ಬೈಕ್ ಗೆ ಕಾರು ಡಿಕ್ಕಿ : ಸವಾರ ಸಾವು
ವಿಜಯಪುರ : ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವಿಜಯಪುರ ತಾಲೂಕಿನ ಸಿಂದಗಿ ರಸ್ತೆಯ ಲಕ್ಷ್ಮಿ ದೇಗುಲ ಬಳಿ ನಡೆದಿದೆ. vijayapura-bike car accident
42 ವರ್ಷದ ಮೋಹನ್ ರಾಠೋಡ್ ಮೃತ ದುರ್ದೈವಿಯಾಗಿದ್ದಾರೆ.
ಮೋಹನ್ ರಾಠೋಡ್ ಹಡಗಲಿ ಎಲ್.ಟಿ ಗ್ರಾಮದ ನಿವಾಸಿಯಾಗಿದ್ದು, ಸಂಜೆ ವಿಜಯಪುರದಿಂದ ಹಡಗಲಿಗೆ ಹೋಗುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.