ಉತ್ತರಖಂಡದಲ್ಲಿ ಹಿಮಕುಸಿತ : 54 ಮೃತದೇಹಗಳು ಪತ್ತೆ, 174 ಮಂದಿ ನಾಪತ್ತೆ..!
ಉತ್ತರಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 174 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚಮೋಲಿ ಪೊಲೀಸರು ಹೇಳಿದ್ದಾರೆ.
ಹಿಮಾಲಯದದಲ್ಲಿ ಹಿಮನದಿ ಸ್ಫೋಟಗೊಂಡ ಪರಿಣಾಮ ಹಿಮಪಾತವಾಗಿ ಧೌಲಿಗಂಗಾ, ಅಲಕಾನಂದ ನದಿಯಲ್ಲಿ ಪ್ರವಾಹವುಂಟಾಗಿತ್ತು. ಈ ಪ್ರವಾಹದಲ್ಲಿ ಜಲವಿದ್ಯುತ್ ಯೋಜನೆ ಮತ್ತು 5 ಸೇತುವೆಗಳು ಕೊಚ್ಚಿಹೋಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಸೇನಾಪಡೆ, ಅರೆ ಸೇನಾಪಡೆ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಭಾರತೀಯ ಷೇರುಪೇಟೆಯಲ್ಲಿ ಹೊಸ ಐತಿಹಾಸಿಕ ದಾಖಲೆ…! 52,000 ಅಂಕಕ್ಕೆ ಜಿಗಿದ ಸೆನ್ಸೆಕ್ಸ್
ಚಮೋಲಿ ಜಿಲ್ಲೆಯ ಜೋಷಿಮಠದಲ್ಲಿರುವ ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಮೃತದೇಹಗಳನ್ನು ಹೊರಕ್ಕೆ ತರುವುದು ಕಷ್ಟವಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಪಿ.ಕೆ.ತಿವಾರಿ ಹೇಳಿದ್ದಾರೆ.
ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆ
ಇಂಡೊ-ಟಿಬೆಟನ್ ಗಡಿ ಪೊಲೀಸರ ಪಡೆ ರೈನಿ ಎಂಬಲ್ಲಿ ಭಾನುವಾರ 6 ಮೃತದೇಹಗಳನ್ನು ಹೊರತೆಗೆದಿದೆ. ಅಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದ ತಪೋವನ್- ವಿಷ್ಣುಗಡ್ ಹೈಡಲ್ ಯೋಜನೆಗೆ ಹೆಚ್ಚು ಹಾನಿಯಾಗಿದೆ. ಅಲ್ಲಿದ್ದ ಅಣೆಕಟ್ಟು ಸಂಪೂರ್ಣ ಕೊಚ್ಚಿಹೋಗಿದೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಮ್ಯಾನ್ಮಾರ್ : ಮಿಲಿಟರಿ ವಾಹನಗಳ ತಿರುಗಾಟ, ಇಂಟರ್ ನೆಟ್ ಸ್ಥಗಿತ , ಉದ್ವಿಗ್ನ ಪರಿಸ್ಥಿತಿ ..!
MADE IN INDIA – ಗೂಗಲ್ ಮ್ಯಾಪ್ ಗೆ ಟಕ್ಕರ್ ನೀಡಲಿದೆ ಭಾರತ ‘ಭುವನ್’ ಆಪ್.!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








