ಮಿಸ್ ಯೂನಿವರ್ಸ್ 2021 : ಅತ್ಯಂತ ಕಿರಿಯ ಜಡ್ಜ್ ಆಗಿ ಮಿಂಚಿದ ಊರ್ವಶಿ , ಕಿರೀಟ ಮುಡಿಗೇರಿಸಿಕೊಂಡ ಭಾರತದ ಚೆಲುವೆ..!
ಇಸ್ರೇಲ್ : ದರ್ಶನ್ ನಟನೆಯ ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದು ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಊರ್ವಶಿ ರೌಟೇಲಾ ಪ್ರಸ್ತುತ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ.. ಮಿಸ್ ಯೂನಿವರ್ಸ್ 2021 ರ ಜಡ್ಜ್ ಆಗಿ ಊರ್ವಶಿ ಅತಿ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ..
ಊರ್ವಶಿ 2015ರಲ್ಲಿ ಮಿಸ್ ದಿವಾ ಯೂನಿವರ್ಸ್ ಗೌರವವನ್ನು ಗಳಿಸಿದ್ದರು.. ಮಿಸ್ ಯೂನಿವರ್ಸ್ನ 70 ನೇ ಆವೃತ್ತಿಯ ತೀರ್ಪುಗಾರ್ತಿಯಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇನ್ನೊಂದು ಹೆಮ್ಮೆಯ ವಿಚಾರ ಅಂದ್ರೆ ಈ ಸ್ಪರ್ಧೆಯಲ್ಲಿ ನಮ್ಮ ಭಾರತದ ಬೆಡಗಿಗೆ ವಿಶ್ವ ಸುಂದರಿ ಪಟ್ಟ ಒಲಿದು ಬಂದಿದೆ.. ಅಂತಿಮವಾಗಿ ಗೆದ್ದವರ ಹೆಸರು ಹೇಳುವಾಗ ಿಂಡಿಯಾ ಎಂಬ ಘೋಷಣೆಯೊಂದಿಗೆ ಒಂದೆಡೆ ಸ್ಪರ್ಧಿ ಹರ್ನಾಜ್ ಮತ್ತೊಂದೆಡೆ ಜಡ್ಜ್ ಆಗಿದ್ದ ಊರ್ವಶಿ ಖುಷಿಗೆ ಎಮೋಷನಲ್ ಆಗಿದ್ದಾರೆ.. ಈ ವಿಡಿಯೋ ಸದ್ಯ ವೈರಲ್ ಆಗ್ತಿದೆ..
ಭಾರತೀಯರು ಕೂಡ ಹೆಮ್ಮೆಪಡ್ತಾಯಿದ್ದಾರೆ.. ಊರ್ವಶಿ ಹಾಗೂ ಹರ್ನಾಜ್ ಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಸ್ಪರ್ಧೆ ಮುಗಿದು ಕ್ರೌನ್ ಸೆರಮನಿ ನಂತರ ಊರ್ವಶಿ ಹಾಗೂ ಹರ್ನಾಜ್ ಇಬ್ರೂ ಒಟ್ಟಾಗಿ ವಿಡಿಯೋ ಮಾಡಿಕೊಂಡು ಫೋಟೋಗಳನ್ನ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ.. ಈ ವಿಡಿಯೋಗಳನ್ನ ಊರ್ವಶಿ ಹಂಚಿಕೊಂಡಿದ್ದಾರೆ.. ಅಂದ್ಹಾಗೆ ಭಾರತಕ್ಕೆ ಬರೋಬ್ಬರಿ 21 ವರ್ಷಗಳ ಬಳಿಕ ಮಿಸ್ ಯೂನಿವರ್ಸ್ ಕಿರೀಟ ಸಿಕ್ಕಿದೆ..
ಡಿಸೆಂಬರ್ 12 ರಂದು ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ 79 ದೇಶಗಳ ಸುಂದರಿಯರನ್ನ ಹಿಂದಿಕ್ಕಿ ಮಿಸ್ ಯೂನಿವರ್ಸ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ ನ ರನ್ನರ್ ಅಪ್ ಆಗಿರುವವರು ಪರಾಗ್ವೆಯ ಸುಂದರಿ ನಾಡಿಯಾ ಫೆರೇರಾ. ಮಿಸ್ ಸೌತ್ ಆಫ್ರಿಕಾ ಲಾಲೆಲಾ ಮಸ್ವಾನೆ ಎರಡನೇ ರನ್ನರ್ ಅಪ್ ಆಗಿದ್ದಾರೆ.