ರೆಸಾರ್ಟ್ ಬಗ್ಗೆ ಮಾತನಾಡಿದವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಉಪ್ಪಿ..!
ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಸಿನಿಮಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.. ಇದ್ರ ಜೊತೆಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಡವರ , ರೈತರ , ಸಿನಿಮಾ ಕಾರ್ಮಿಕರ ನೆರವಿಗೆ ಬ=ನಿಂತಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.. ಆದ್ರೆ ಉಪೇಂದ್ರ ಅವರ ವಿರುದ್ಧ ಕೆಲ ಟ್ರೋಲ್ ಗಳು ಕಂಡುಬಂದಿವೆ.. ಹೌದು.. ಉಪೇಂದ್ರ ಅವರ ಮಾಲೀಕತ್ವದ ರುಪ್ಪೀಸ್ ರೆಸಾರ್ಟ್ನ್ನ ನಿರ್ಮಿಸಲು ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗಿತ್ತು ಎಂದು ನೆಟ್ಟಿಗರೊಬ್ಬರು ವೀಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಉಪೇಂದ್ರರವರು ವಿಡಿಯೋ ಮೂಲಕ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ‘ದಯವಿಟ್ಟು ತಾವು ಏನಾದರೂ ಹೇಳುವ ಮುನ್ನ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿ, ಸರ್ಕಾರ ನಡೆಸಿದ್ದ ಹರಾಜು ಪ್ರಕ್ರಿಯೆಯಲ್ಲಿ ವಿಲೇಜ್ ಎಂಬ ಹೆಸರಿನ ರೆಸಾರ್ಟ್ನನ್ನು 13-14 ವರ್ಷಗಳ ಹಿಂದೆ ಖರೀಸಿದ್ದು, ಅದನ್ನು ಖರೀದಿಸುವ ಮುನ್ನವು ರೆಸಾರ್ಟ್ ಆಗಿಯೇ ಇತ್ತು. ಅದನ್ನೇ ನಂತರ ರುಪ್ಪೀಸ್ ರೆಸಾರ್ಟ್ ಆಗಿ ಹೆಸರನ್ನು ಬದಲಿಸಿದ್ದೇವೆ’ ಎಂದು ಹೇಳಿದ್ದಾರೆ. ಜಮೀನಿನ ವಿಚಾರಕ್ಕೆ ಬಂದರೆ ಶಿವಣ್ಣನವರಿಂದ ಜಮೀನನ್ನು ಖರೀದಿಸಿದ್ದು, ಇಂದಿಗೂ ಅಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಅಲ್ಲದೇ ಆ ಸ್ಥಳದಲ್ಲಿ ತರಕಾರಿ ಬೆಳೆಯುತ್ತಿರುವುದನ್ನು ಕೂಡ ನಾನು ಹಂಚಿಕೊಂಡಿದ್ದೇನೆ. ನಿಮಗೇನಾದರೂ ಅನುಮಾನ ವಿದ್ದರೆ ರೆಸಾರ್ಟ್ ಹಾಗೂ ಜಮೀನಿಗೆ ಬಂದು ನೋಡಿ ಎಂದು ಉತ್ತರಿಸಿದ್ದಾರೆ. ಈ ಮೂಲಕ ಗೊಂದಲಗಳು ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉಪ್ಪಿ ಉತ್ತರಿಸಿದ್ದಾರೆ.
https://www.instagram.com/tv/CPVdZChgHDl/?utm_source=ig_embed&ig_rid=ac1bf66e-caf3-4de5-be3c-2d20765385d7
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








