ಫೆಬ್ರವರಿ 1 ಕ್ಕೆ ಕೇಂದ್ರ ಬಜೆಟ್ ಮಂಡನೆ..!
ನವದೆಹಲಿ : ಇದೇ ತಿಂಗಳ 31 ರಿಂದ ಸಂಸತ್ ನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.

ಸಂಸತ್ ನ ಬಜೆಟ್ ಅಧಿವೇಶದ ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಮರು ದಿನ ಕೇಂದ್ರ ಬಜೆಟ್ ಮಂಡನೆ ಆಗಲಿದೆ.
ಇನ್ನು ಈ ಬಾರಿಯ ಸಂಸತ್ ಅಧಿವೇಶನ 2 ಭಾಗಗಳಲ್ಲಿ ನಡೆಯಲಿದೆ.
ಮೊದಲ ಭಾಗ ಫೆಬ್ರವರಿ 11 ರಂದು ಮುಕ್ತಾಯವಾಗಲಿದ್ದು, 2ನೇ ಭಾಗ ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.