ಸೌತ್ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರು…
ದಕ್ಷಿಣ ಚಿತ್ರರಂಗದಲ್ಲಿ ನಟಿಮಣಿರು ಹೀರೋಗಳಷ್ಟು ಸಂಭಾವನೆ ಪಡೆಯದಿದ್ದರೂ ತಕ್ಕಮಟ್ಟಿಗೆ ಸಂಭಾವನೆ ವಿಚಾರದಲ್ಲಿ ಸದ್ದು ಮಾಡುತ್ತಾರೆ. ಸೌತ್ ಸಿನಿ ದುನಿಯಾಯದಲ್ಲಿ ಬಾಹುಬಲಿಯ ದೇವಸೇನಾ ಅನುಷ್ಕಾ ಶೆಟ್ಟಿಯಿಂದ ನಯನತಾರಾ-ಸಮಂತಾವರೆಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರ ಬಗ್ಗೆ ನಾವು ತಿಳಿಸಿಕೊಡ್ತೀನಿ.
ಒಂದು ಕಾಲದಲ್ಲಿ ಯೋಗ ಟೀಚರ್ ಆಗಿದ್ದ ಅನುಷ್ಕಾ ‘ಬಾಹುಬಲಿ: ದಿ ಬಿಗಿನಿಂಗ್’ ಚಿತ್ರದ ಮೂಲಕ ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ದೇವಸೇನಾ ಪಾತ್ರದಲ್ಲಿ ಅದ್ಬುತ ನಟನೆಗಾಗಿ ಭಾರತದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ. ದಕ್ಷಿಣದ ಟಾಪ್ ನಟಿಯಾಗಿರು ಸ್ವೀಟಿ ಸಂಭಾವನೆಯಲ್ಲಿ ಮೊದಲಿಗರಾಗಿದ್ದಾರೆ. ಸಿನಿಮಾ 1ಕ್ಕೆ 4.5 ಕೋಟಿ ಸಂಭಾವಾನೆ ಪಡೆಯುತ್ತಾರೆ.
ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಅನುಷ್ಕಾ ಹೊರೆತಾಗಿ’ ರಾಧೇಶ್ಯಾಮ್’ ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಪೂಜಾ ಹೆಗಡೆ ಸೌತ್ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇಂದು ಸಿನಿಮಾದ ಸಂಭಾವನಯಾಗಿ 3.5 ಕೋಟಿ ಪಡೆಯುತ್ತಾರೆ.
ಪುಷ್ಪ: ದಿ ರೈಸ್ ಚಿತ್ರದ ಯಶಸ್ಸಿನೊಂದಿಗೆ ಅದರ ನಾಯಕಿ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು 2 ಕೋಟಿ ಸಂಭಾವನೆ ಪಡೆದಿದ್ದಾರೆ ಮತ್ತು ಈಗ ರಶ್ಮಿಕಾ ಚಿತ್ರದ ಭಾಗ 2 ಗೆ 3 ಕೋಟಿ ರೂಪಾಯಿಗಳನ್ನು ಕೇಳಿದ್ದಾರೆ.
ಕಾಜಲ್ ಅಗರವಾಲ್ ಒಂದು ಕಾಲದಲ್ಲಿ ಟಾಲಿವುಡ್ ಟಾಪ್ ಮೋಸ್ಟ್ ಚಿತ್ರಗಳಲ್ಲಿ ಕಾಣಿಸಿಕೊಂಡಾಕೆ. ಕಾಲಿವುಡ್, ಬಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಮದುವೆಯ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಪ್ರಸ್ತುತ ಹೆರಿಗೆ ವಿರಾಮದಲ್ಲಿದ್ದಾರೆ. ಚಿತ್ರವೊಂದಕ್ಕೆ ಇವರ ಸಂಭಾವನೆ 3 ಕೋಟಿ
ಬಾಲಿವುಡ್ನಲ್ಲಿ ಅಷ್ಟಾಗಿ ಮಿಂಚದಿದ್ದರೂ ಸೌತ್ ಚಿತ್ರದಲ್ಲಿ ಸೆನ್ಸೇಷನ್ ಅನಿಸಿಕೊಂಡಿರುವ ಶೃತಿ ಹಾಸನ್ 2.5 ಕೊಟಿ ಮೊತ್ತದ ಭಾರಿ ಸಂಭಾವನೆ ಪಡೆಯುತ್ತಾರೆ.
ನಯನತಾರಾ ಕಾಲಿವುಡ್ನ ಸೂಪರ್ಸ್ಟಾರ್ ಫೋರ್ಬ್ಸ್ ಇಂಡಿಯಾದ 2018 ರ ಸೆಲೆಬ್ರಿಟಿ ಪಟ್ಟಿಯಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತದ ಏಕೈಕ ನಟಿ ನಯನತಾರಾ. ಇವರು ಚಿತ್ರವೊಂದಕ್ಕೆ 2 ಕೋಟಿ ಪಡೆಯುತ್ತಾರೆ.
ತಮನ್ನಾ ಭಾಟಿಯಾ ದಕ್ಷಿಣ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಬಾಲಿವುಡ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಬಾಹುಬಲಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ತಮನ್ನ ಸಹ 2 ಕೋಟಿ ಸಂಭಾವನೆ ಪಡೆಯುತ್ತಾರೆ.
ದಕ್ಷಿಣದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ‘ಫ್ಯಾಮಿಲಿ ಮ್ಯಾನ್ 2’ ಮೂಲಕ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಎಂಟ್ರಿ ಕೊಟ್ಟಿದ್ದಾರೆ, ಇತ್ತೀಚೆಗೆ ಪುಷ್ಪದ ಸ್ಪೆಷಲ್ ಸಾಂಗ್ ಗೆ ಸೊಂಟ ಬಳುಕಿಸಿ ಪಡ್ಡೆಗಳ ಹೃದಯ ಕದ್ದಿರುವ ಸಮಂತ ಚಿತ್ರವೊಂದರಲ್ಲಿ ಕೆಲಸ ಮಾಡಲು 2 ಕೋಟಿ ರೂ. ಪಡೆಯುತ್ತಾರೆ ಎನ್ನುವ ಮಾತಿದೆ.
‘ಮಹಾನಟಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಸಹ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಗೆ ಸೇರಿದ್ದಾರೆ ಇವರು ಸಹ 2 ಕೋಟಿ ರಪಾಯಿ ಚಾರ್ಜ್ ಮಾಡುತ್ತಾರೆ.