ಟೊಕಿಯೋ ಒಲಂಪಿಕ್ಸ್ | ಕ್ವಾರ್ಟರ್ ಫೈನಲ್ ಆಡಲು ಸತೀಶ್ ಕುಮಾರ್ ಗೆ ಅನುಮತಿ Satish Kumar saaksha tv
ಟೊಕಿಯೋ : ಒಲಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಆಡಲು ಭಾರತದ ಬಾಕ್ಸರ್ ಸತೀಶ್ ಕುಮಾರ್ ಗೆ ಅನುಮತಿ ದೊರೆತಿದೆ.
ಸತೀಶ್ ಕುಮಾರ್ ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ ನಂಬರ್ 1 ಬಾಕ್ಸರ್ ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ವಿರುದ್ಧ ಸೆಣಸಾಡಲಿದ್ದಾರೆ.
ಜಮೈಕಾದ ರಿಚರ್ಡೊ ಬ್ರೌನ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಭಾರತದ ಮೊದಲ ಸೂಪರ್ ಹೆವಿ ವೆಯ್ಟರ್ (+91 ಕೆ.ಜಿ) ಬಾಕ್ಸರ್ ಕುಮಾರ್ ಗಾಯಗೊಂಡಿದ್ದರು. ಅವರಿಗೆ ಏಳು ಹೊಲಿಗೆಗಳನ್ನು ಹಾಕಲಾಗಿತ್ತು.
ಉತ್ತರ ಪ್ರದೇಶದ ಬುಲಂದರ್ ಶಹರ್ ನಿವಾಸಿ ಸತೀಶ್ ಕುಮಾರ್, ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು.
ಸೇನಾ ತರಬೇತುದಾರರ ಮೂಲಕ ಉತ್ತಮ ಮೈಕಟ್ಟಿನ ಕಾರಣದಿಂದ ಕ್ರೀಡೆಗೆ ಪರಿಚಯಿಸಲ್ಪಟ್ಟರು.
ಸತೀಶ್ ಕುಮಾರ್ ಏಷ್ಯನ್ ಗೇಮ್ಸ್ ನ ಕಂಚು ಮತ್ತು ಕಾಮನ್ ವೆಲ್ತ್ ಗೇಮ್ಸ್ ನ ಬೆಳ್ಳಿ ವಿಜೇತರು.