಭಾಗದಲ್ಲಿ ಪೂಜಾ ರಾಣಿ, ಚೀನಾದ ಚಿಯಾನ್ ಲೀ ವಿರುದ್ಧ 5-0ರ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‍ನಲ್ಲಿ ಸ್ಪರ್ಧಿಸಿದ್ದ ಪೂಜಾ, ಕ್ವಾರ್ಟರ್‍ಫೈನಲ್‍ಗೆ ಲಗ್ಗೆಯಿಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಅಲ್ಲದೆ ಪದಕ ಗೆಲ್ಲುವ ವಿಶ್ವಾಸವನ್ನೂ ಮೂಡಿಸಿದ್ದರು. ಆದರೆ ಈಗ ಚೀನಾದ ಬಾಕ್ಸರ್ ವಿರುದ್ಧ ಸೋಲು ಕಂಡಿದ್ದಾರೆ.