ಅಸ್ಸಾಂ | ಎರಡು ಬೋಟ್ ಗಳ ನಡುವೆ ಡಿಕ್ಕಿ, ಒಬ್ಬರು ಸಾವು
ಅಸ್ಸಾಂ : ಎರಡು ಬೋಟ್ ಮಧ್ಯೆ ಡಿಕ್ಕಿ ಸಂಭವಿಸಿ 35 ಮಂದಿ ಕಾಣೆಯಾಗಿದ್ದು, ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಅಸ್ಸಾಂನ ಜೊರ್ಹಾತ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ನಿಮತಿಘಾಟ್ ನಲ್ಲಿ ನಡೆದಿದೆ.
ಎರಡು ಬೋಟ್ ಗಳ ಮಧ್ಯೆ ಡಿಕ್ಕಿ ಸಂಭವಿಸುತ್ತಿದ್ದಂತೆ ಸುಮಾರು 120ಕ್ಕೂ ಹೆಚ್ಚು ಮಂದಿ ನೀರೊಳಗೆ ಬಿದ್ದಿದ್ದು, ಈ ವೇಳೆ ಹಲವರು ಈಜಿ ದಡ ಸೇರಿದ್ದಾರೆ.
ಇನ್ನುಳಿದಂತೆ ಬಹುತೇಕರನ್ನು ರಕ್ಷಣೆ ಮಾಡಲಾಗಿದೆ. ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಮುಂದುವರೆದಿದ್ದು, ಖಾಸಗಿ ಬೋಟ್ ಆದ ‘ಮಾ ಕಮಲಾ’ ಮತ್ತು ರಾಜ್ಯದ ಒಳನಾಡು ಜಲಸಾರಿಗೆ ಟ್ರಿಪ್ಕಾಯ್ ಬೋಟ್ ಮಧ್ಯೆ ಡಿಕ್ಕಿ ಸಂಭವಿಸಿದೆ.