ಟಾಪ್ 5 ಮನರಂಜನೆಯ ಸುದ್ದಿಗಳು , ಬಿಗ್ ಬಾಸ್ ಸಿನಿಮಾ ಅಪ್ ಡೇಟ್ಸ್..!

1 min read

ಟಾಪ್ 5 ಮನರಂಜನೆಯ ಸುದ್ದಿಗಳು , ಬಿಗ್ ಬಾಸ್ ಸಿನಿಮಾ ಅಪ್ ಡೇಟ್ಸ್..!

ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..? 

‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..?

ಕೆಜಿಎಫ್ 2…. ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾದುಕುಳಿತಿರುವ ಸಿನಿಮಾ. ಸ್ಯಾಂಡಲ್ ವುಡ್ ಹಾಗೂ ಭಾರತೀಯ ಸಿನಿಮಾರಂಗದ ಒನ್ ಆಫ್ ದ ಹೈ ವೋಲ್ಟೇಜ್ ಹೈಲೀ ಎಕ್ಸ್ ಪೆಕ್ಟೆಡ್, ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ಇನ್ ಫ್ಯಾಕ್ಟ್ ಕೆಜಿಎಫ್ ಹವಾ ಸಾಗರದಾಚೆಗೂ ಇದೆ. ರಾಖಿ ಭಾಯ್ ಅಬ್ಬರಕ್ಕೆ ವಿದೇಶಿಗರು ಮರುಳಾಗಿದ್ದಾರೆ.  ಎಸ್ ಸ್ಪೆಷಲಿ ಇತ್ತೀಚೆಗೆ ರಿಲೀಸ್ ಆದ ಕೆಜಿಎಫ್ 2 ಟೀಸರ್ ಬಗ್ಗೆ ಹೇಳೋದೇ ಬೇಡ. ಯಾಕಂದ್ರೆ ಯೂಟ್ಯೂಬ್ ನಲ್ಲಿ ದಾಖಲೆಗಳನ್ನ ಬ್ರೇಕ್ ಮಾಡಿ ವಿಶ್ವ ದಾಖಲೆ ಬರೆದ ಕೆಜಿಎಫ್ ಹಲವು ಸಿನಿಮಾಗಳ ರೆಕಾರ್ಡ್ ಗಳನ್ನ ಛಿದ್ರಗೊಳಿಸಿದೆ. ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿ  ಅಷ್ಟೇ ಅಲ್ಲ ಸೌತ್ ಸಿನಿಮಾ ಇಂಡಸ್ಟ್ರೀಯನ್ನ ಒಂದು ಎಕ್ಸ್ ಟ್ರೀಮ್ ಲೆವೆಲ್ ಗೆ ಕೊಂಡೊಯ್ದು ಬಡಾಯಿ ಕೊಚ್ಚಿಕೊಳ್ತಿದ್ದ ಬಾಲಿವುಡ್ ಮಂದಿಯ ಬಾಯಿಗೆ ಬೀಗ ಹಾಕಿದೆ. ಅಷ್ಟರ ಮಟ್ಟಿಗೆ ಕೆಜಿಎಫ್ ಖದರ್ ಕ್ರಿಯೇಟ್ ಮಾಡಿದೆ. ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರ ಆಕ್ಷನ್  ಕಟ್ ಹಾಗೂ ಯಶ್ ಡೆಡ್ಲಿ ಆಟಿಟ್ಯೂಡ್ ಒಂದು ಪರ್ಫೆಕ್ಟ್ ಕಾಂಬೋ. ಜೊತೆಗೆ ಯಶ್ ಮೇಲಿನ ಕ್ರೇಜ್ ಕೆಜಿಎಫ್ ಮೇಲಿನ ನಿರೀಕ್ಷೆ .. ದಿನೇ ದಿನೇ ಸಿನಿಮಾದ ರಿಲೀಸ್ ಗೆ ಫ್ಯಾನ್ಸ್ ಕಾತರತೆ ಹೆಚ್ಚಾಗ್ತಲೇ ಇದೆ.

ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!   

ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!

ಭಾರತೀಯ ಸಿನಿಮಾರಂಗದ ಒನ್ ಆಫ್ ದ ಹೈ ವೋಲ್ಟೇಜ್ , ಹೈಲೀ ಎಕ್ಸ್ ಪೆಕ್ಟೆಡ್, ಹೈ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2. ಜುಲೈ 16 ಕ್ಕೆ ರಿಲೀಸ್ ಆಗಲಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ಕಾಂಬಿನೇಷನ್ ನ ಈ ಸಿನಿಮಾ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದು, ಅಭಿಮಾನಿಗಳು ತುದಿಗಾಲಿನಲ್ಲಿ ಕಾದುಕುಳಿತಿದ್ದಾರೆ. ಅದ್ರಲ್ಲೂ ಇತ್ತೀಚಿಗೆ ರಿಲೀಸ್ ಆದ ಟೀಸರ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಇದರ ನಡುವೆ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ 65 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ ಅನ್ನೋ ಅಪ್ ಡೇಟ್ಸ್ ಸಿಕ್ಕಿದೆ.

ಆದ್ರೆ ರಾಖಿ ಭಾಯ್ ಫ್ಯಾನ್ಸ್ ಗೆ ಸೂಪರ್ ಇಂಟ್ರೆಸ್ಟಿಂಗ್ ಎಕ್ಸೈಟಿಂಗ್ ನ್ಯೂಸ್ ಒಂದು ಸಿಕ್ಕಿದೆ. ಹೌದು ಅದೇನೆಂದ್ರೆ ಹಿಂದಿಯಲ್ಲಿ ಖುದ್ದು ಯಶ್ ಅವರೇ ತಮ್ಮ ವಾಯ್ಸ್ ನ ಡಬ್ ಮಾಡಲಿದ್ದಾರಮತೆ. ಹೌದು ಬಲ್ಲ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಯಶ್ ಅವರು ತಮ್ಮ ಡೈಲಾಗ್ ಗಳಿಗೆ ಹಿಂದಿಯಲ್ಲಿ ತಾವೇ ಡಬ್ ಮಾಡಲಿದ್ದಾರೆ ಎಂದೇ ಹೇಳಲಾಗ್ತಿದೆ. ಆದ್ರೆ  ಅಧಿಕೃತವಾಗಿ ಈ ಬಗ್ಗೆ ಸಿನಿಮಾತಂಡ ಎಲ್ಲೂ ಮಾಹಿತಿ ರಿವೀಲ್ ಮಾಡಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!

ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!

ಬಿಗ್ ಬಾಸ್ ಸೀಸನ್ 8 ಆರಂಭವಾಗಿ ಇನ್ನೂ 3 ದಿನಗಳಷ್ಟೇ ಕಳೆದಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ್ ಕಹಾನಿ ಶುರುವಾಗಿದೆ. ಹೌದು ಈ ವಾರದ ಕ್ಯಾಪ್ಟನ್ ಆಗಿರೋ ಬ್ರೋ ಗೌಡ ಮನೆಯಲ್ಲಿ ಒಂದು ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಬ್ರೋ ಗೌಡ ಈ ಬಗ್ಗೆ ಹಲವರ ಬಳಿ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಬ್ರೋ ಗೌಡ ತಮ್ಮ ಪ್ರೀತಿಯ ವಿಚಾರವನ್ನ ಮೊದಲ ಬಾರಿಗೆ ನಿರ್ಮಲಾ ಹಾಗೂ ಗೀತಾ ಜೊತೆಗೆ ಹೇಳಿಕೊಂಡಿದ್ದರು. ಇದ್ರಿಂದ ಮೂವರ ಮೇಲೆ ಅನುಮಾನ ಮೂಡಿತ್ತು. ಅಂದ್ರೆ ದಿವ್ಯಾ ಉರುಡುಗ, ಧನುಶ್ರೀ, ಹಾಗೂ ದಿವ್ಯಾ ಸುರೇಶ್ ಇರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಧನುಶ್ರೀ ನನ್ನನ್ನ ಅಣ್ಣ ಎಂದು ಕರೆದಿದ್ದಾರೆ ಎಂದಿದ್ದರು.  ಇನ್ನುಳಿದವರು ದಿವ್ಯಾ ಉರುಡುಗ , ದಿವ್ಯಾ ಸುರೇಶ್. ಆದ್ರೆ ಯಾರೆಂಬುದನ್ನ ಬ್ರೋ ಗೌಡ ಸ್ಪಷ್ಟಪಡಿಸಿಲ್ಲ.

ಆದ್ರೆ ಬ್ರೋ ಗೌಡ ಅವರು  ಹೇಳ್ತಿರೋದನ್ನ ನೊಡಿದ್ರೆ ಅವರಿಗೆ ಲವ್ ಆಗಿರೋದು ದಿವ್ಯಾ ಸುರೇಶ್ ಅವರ ಮೇಲೆಯೇ ಅನ್ನೋ ಅನುಮಾನಗಳು , ಚರ್ಚೆಗಳು ಶುರುವಾಗಿವೆ. ಬ್ರೋ ಗೌಡ ಪ್ರೀತಿಸುತ್ತಿರುವ ಆ ಹುಡುಗಿ ದಿವ್ಯಾ ಸುರೇಶ್ ಎಂದೇ ನೆಟ್ಟಿಗರು ಸಹ ಮಾತನಾಡಿಕೊಳ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಅಸಲಿಗೆ ಬ್ರೋ ಗೌಡ ಪ್ರೀತಿಸುತ್ತಿರೋದು ಯಾರನ್ನ ಎನ್ನುವ ವಿಚಾರ ಗೊತ್ತಾಗಲಿದೆ. ಒಂದು ವೇಳೆ ದಿವ್ಯಾ ಸುರೇಶ್  ಅವರೇ ಬ್ರೋ ಗೌಡ ಪ್ರೀತಿಸುತ್ತಿರುವ ಹುಡುಗಿಯಾದ್ರೆ ಆಗ ಇವರ ಪ್ರೀತಿಗೆ ಪಾವಗಡ ಮಂಜು ಅವರು ಬಂಡೆಯಾಗಬಹುದಾ

Bigg Boss 8 : ಧನುಶ್ರೀ ಮೇಕಪ್ ತೆಗೆಯೋಕೆ 1 ವರ್ಷ ಸ್ನಾನ ಮಾಡಬೇಕು – ಸಂಬರಗಿ

Bigg Boss 8 : ಧನುಶ್ರೀ ಮೇಕಪ್ ತೆಗೆಯೋಕೆ 1 ವರ್ಷ ಸ್ನಾನ ಮಾಡಬೇಕು – ಸಂಬರಗಿ

ಟಿಕ್ ಟಾಕ್ ನಲ್ಲಿ ಗಾರ್ಜಿಯಸ್ ಆಗಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನ ಸಂಪಾನೆ ಮಾಡಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಧನುಶ್ರೀ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಈಕೆಯ ಮೇಕಪ್ ಇಲ್ಲದ ಫೋಟೋಗಳು ವೈರಲ್ ಆಗಿದ್ದು, ಇದೇ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಇದೀಗ ಪ್ರಶಾಂತ್ ಸಂಬರಗಿ ಸಹ ಧನುಶ್ರೀ ಮೇಕಪ್ ಬಗ್ಗೆ ಮಾತನಾಡಿದ್ದಾರೆ. ಧನುಶ್ರೀ ಮೇಕಪ್ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದಿದ್ದಾರೆ ಪ್ರಸಾಂತ್ ಸಂಬರಗಿ.

ಅಂದ್ಹಾಗೆ ಈ ರೀತಿ ಹೇಳಲು ಕಾರಣವೇನು.. ಬಿಗ್ ಬಾಸ್ ಮನೆಯಲ್ಲಿ 3ನೇ ದಿನ ಬೆಳಗ್ಗೆ 8 ಗಂಟೆಗೆ ಸಾಂಗ್ ಪ್ರಸಾರವಾಗಿತ್ತು. ಈ ವೇಳೆ ಮಂಜು ಹೊರಗೆ ನಿಂತು ಹಲ್ಲು ಉಜ್ಜುತ್ತಿದ್ದರು. ಆಗ ತಾನೆ ಧನುಶ್ರೀ ಸ್ನಾನ ಮುಗಿಸಿ ಹೊರ ಬಂದಿದ್ದರು. ಆದ್ರೆ ಧನುಶ್ರೀ ಮೇಕಪ್ ಮಾಡಿಕೊಂಡೇ ಹೊರಗಡೆ ಬಂದಿಇದ್ದರು. ಇದನ್ನು ನೋಡಿ ಮಂಜು ಆಶಚರ್ಯದಿಂದಲೇ ಬಾತ್ರೂಮಿನಿಂದ ಮೇಕಪ್ ಮಾಡಿಕೊಂಡೇ ಬಂದ್ರಾ ಎಂದಿದ್ದಾರೆ. ಆದ್ರೆ ಅದಕ್ಕೆ ಟಾoಟ್ ಕೊಟ್ಟ ಧನುಶ್ರೀ ಇಲ್ಲ ನಾನು ಮೇಕಪ್ ಮಾಡಿಕೊಂಡೇ ಸ್ನಾನ ಮಾಡೋಕೆ ಹೋಗಿದ್ದೆ ಎಂದಿದ್ದಾರೆ. ಇದೇ ವಿಚಾರದ ಚರ್ಚೆ ನಡೆಯುತ್ತಿದ್ದ ಮಧ್ಯಪ್ರವೇಶ ಮಾಡಿದ್ದ ಸಂಬರಗಿ ಮೇಕಪ್ ತೆಗೆಯೋಕೆ ಸುಮಾರು ಒಂದು ವರ್ಷವಾದರೂ ಬೇಕು ಎಂದಿದ್ದಾರೆ. ಇದಕ್ಕೆ ಮನೆಯವರೂ ನಕ್ಕಿದ್ಧಾರೆ. ಮನೆಯಿಂದ ಆಚೆ ನೆಟ್ಟಿಗರು ಈಕೆಯ ಮೇಕಪ್ ಲೆಸ್ ಅವತಾರ ನೋಡಿ ಮೊದಲೇ ದಂಗಾಗಿದ್ದರು. ಇದೀಗ ಮತ್ತಷ್ಟು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಬಿಗ್ ಬಾಸ್ ಖೇಲ್ : ಕಹಾನಿ ಮೇ ಟ್ವಿಸ್ಟ್…! ಮೊದಲ ದಿನ ಸೇಫ್ ಅದ್ರೂ ಡೇಜಂರ್ ಝೋನ್ ಗೆ ಹೋಗಿದ್ಯಾಕೆ ಶುಭಾ..!

ಬಿಗ್ ಬಾಸ್ ಖೇಲ್ : ಕಹಾನಿ ಮೇ ಟ್ವಿಸ್ಟ್…! ಮೊದಲ ದಿನ ಸೇಫ್ ಅದ್ರೂ ಡೇಜಂರ್ ಝೋನ್ ಗೆ ಹೋಗಿದ್ಯಾಕೆ ಶುಭಾ..!

ಬಿಗ್ ಸೀಸನ್ 8 ಆರಂಭವಾಗಿ ಈಗಾಗಲೇ ಇಂದಿಗೆ 4 ದಿನವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಣ್ಣೀರಿಟ್ಟಿರೋದು ಕಂಡು ಬಂದಿದೆ. ಸ್ಪರ್ಧಿಗಳ ನಡುವೆ ಫೈಟ್ ಕೂಡ ಆರಂಭವಾಗಿದೆ. ಈ ನಡುವೆ ದೊಡ್ಮನೆಯಲ್ಲಿ ಬಿಗ್ ಬಾಸ್ ಖೇಲ್ ಗೆ ಸ್ಪರ್ಧಿಗಳು ಪೇಚಿಗೆ ಸಿಲುಕಿದ್ದಾರೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿರೋ ಬಿಗ್ ಬಾಸ್ ರಣತಂತ್ರಕ್ಕೆ ದೊಡ್ಮನೆ ಶೇಖ್ ಆಗಿದೆ.

ಹೌದು ಮೊದಲನೇ ದಿನ ಎಲಿಮೇನೇಷನ್ ರೌಂಡ್ ಗೆ ನಾಮಿನೇಟ್ ಆಗಿದ್ದವರು 2ನೇ ದಿನಕ್ಕೆ ಸೇಫ್ ಆದ್ರೂ. ಪ್ರಶಾಂತ್ ಸಂಬರ್ಗಿ, ಧನುಶ್ರಿ, ಲ್ಯಾಗ್ ಮಂಜು, ನಿಧಿ ಸುಬ್ಬಯ್ಯ ಅವರು ಇತರ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು.  ಆದ್ರೆ  ಬಿಗ್‌ ಬಾಸ್ ಕೊಟ್ಟ ಅವಕಾಶವನ್ನ ಬಳಸಿಕೊಂಡ ಪ್ರಶಾಂತ್ ಸಂಬರ್ಗಿ  ತಮ್ಮ ಮೇಲಿನ ನಾಮಿನೇಷನ್ ಕತ್ತಿಯನ್ನ ವಿಶ್ವನಾಥ್ ಗೆ ವರ್ಗಾವಣೆ ಮಾಡಿದ್ರು.  ಇತ್ತ ಪಾವಗಡ ಮಂಜು ರಘುನ ಡೇಂಜರ್ ಝೋನ್ ಗೆ ನೂಕಿ ಸೇಫ್ ಆದ್ರು. ಮತ್ತೊಂದ್ ಕಡೆ ಮೊಗ್ಗಿನ ಮನಸ್ಸಿನ ಬೆಡಗಿ ನಿಧಿ ಸುಬ್ಬಯ್ಯ ಬದಲು ಡೇಂಜರ್ ಝೋನ್ ಗೆ ಧುಮುಕಿದ್ದಾರೆ.

ಆಟದಲ್ಲಿ ನಿಧಿ ಅವರು ಶುಭಾ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡು ಸೋಲಿಸಿದರು. ಬಳಿಕ ನಾಮಿನೇಷನ್ ಕತ್ತಿಯನ್ನ ಶುಬಾಗೆ ವರ್ಗಾವಣೆ ಮಾಡಿದ್ರು. ಆ ಮೂಲಕ ನಿಧಿ ಅವರು ನಾಮಿನೇಟ್‌ನಿಂದ ಬಚಾವಾದರು. ಶುಭಾ ಪೂಂಜಾ ಡೇಂಜರ್ ಝೋನ್ ಗೆ ಕಾಲಿಟ್ಟರು. ಈ ಮೂಲಕ ಈ ವಾರದ ಎಲಿಮೇಷನ್ ರೌಂಡ್ ಗೆ ರಘು ಗೌಡ, ವಿಶ್ವ,  ಶುಭಾ ಪೂಂಜಾ, ಧನುಶ್ರಿ ಹಾಗೂ ನಿರ್ಮಲಾ ಅವರು ನಾಮಿನೇಟ್ ಆಗಿದ್ದಾರೆ.  ಸದ್ಯ  ಮೊದಲ ವಾರವೇ ಮನೆಯಿಂದ ಯಾವ ಸ್ಪರ್ಧಿ ಆಚೆ ಬರಲಿದ್ದಾರೆ. ಜನ ಯಾರ ಕೈಬಿಡ್ತಾರೆ. ಯಾರ ಕೈ ಹಿಡಿಯಲಿದ್ದಾರೆ ಅನ್ನೋದನ್ನ ವೀಕೆಂಡ್ ವರೆಗೂ ಕಾದು ನೋಡಬೇಕಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd