ಯುಎಸ್ ಓಪನ್ 2020- ಸಿಮೋನ್ ಹಲೇಪ್ ಆಡುವುದು ಡೌಟ್ ಅಂತೆ…!
ಯುಎಸ್ ಓಪನ್ ಟೆನಿಸ್ ಟೂರ್ನಿಯನ್ನು ಸಂಘಟಿಸಲು ಅಮೆರಿಕಾ ಟೆನಿಸ್ ಸಂಸ್ಥೆಯು ನಿರ್ಧರಿಸಿದೆ. ಆಗಸ್ಟ್ 31ರಿಂದ ಸೆಪ್ಟಂಬರ್ 13ರವರೆಗೆ ನಡೆಯಲಿದೆ. ಕೊರೋವಾ ವೈರಸ್ ಹಾವಳಿಯ ನಡುವೆಯೂ ಪ್ರೇಕ್ಷಕರಿಲ್ಲದೆಯೂ ಟೂರ್ನಿಯನ್ನು ಆಯೋಜಿಸಲು ಸಂಘಟಿಸಲು ತೀರ್ಮಾನಿಸಿದ್ದಾರೆ.
ಆದ್ರೆ ಟೂರ್ನಿಯಲ್ಲಿ ಅಪ್ರತಿಮ ಆಟಗರರು ಭಾಗಿಯಾಗೋದು ಅನುಮಾನವಾಗಿದೆ. ಜಾಕೊವಿಕ್, ನಡಾಲ್ ಈಗಾಗಲೇ ಟೂರ್ನಿಯಲ್ಲಿ ಆಡುವುದು ಅನುಮಾನ ಎಂದು ಹೇಳಿದ್ದಾರೆ. ರೋಜರ್ ಫೆಡರರ್ ಗಾಯದಿಂದ ಈ ವರ್ಷವೇ ಆಡುತ್ತಿಲ್ಲ. ಇದೀಗ ವಿಶ್ವದ ಎರಡನೇ ಶ್ರೇಯಾಂಕಿತೆ ಸಿಮೊನಾ ಹಲೇಪ್ ಕೂಡ ಟೂರ್ನಿಯಲ್ಲಿ ಆಡುವುದು ಸಂಶಯ ಅಂತ ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಯುಎಸ್ ಓಪನ್ ಟೂರ್ನಿಯ ಸಂಘಟಿಸಲಾಗುತ್ತಿದೆ. ಆದ್ರೆ ನಾನು ಯುಎಸ್ ಓಪನ್ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಪ್ಲಾನ್ ಮಾಡಿಕೊಂಡಿಲ್ಲ ಎಂದು ಸಿಮೋನ್ ಹಲೇಪ್ ಹೇಳಿದ್ದಾರೆ.
ಈಗಾಗಲೇ ವರ್ಷದ ನಾಲ್ಕು ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿ ಮಾತ್ರ ನಡೆದಿದೆ. ಇನ್ನುಳಿದಂತೆ ಫ್ರೆಂಚ್ ಓಪನ್ ಟೂರ್ನಿಯನ್ನು ಮುಂದೂಡಲಾಗಿದೆ. ಈ ನಡುವೆ ವಿಂಬಲ್ಡನ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಂಬಲ್ಡನ್ ಟೂರ್ನಿ ರದ್ದುಗೊಂಡಿದೆ. ಆದ್ರೆ ಯುಎಸ್ ಓಪನ್ ಟೂರ್ನಿ ಈ ಹಿಂದಿನ ವೇಳಾಪಟ್ಟಿಯಂತೆ ನಡೆಸಲು ಆಯೋಜಕರು ರೆಡಿಯಾಗಿದ್ದಾರೆ. ಆದ್ರೆ ಎಷ್ಟು ಮಂದಿ ಆಟಗಾರರು-ಆಟಗಾರ್ತಿಯರು ಭಾಗವಹಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು. ಯಾಕಂದ್ರೆ ನ್ಯೂಯಾರ್ಕ್ ನಗರದಲ್ಲಿ ಕೊರೋನಾ ಹಾವಳಿಯೂ ಜಾಸ್ತಿಯಾಗಿ ಹರಡಿತ್ತು.