Vijay Deverukonda : ದುಬೈ ಮರುಭೂಮಿಯಲ್ಲಿ ವಿಜಯ್ ರಶ್ಮಿಕಾ ಪ್ರವಾಸ…
ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಹಿಟ್ ಚಿತ್ರಗಳ ಖುಷಿ ಅನುಭವಿಸುತ್ತಿದ್ದಾರೆ. ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಗಿಟ್ಟಿಸಿಕೊಂಡ ಮೋಹನಾಂಗಿ.. ಇದೀಗ ಮಿಷನ್ ಮಜ್ನು, ವಾರಿಸು ಚಿತ್ರಗಳ ಯಶಸ್ಸು ಸವಿಯುತ್ತಿದ್ದಾರೆ.
ಸಧ್ಯಕ್ಕೆ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡ ನಟಿ ದುಬೈನಲ್ಲಿ ರಜೆ ಕಳೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಆದ್ರೆ ರಶ್ಮಿಕಾ ಜೊತೆಗೆ.. ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಕೂಡ ದುಬೈ ಟೂರ್ ನಲ್ಲಿ ಕಾಲ ಕಳೆಯುತ್ತಿದ್ದಾರೆ ಅನ್ನೋದು ಫೋಟೋಗಳನ್ನು ನೋಡಿದರೆ ಅರ್ಥವಾಗುತ್ತದೆ.
ನ್ಯಾಶನಲ್ ಕ್ರಶ್ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಬ್ಬರ ಪ್ರಣಯ ಮತ್ತೊಮ್ಮೆ ಚಿತ್ರರಂಗದಲ್ಲಿ ಚರ್ಚೆಯ ವಿಷಯವಾಗಿದೆ. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಗಲಾಟೆ ನಡೆದಿದೆ ಎನ್ನಲಾಗಿತ್ತು.
ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್ ಗೆ ಹೋಗಿದ್ದರು. ಈ ನಿಟ್ಟಿನಲ್ಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ, ವಿಜಯ್ ಜೊತೆ ಟೂರ್ ಹೋಗ್ತೀಯಾ ಎಂದು ಕೇಳಿದ್ದಾರೆ. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್.. ಫ್ರೆಂಡ್ಸ್ ಒಟ್ಟಿಗೆ ಟೂರ್ ಹೋಗಬಾರದಾ? ಎಂದು ನೆಟ್ಟಿಗರಿಗೆ ಕೌಂಟರ್ ಕೊಟ್ಟಿದ್ದಾಳೆ. ಇದರಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಬಲ ಬಂದಂತಾಗಿದೆ.
Vijay Deverakonda : Vijay Rashmika Tour in Dubai Desert…








