ವಾಹನ ಸಾವರರಿಗೆ ಟೋಲ್ ಶಾಕ್ – ನೆಲಮಂಗಲ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ…
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಶುಲ್ಕವನ್ನ ಶೇ.25% ರಷ್ಟು ಎನ್ಎಚ್ಐಎ ಹೆಚ್ಚಳ ಮಾಡಿದೆ. ಈ ಮೂಲಕ ಇದುವರೆಗೆ ನೀಡುತ್ತಿದ್ದ ಟೋಲ್ ಬೆಲೆಗಿಂತ 5 ರೂಪಾಯಿಯನ್ನ ಹೆಚ್ಚಳ ಮಾಡಲಾಗಿದೆ.
ಜುಲೈ 1 ರಿಂದ ಫ್ಲೈಓವರ್ ಬಳಸಿದರೆ ದ್ವಿಚಕ್ರ ವಾಹನ ಸವಾರರಿಗೆ 25 ಸಿಂಗಲ್ ಟಿಕೆಟ್ ನೀಡಲಾಗುತ್ತಿದೆ. 35 ರೂಪಾಯಿ ನೀಡಿದರೆ 12 ಗಂಟೆಯ ವರೆಗೆ ಫ್ಲೈಓವರ್ ಬಳಸಬಹುದು. ಈ ಹಿಂದೆ ದ್ವಿಚಕ್ರವಾಹನ ಸವಾರರಿಗೆ 20 ರುಪಾಯಿ ಶುಲ್ಕವನ್ನ ವಿಧಿಸಲಾಗುತ್ತಿತ್ತು. ಅಲ್ಲಿಗೆ 5 ರೂ ಹೆಚ್ಚಳ ಮಾಡಲಾಗಿದೆ.
ವಾಣಿಜ್ಯ ಸಂಬಂಧಿತ ವಾಹನಗಳಿಗೂ ಭಾರೀ ಟ್ಯಾಕ್ಸ್ ವಿಧಿಸಲಾಗಿದೆ. ಕಾರು 60, ವಾಣಿಜ್ಯ ವಾಹನ 85, ಟ್ರಕ್, ಬಸ್ 170, ಭಾರೀ ವಾಹನ 335 (ಸಿಂಗಲ್ ಪಾಸ್). ಒಂದು ದಿನದ ಪಾಸ್ _ದ್ವಿಚಕ್ರವಾಹನ 35, ಕಾರು 90, ವಾಣಿಜ್ಯ ವಾಹನ, 125, ಟ್ರಕ್ ,ಬಸ್ 250, ಭಾರೀ ವಾಹನ 505 ರೂ. ಆಗಿರುತ್ತದೆ.
ಪೀಣ್ಯ ಫ್ಲೈಓವರ್ ಸರಿ ಇಲ್ಲದೆ ಹಲವು ತಿಂಗಳುಗಳೇ ಕಳೆದಿವೆ ಆದರೂ ಜನಸಾಮಾನ್ಯರಿಗೆ ಹೆಚ್ಚಿನ ಟೋಲ್ ಸುಂಕ ವಸೂಲಿ ಮಾಡುತ್ತಿರುದು ಜನ ಸಮಾನ್ಯರಿಗೆ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ವಾಹನಗಳಿಗೆ 5 ರೂಪಾಯಿ ಹೆಚ್ಚಿನ ಶುಲ್ಕ ಪಾವತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನೀಡಿದೆ. ಪೀಣ್ಯ ಫ್ಲೈಓವರ್ ತಾಂತ್ರಿಕ ಸಮಸ್ಯೆ ಒಂದುಕಡೆಯಾದರೆ ಮತ್ತೊಂದೆಡೆ ಟೋಲ್ ಬರೆ ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.








