ವಾಷಿಂಗ್ಟನ್: ಉಗ್ರರ ಕೃತ್ಯಕ್ಕೆ ಅಮೆರಿಕ ಅಧ್ಯಕ್ಷ ಕೆಂಡಾಮಂಡಲವಾಗಿದ್ದಾರೆ. ಮಕ್ಕಳ ಶಿರಚ್ಛೇದನದ ಫೋಟೋಗಳನ್ನು ನಾನು ಜೀವನದಲ್ಲಿ ನೋಡುತ್ತೇನೆ ಅಂದುಕೊಂಡಿರಲಿಲ್ಲ ಎಂದು ಜೋ ಬೈಡನ್ (Joe Biden) ದುಃಖ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನಲ್ಲಿ (Israel) ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಗೆ ಅವರು ತೀವ್ರ ಕೆಂಡಾಮಂಡಲ ವ್ಯಕ್ತಪಡಿಸಿದ್ದಾರೆ. ಈ ದಾಳಿಯು ಕ್ರೌರ್ಯದ ಅಭಿಯಾನವಾಗಿದೆ. ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡಿರುವ ಚಿತ್ರಗಳನ್ನು ಕಂಡು ತುಂಬಾ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಹಮಾಸ್ (Hamas) ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಅದನ್ನು ಮಾರಣಾಂತಿಕ ದಿನ ಎಂದು ಬೈಡನ್ ಕರೆದಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಲ್ಲಿಯವರೆಗೆ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಕನಿಷ್ಠ 22 ಅಮೆರಿಕನ್ನರು ಸೇರಿದ್ದಾರೆ. ನಾವು ಇಸ್ರೇಲ್ ನಾಯಕರು, ಪ್ರಪಂಚದಾದ್ಯಂತ ಹಲವಾರು ನಾಯಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.