ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!

1 min read

ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್..! ಬ್ರೋ ಗೌಡ ಪ್ರೀತಿಗೆ ಬಂಡೆಯಾದ್ರಾ ಮಂಜು..!

ಬಿಗ್ ಬಾಸ್ ಸೀಸನ್ 8 ಆರಂಭವಾಗಿ ಇನ್ನೂ 3 ದಿನಗಳಷ್ಟೇ ಕಳೆದಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ್ ಕಹಾನಿ ಶುರುವಾಗಿದೆ. ಹೌದು ಈ ವಾರದ ಕ್ಯಾಪ್ಟನ್ ಆಗಿರೋ ಬ್ರೋ ಗೌಡ ಮನೆಯಲ್ಲಿ ಒಂದು ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಬ್ರೋ ಗೌಡ ಈ ಬಗ್ಗೆ ಹಲವರ ಬಳಿ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಬ್ರೋ ಗೌಡ ತಮ್ಮ ಪ್ರೀತಿಯ ವಿಚಾರವನ್ನ ಮೊದಲ ಬಾರಿಗೆ ನಿರ್ಮಲಾ ಹಾಗೂ ಗೀತಾ ಜೊತೆಗೆ ಹೇಳಿಕೊಂಡಿದ್ದರು. ಇದ್ರಿಂದ ಮೂವರ ಮೇಲೆ ಅನುಮಾನ ಮೂಡಿತ್ತು. ಅಂದ್ರೆ ದಿವ್ಯಾ ಉರುಡುಗ, ಧನುಶ್ರೀ, ಹಾಗೂ ದಿವ್ಯಾ ಸುರೇಶ್ ಇರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಧನುಶ್ರೀ ನನ್ನನ್ನ ಅಣ್ಣ ಎಂದು ಕರೆದಿದ್ದಾರೆ ಎಂದಿದ್ದರು.  ಇನ್ನುಳಿದವರು ದಿವ್ಯಾ ಉರುಡುಗ , ದಿವ್ಯಾ ಸುರೇಶ್. ಆದ್ರೆ ಯಾರೆಂಬುದನ್ನ ಬ್ರೋ ಗೌಡ ಸ್ಪಷ್ಟಪಡಿಸಿಲ್ಲ.

ಆದ್ರೆ ಬ್ರೋ ಗೌಡ ಅವರು  ಹೇಳ್ತಿರೋದನ್ನ ನೊಡಿದ್ರೆ ಅವರಿಗೆ ಲವ್ ಆಗಿರೋದು ದಿವ್ಯಾ ಸುರೇಶ್ ಅವರ ಮೇಲೆಯೇ ಅನ್ನೋ ಅನುಮಾನಗಳು , ಚರ್ಚೆಗಳು ಶುರುವಾಗಿವೆ. ಬ್ರೋ ಗೌಡ ಪ್ರೀತಿಸುತ್ತಿರುವ ಆ ಹುಡುಗಿ ದಿವ್ಯಾ ಸುರೇಶ್ ಎಂದೇ ನೆಟ್ಟಿಗರು ಸಹ ಮಾತನಾಡಿಕೊಳ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಅಸಲಿಗೆ ಬ್ರೋ ಗೌಡ ಪ್ರೀತಿಸುತ್ತಿರೋದು ಯಾರನ್ನ ಎನ್ನುವ ವಿಚಾರ ಗೊತ್ತಾಗಲಿದೆ. ಒಂದು ವೇಳೆ ದಿವ್ಯಾ ಸುರೇಶ್  ಅವರೇ ಬ್ರೋ ಗೌಡ ಪ್ರೀತಿಸುತ್ತಿರುವ ಹುಡುಗಿಯಾದ್ರೆ ಆಗ ಇವರ ಪ್ರೀತಿಗೆ ಪಾವಗಡ ಮಂಜು ಅವರು ಬಂಡೆಯಾಗಬಹುದಾ ಎಂಬ ಗುಸುಗುಸು ಆರಂಭವಾಗಿದೆ.

ಪಾವಗಡ ಮಂಜು ಬಿಗ್ ಬಾಸ್ ಆರoಭವಾದ ಮೊದಲ ದಿನದಿಂದಲೇ ದಿವ್ಯಾ ಜೊತೆಗೆ ಫ್ಲರ್ಟ್ ಮಾಡಲು ಆರಂಭಿಸಿದ್ದಾರೆ. ದಿವ್ಯಾ ಹಾಗೂ ಮಂಜು ನಡುವಿನ ಕನೆಕ್ಷನ್ ಸಹ ದಿನೇ ದಿನೇ ಬಲವಾಗ್ತಿದೆ.  ಇದು ಸಾಕಷ್ಟು ಗಾಸಿಫ್ ಗಳಿಗೂ ಎಡೆ ಮಾಡಿಕೊಟ್ಟಿದೆ. ಇವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎಂದೇ ಬಿಂಬಿಸಲಾಗ್ತಿದೆ.

ಸದ್ಯ ಈ ಸೀಸನ್ ನಲ್ಲಿ ತ್ರಿಕೋನ ಲವ್ ಸ್ಟೋರಿಯೊಂದು ಶುರುವಾಗ್ತಿದ್ದು,  ಮುಂದಿನ ದಿನಗಳಲ್ಲಿ ಸಾಕಷ್ಟು ಟ್ವಿಸ್ಟ್ ಗಳನ್ನ ಪಡೆಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಬ್ರೋ ಗೌಡ ಒನ್ ಸೈಡ್ ಲವ್ ಸಕ್ಸಸ್ ಆಗುತ್ತಾ. ಇವರು ಪ್ರೀತಿ ಮಾಡ್ತಿರೋ ಹುಡುಗಿ ದಿವ್ಯಾ ಸುರೇಶ್ ಆದ್ರೆ , ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡ್ತಾರಾ ದಿವ್ಯಾ. ಅಥವಾ ಬ್ರೋ ಗೌಡ ಲವ್ ಸ್ಟೋರಿಗೆ ಮಂಜು ಫುಲ್ ಸ್ಟಾಪ್ ಇಡ್ತಾರಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಾಗಿದೆ.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಟ್ರಯಾಂಗಲ್ ಲವ್ ಸ್ಟೋರಿಗಳು, ಪ್ರೇಮಕಥೆಗಳು ಬೆಳಕಿಗೆ ಬಂದಿವೆ. ಅಷ್ಟೇ ಅಲ್ಲ ಬಿಗ್ ಬಾಸ್ ನಲ್ಲಿ ಹುಟ್ಟಿದ ಪ್ರೀತಿ ಮದುವೆಯಲ್ಲಿಯೂ ಅಂತ್ಯಗೊಂಡಿದೆ. ಅದಕ್ಕೆ ಉದಾಹರಣೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಇನ್ನೂ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಪ್ರಚಾರಕ್ಕೆ ಬಂದಿದ್ದ ಟ್ರಯಾಂಗಲ್ ಲವ್ ಸ್ಟೋರಿ ಬಗ್ಗೆಯೂ ಎಲ್ರಿಗೂ ಗೊತ್ತೇ ಇದೆ. ಭುವನ್ ಸಂಜನಾ ಹಾಗೂ ಪ್ರಥಮ್ ಒಂದು ಟೈಮ್ ನಲ್ಲಿ ಸಿಕ್ಕಾಪಟ್ಟೆ ಗಾಸಿಪ್ ಗಳಿಗೆ ಕಾರಣರಾಗಿದ್ದರು.

ನಿಮಗೇನು ಅನ್ನಿಸುತ್ತೆ. ಬ್ರೋ ಗೌಡ ಪ್ರೀತಿ ಮಾಡುತ್ತಿರುವ ಹುಡುಗಿ ಯಾರಿರಬಹುದು..?

Bigg Boss 8 : ಧನುಶ್ರೀ ಮೇಕಪ್ ತೆಗೆಯೋಕೆ 1 ವರ್ಷ ಸ್ನಾನ ಮಾಡಬೇಕು – ಸಂಬರಗಿ

ಬಿಗ್ ಬಾಸ್ 8 : ಧನುಶ್ರೀ – ದಿವ್ಯಾ ನಡುವೆ ಕಾಳಗ , ಗಾಯಗೊಂಡ ದಿವ್ಯಾ..!

ಹಿಂದಿಗೆ ‘MAY I COME IN’ ಅಂತಿದ್ದಾರೆ ರಾಖಿ ಭಾಯ್..!   

‘ತೂಫಾನ್’ ಜೊತೆ ಟಕ್ಕರ್ ಮಾಡ್ತಾರಾ ‘ಸಲಾರ್’ : ಕೆಜಿಎಫ್ 2 ಅಭಿಮಾನಿಗಳಿಗೆ ಅನ್ಯಾಯ..? 

ಇನಿಯನ ಜೊತೆ ತಂದೆ ಕೈಗೆ ಸಿಕ್ಕಿಬಿದ್ದ ಪುತ್ರಿ : ತಲೆ ಕಡಿದು ಠಾಣೆವರೆಗೂ ಮೆರವಣಿಗೆ ಮಾಡಿದ ಅಪ್ಪ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd