ತೂತು ಮಡಿಕೆ’ ಟ್ರೇಲರ್ ರಿಲೀಸ್.. ಜುಲೈ 8ರಂದು ತೆರೆಗೆ ಬರ್ತಿದೆ ಸಿನಿಮಾ

1 min read

ತೂತು ಮಡಿಕೆ’ ಟ್ರೇಲರ್ ರಿಲೀಸ್.. ಜುಲೈ 8ರಂದು ತೆರೆಗೆ ಬರ್ತಿದೆ ಸಿನಿಮಾ

ತೂತು ಮಡಿಕೆ..ಕನ್ನಡದಲ್ಲಿ ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾ ರಿಲೀಸ್ ಗೆ ಸಜ್ಜಾಗಿ ನಿಂತಿರೋದು ಗೊತ್ತಾ ಇದೆ. ಬರುವ ಜುಲೈ 8ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಪೋಸ್ಟರ್, ಟೀಸರ್ ಹಾಗೂ ಹಾಡಿನ ಮೂಲಕ ಸದ್ದು ಮಾಡ್ತಿರುವ ತೂತು ಮಡಿಕೆ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಇಡೀ ಚಿತ್ರತಂಡ ಟ್ರೇಲರ್ ಅನಾವರಣಕ್ಕೆ ಸಾಕ್ಷಿಯಾದ್ರು.

ಚಿತ್ರದ ಬಗ್ಗೆ ಮಾತಾನಾಡುವ ನಿರ್ದೇಶಕ ಕಂ ನಟ ಚಂದ್ರಕೀರ್ತಿ, ಮೂರು ವರ್ಷದಿಂದ ಸಿನಿಮಾ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿದ್ದೇವೆ. ಒಂದೊಂದು ಹಂತವೂ ಕನಸಾಗಿರುತ್ತದೆ. ಆರಂಭದಿಂದಲೂ ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದ. ಆಸೆಪಟ್ಟು ಸಿನಿಮಾರಂಗಕ್ಕೆ ಬಂದಿದ್ದು, ಹಲವು ಕಿರುಚಿತ್ರ, ನಾಟಕಗಳ ನಂತ್ರ ಒಂದೊಂದೇ ಅವಕಾಶ ಸಿಕ್ತಿದ್ದವು, ಆದ್ರೆ ಮಾಡಿದ ಸಿನಿಮಾಗಳು ರಿಲೀಸ್ ಆಗ್ತಿರಲಿಲ್ಲ. ನಮ್ಮ ಬಳಿ ಇರುವ ರಿಸೋರ್ಸ್ ಮೂಲಕ ಸಿನಿಮಾ ಶುರು ಮಾಡಿದೆವು. ಹೊಸ ನಿರ್ದೇಶಕನಿಗೆ ನಿರ್ಮಾಪಕರು ಸಿಗುವುದು ಕಷ್ಟದ ಕೆಲಸ, ಒಂದಷ್ಟು ವರ್ಷದ ಜರ್ನಿ. ಆದ್ರೆ ನಮಗೆ ನಿರ್ಮಾಪಕರೇ ನಮ್ ಆಫೀಸ್ ಗೆ ಬಂದು ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈಗ ಸಿನಿಮಾ ಜುಲೈ 8ಕ್ಕೆ ತೆರೆಗೆ ಬರ್ತಿದೆ. ಪ್ರತಿಯೊಬ್ಬರು ಬೆಂಬಲ ನೀಡಿ ಎಂದರು.

ಪ್ರಮೋದ್ ಶೆಟ್ಟಿ ಮಾತಾನಾಡಿ, ಜುಲೈ 8ನೇ ತಾರೀಖಿನಂದು ಸಿನಿಮಾ ರಿಲೀಸ್ ಆಗ್ತಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ. ದುಡ್ಡು ಮಾಡಿದವ್ನು ಇನ್ನೂ ದುಡ್ಡು ಮಾಡ್ಬೇಕು. ದುಡ್ಡು ಇಲ್ಲದವನಿಗೆ ದುಡ್ಡು ಮಾಡಬೇಕು ಎಂಬ ಆಸೆ ಟ್ರೇಲರ್ ಮೂಲಕ ರೀಚ್ ಆಗಿದೆ ಎನಿಸುತ್ತದೆ. ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಹೊಸಬರ ಜೊತೆ ಕೆಲಸ ಮಾಡುತ್ತಾ, ಹೊಸತನ ಕಲಿಯುತ್ತಾ ನನ್ನಿಂದ ನಿಮ್ಮ ಸಿನಿಮಾ ಸಹಾಯವಾಗಿದೆ ಎಂದು ತಿಳಿದುಕೊಳ್ಳುತ್ತೇನೆ ಎಂದರು.

ಸ್ವಾರ್ಥ, ದುರಾಸೆ ಸುತ್ತಾ ಸಾಗುವ ಕಥೆಗೆ ಚಂದ್ರಕೀರ್ತಿ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ಅಭಿನಯಿಸಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ತೂತುಮಡಿಕೆ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd