ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯ ಮೇಲೆ ಪಾಪಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆಯೊಂದು ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಇಂತಹ ಹೇಯ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ತಲೆಯ ಮೇಲೆ ಯುವಕನೊಬ್ಬ ಒದೆಯುತ್ತಿರುವ ದೃಶ್ಯ ಇದೆ. ಅಲ್ಲದೇ, ವಿಡಿಯೋದಲ್ಲಿ ಯುವಕ ಹಾಗೂ ಆತನ ಸ್ನೇಹಿತರು ವ್ಯಕ್ತಿಯನ್ನು ನಿಂದಿಸಿದ್ದಾರೆ. ವಿಡಿಯೋ ವೈರಾಲ್ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಎನ್ನಲಾಗಿದೆ.
ಈ ಕುರಿತು ಆಗ್ರಾದ ಯಾವುದೇ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ದೂರು ದಾಖಲಿಸಿಲ್ಲ. ಬಂಧಿತನನ್ನು ಆದಿತ್ಯ ಎನ್ನಲಾಗಿದೆ. ವೀಡಿಯೋದಲ್ಲಿದ್ದ ಇತರ ಯುವಕರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬಂಧಿತ ಯುವಕ ಆದಿತ್ಯನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.