ಇಲಿ ವಿಷವನ್ನ ಟೂತ್ ಪೇಸ್ಟ್ ಎಂದು ಭಾವಿಸಿ ಹಲ್ಲುಜ್ಜಿದ ಹುಡುಗಿ ಸಾವು

1 min read

ಇಲಿ ವಿಷವನ್ನ ಟೂತ್ ಪೇಸ್ಟ್ ಎಂದು ಭಾವಿಸಿ ಹಲ್ಲುಜ್ಜಿದ ಹುಡುಗಿ ಸಾವು

18 ವರ್ಷದ ಹುಡುಗಿ ಇಲಿ ವಿಷವನ್ನ ಟೂತ್ ಪೇಸ್ಟ್ ಎಂದು ಭಾವಿಸಿ ಹಲ್ಲುಜ್ಜಿದ ಪರಿಣಾಮ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಧಾರಾವಿಯ 18 ​​ವರ್ಷದ ಹುಡುಗಿ ಇಲಿ ವಿಷದ ಪೇಸ್ಟ್ ಅನ್ನು ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಹಲ್ಲುಜ್ಜಲು ಬಳಸಿದ್ದರಿಂದ ಭಾನುವಾರ ಮೃತಪಟ್ಟಿದ್ದಾಳೆ.  ಸೆಪ್ಟೆಂಬರ್ 3 ರ ಬೆಳಿಗ್ಗೆ 10 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನ ಅಪ್ಸಾನಾ ಖಾನ್ ಎಂದು ಗುರುತಿಸಲಾಗಿದೆ. ಇಲಿ ವಿಷದ ಪೇಸ್ಟ್ ಅನ್ನು ಟೂತ್ ಪೇಸ್ಟ್ ಇಟ್ಟಿದ್ದ ಜಾಗದಲ್ಲಿಯೇ ಇಡಲಾಗಿತ್ತು. ಹಲ್ಲುಜ್ಜುವಾಗ ಆಕೆ ಆ ವಿಷದ ಪೇಸ್ಟ್ ಅನ್ನೇ ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಹಲ್ಲುಜ್ಜಿದ ಕಾರಣ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ : ಪೊಲೀಸರಿಂದ ಲಾಠಿ ಚಾರ್ಜ್

ಹಲ್ಲು ಉಜ್ಜಿದ ಸ್ವಲ್ಪ ಸಮಯದ ನಂತರ ಹುಡುಗಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತರ ಅವಳ ತಾಯಿ ಅವಳನ್ನು ಧಾರಾವಿಯ ಲೈಫ್‌ಕೇರ್ ಆಸ್ಪತ್ರೆಗೆ ಕರೆದೊಯ್ದು ಔಷಧಿಗಳನ್ನು ಕೊಡಿಸಿದ್ದಾರೆ.  ಔಷಧಿಗಳನ್ನು ತೆಗೆದುಕೊಂಡರೂ ಆಕೆ ಮೂರು ದಿನಗಳ ಕಾಲ ಹೊಟ್ಟೆ ನೋವಿನಿಂದ ಬಳಲಿದ್ದಾಳೆ. ಈ ವೇಳೆ ತಾಯಿ ಸರಿಯಾಗಿ ನಡೆದಿದ್ದರ ಬಗ್ಗೆ ವಿವರಿಸುವಂತೆ ಹೇಳಿದಾಗ ಆಕೆ ಟೂತ್ ಪೇಸ್ಟ್ ವಿಚಾರ ತಿಳಿಸಿದ್ದಾಳೆ. ಬಳಿಕ ಹುಡುಗಿಯನ್ನ ಕುಟುಂಬಸ್ಥರು ಸಿಯಾನ್ ಆಸ್ಪತ್ರೆಗೆ ದಾಖಲಿಸಿದ್ರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಇತರ ಮೂರು ಆಸ್ಪತ್ರೆಗಳನ್ನು ಬದಲಾಯಿಸಿದ ನಂತರ, ಆಕೆಯನ್ನು ಭಾನುವಾರ ಬೆಳಿಗ್ಗೆ 6 ಗಂಟೆಗೆ ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದ್ರೆ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹುಡುಗಿಯ ಆರೋಗ್ಯ  ತೀವ್ರ ಹದಗೊಂಡಿದ್ದು, ಮೃತಪಟ್ಟಿರೋದಾಗಿ ತಿಳಿದುಬಂದಿದೆ. ಧಾರವಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವಧೂತ್ ಇಂಗೋಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

“ಮಹಿಳಾ ಪತ್ರಕರ್ತೆಯರಿಂದ ತುಂಬಾ ಕಾಟ ಅನುಭವಿಸಿದ್ದೆ” : ಮಲ್ಲಿಕಾ ಶರಾವತ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd