ಸಿಎಂ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶದ ಉನ್ನಾವೊದಲ್ಲಿ ದಲಿತ ಮಹಿಳೆಯ ಸಾವು ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರಕರಣದ ಬಗ್ಗೆ ಈ ಹಿಂದೆಯೇ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದಾರೆ.
ಪ್ರಿಯಾಂಕಾ ಟ್ವೀಟ್ ಮಾಡಿ, “ಉನ್ನಾವೋದಲ್ಲಿ ನಡೆದಿರುವುದು ಉತ್ತರ ಪ್ರದೇಶಕ್ಕೆ ಹೊಸದಲ್ಲ. ಆಡಳಿತ ಪಕ್ಷ ತಾಯಿಯ ಮಾತನ್ನು ಕೇಳಲಿಲ್ಲ. ಬದಲಾಗಿ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯವರು ಜನವರಿಯಲ್ಲಿ ತಾಯಿಯ ಮಾತನ್ನು ಏಕೆ ಕೇಳಲಿಲ್ಲ ಎಂದು ಉತ್ತರಿಸಬೇಕು? ಎಂದಿದ್ದಾರೆ.
ಉನ್ನಾವೋದ ಸದರ್ ಕೊಟ್ವಾಲಿ ಪ್ರದೇಶದ ಕಾನ್ಶಿರಾಮ್ ದಲಿತ ಯುವತಿ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದರು. ಅವಳ ತಾಯಿ ಅವಳನ್ನು ಎಲ್ಲೆಡೆ ಹುಡುಕಿದರೂ ಆಕೆಯ ಪತ್ತೆಯಾಗಿರಲಿಲ್ಲ. ಡಿಸೆಂಬರ್ 8ರಂದು ಕಾಣೆಯಾದ ದೂರನ್ನು ದಾಖಲಿಸಲಾಗಿತ್ತಾದರೂ, ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯುವತಿಯ ತಾಯಿ ಜನವರಿ 24ರಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ನಂತರ ಎಚ್ಚೆತ್ತ ಪೊಲೀಸರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಳಿತದಲ್ಲಿ ಸಚಿವರಾಗಿದ್ದ ರಾಜೋಲ್ ಸಿಂಗ್ನನ್ನು ಬಂಧಿಸಿದ್ದರು. ಇದೀಗ ಅವರ ಜಮೀನಿನಲ್ಲೇ ಆಕೆಯ ಮೃತದೇಹ ಪತ್ತೆಯಾಗಿದೆ.








