Tumkur | ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ : ಸ್ನೇಹಿತರಿಂದಲೇ ಕೊಲೆ
ತುಮಕೂರು : ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕುಡಿಸಿ ಸ್ನೇಹಿತನನ್ನೆ ಕೊಲೆಗೈದಿದ್ದ ಆರೋಪಿಗಳನ್ನು ತುಮಕೂರಿನ ಕೊಡಿಗೇನಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಛಲಪತಿ, ನಾಗೇಶ್, ಶಿವಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಸ್ನೇಹಿತರ ನಡುವಿನ ಮೊಲ ಬೇಟೆ ವಿಚಾರಕ್ಕೆ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯ ಕಂಡಿದೆ.
ಈ ಹಿಂದೆ ಛಲಪತಿ ಹಾಗೂ ಸುದೀಪ್ ಮೊಲದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ರು.
ಗಲಾಟೆ ವೇಳೆ ಸುದೀಪ್, ಛಲಪತಿ ಮೇಲೆ ಹಲ್ಲೆ ಮಾಡಿದ್ದ. ಇದೇ ದ್ವೇಷದ ಮೇಲೆ ಸುದೀಪ್ ಕೊಲೆಗೆ ಛಲಪತಿ ಸ್ಕೇಚ್ ಹಾಕಿದ್ದರು.
ಅದರಂತೆ ಕಳೆದ ತಿಂಗಳ 25 ರಂದು ಸುದೀಪ್, ನಾಗೇಶ್, ಶಿವಕುಮಾರ್, ಛಲಪತಿ. ನಾಲ್ವರು ಒಟ್ಟಿಗೆ ಮೊಲದ ಬೇಟೆಗೆ ಹೋಗಿದ್ದರು.

ಸುದೀಪ್, ಛಲಪತಿ, ನಾಗೇಶ್, ಶಿವಕುಮಾರ್ ಎರಡು ಬೈಕ್ ನಲ್ಲಿ ಬಂದಿದ್ರು. ಶಿವಕುಮಾರ್ ಹಾಗೂ ನಾಗೇಶ್ ನಾಡ ಬಂದೂಕು ಹಿಡಿದು ಮೊಲ ಬೇಟೆಯಾಡಲು ಬೆಟ್ಟದ ಸಾಲಿನ ಒಳಗಡೆ ಹೋಗಿದ್ದಾರೆ.
ಆದರೆ ಸುದೀಪ್ ಹಾಗೂ ಛಲಪತಿ ಇಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು. ಎಣ್ಣಿ ನಶೆಯಲ್ಲಿ ಗಲಾಟೆ ವಿಚಾರವನ್ನ ಎತ್ತಿಕೊಂಡಿದ್ದು, ಛಲಪತಿ, ಸುದೀಪ್ ತಲೆಗೆ ಮೂರ್ನಾಲ್ಕು ಬಾರಿ ನಾಡ ಬಂದೂಕಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಬಳಿಕ ಛಲಪತಿ, ನಾಗೇಶ್, ಶಿವಕುಮಾರ್ ಮೂವರು ಸೇರಿ ಸುದೀಪ್ ಮೃತದೇಹವನ್ನ ರಸ್ತೆ ಬಳಿ ಬಿಸಾಡಿ, ಪಕ್ಕದಲ್ಲಿ ಬೈಕ್ ಬಿಳಿಸಿ ಆಕ್ಸಿಡೆಂಟ್ ಸೀನ್ ಕ್ರಿಯೆಟ್ ಮಾಡಿದ್ದರು.
ರಸ್ತೆಯಲ್ಲಿ ಮೃತದೇಹ ಕಂಡ ಸ್ಥಳೀಯರೊಬ್ಬರು ಕೊಡಿಗೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ಪೊಲೀಸರು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಪಿಎಂ ರಿಪೋರ್ಟ್ ನಲ್ಲಿ ಬಯಲಾಯ್ತು ಕೊಲೆ ಎಂಬೋದು ಬಯಲಾಗಿದೆ.
ಆರೋಪಿಗಳನ್ನ ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಕೊಲೆಗೈದು ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಮೂವರು ಆರೋಪಿಗಳು ಕಂಬಿ ಹಿಂದೆ ಇದ್ದಾರೆ.








