ಅಕ್ಟೋಬರ್ 2ಕ್ಕೆ ಅಮೇಜಾನ್ ಪ್ರೈಂನಲ್ಲಿ “ನಿಶ್ಯಬ್ಧಂ” ರಿಲೀಸ್..!
ಕನ್ನಡದ ಸ್ವೀಟಿ ಅನುಷ್ಕಾ ಹಾಗೂ ಮಾಧವನ್ ಒಟ್ಟಾಗಿ ನಟಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಚಿತ್ರ ನಿಶ್ಯಬ್ಧಂ ಸದ್ಯ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಗೆ ರೆಡಿಯಾಗಿದೆ. ತಮಿಳು, ತೆಲುಗು, ಹಿಂದಿ, ಮಳಯಾಳಂ, ಇಂಗ್ಲಿಷ್. ಒಟ್ಟು ಐದು ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ. ಈಗಾಗಲೇ ಈ ಚಿತ್ರದ ರೈಟ್ಸ್ ಅಮೇಜಾನ್ ಪ್ರೈಮ್ ಗೆ ಸೇಲ್ ಆಗಿದ್ದು, ಅಕ್ಟೋಬರ್ 2 ಕ್ಕೆ ರಿಲೀಸ್ ಆಗಲಿದೆ.
ಡ್ರಗ್ಸ್ ಕೇಸ್: ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್..!
ಬೆಂಗಳೂರು: ಡ್ರಗ್ಸ್ ಕೇಸ್ ಸಂಬಂಧ ನಟ ಹಾಗೂ ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ಸ್ಯಾಂಡಲ್ವುಡ್ನಲ್ಲಿ ಮತ್ತೆ ತಲ್ಲಣ ಸೃಷ್ಟಿಯಾಗಿದೆ. ಜೊತೆಗೆ ಮತ್ತೊಬ್ಬ ನಟ ಸಂತೋಷ್ಕುಮಾರ್ ಹಾಗೂ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಸಿಸಿಬಿ ನೋಟಿಸ್ ಜಾರಿಯಾಗಿದೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಿಸಿಬಿ ನೋಟಿಸ್ ತಲುಪಿದ್ದು, ನಾನು ಹೈದರಾಬಾದ್ನಲ್ಲಿದ್ದೇನೆ. ನಾಳೆ ವಿಚಾರಣೆಗೆ ಹಾಜರಾಗ್ತೇನೆ ಎಂದು ಅಕುಲ್ ಬಾಲಾಜಿ ಹೇಳಿಕೊಂಡಿದ್ದಾರೆ.
ಡ್ರಗ್ಸ್ ಕೇಸ್ : ಆರ್.ವಿ ದೇವರಾಜ್ ಪುತ್ರನಿಗೆ ಸಿಸಿಬಿ ನೋಟಿಸ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ ಪುತ್ರ ಹಾಗೂ ಸುಧಾಮನಗರ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಸಿಸಿಬಿ ಪೊಲೀಸರು ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ನೋಟಿಸ್ ಮೂಲಕ ಶಾಕ್ ನೀಡಿದ್ದಾರೆ.
ಡ್ರಗ್ಸ್ ಕೇಸ್: ಬಿಗ್ಬಾಸ್ ಖ್ಯಾತಿಯ ಸಂತೋಷ್ ಕುಮಾರ್ಗೂ ಸಿಸಿಬಿ ನೋಟಿಸ್
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಬಿಗ್ಬಾಸ್ ಖ್ಯಾತಿಯ ಸಂತೋಷ್ ಕುಮಾರ್ಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಸದ್ಯ ಮೈಸೂರಿನಲ್ಲಿನಲ್ಲಿರುವ ಸಂತೋಷ್ ಕುಮಾರ್ ನೋಟಿಸ್ ತಲುಪಿದ್ದು, ನಾಳೆ ಸಿಸಿಬಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಕಬ್ಜದಲ್ಲಿ ಉಪ್ಪಿ ಗೆಟಪ್ ಗೆ ಅಭಿಮಾನಿಗಳು ಫಿದಾ..!
ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜನ್ಮದಿನದ ಸಂಭ್ರಮ. ಇನ್ನೂ ಉಪೇಂದ್ರ ಅವರಿಗೆ ಡಾಲಿ ಧನಂಜಯ್, ದುನಿಯಾ ವಿಜಯ್, ನವರಸನಾಯಕ ಜಗ್ಗೇಶ್, ರಚಿತಾ ರಾಮ್, ಹರಿಪ್ರಿಯ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ಅಲ್ಲದೇ ರಿಯಲ್ ಸ್ಟಾರ್ ಬರ್ತ್ ಡೇ ಪ್ರಯುಕ್ತ ಅವರ ಹೊಸ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದ್ದು, ಉಪ್ಪಿ ಅವರ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಿಷ್ಣುದಾದನ 70ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ತಾರೆಯರು
ಇಂದು ಚಂದನವನದ ಅಪ್ಪಾಜಿ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಜನ್ಮದಿನ ಈ ಹಿನ್ನೆಲೆ ವಿಷ್ಣು ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ ಮಾಡಿದ್ದಾರೆ. ಅಭಿನವ ಭಾರ್ಗವ ವಿಷ್ಣುದಾದನಿಗೆ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ಸಚಿವ ಸುದಾಕರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.