ಡ್ಯಾನ್ಸ್ ಮಾಡಲು ವಧುವನ್ನ ಎಳೆದಾಡಿದ್ರು ವರನ ಫ್ರೆಂಡ್ಸ್… ವಧು ಕೊಟ್ಟ ಗಿಫ್ಟ್ ಎಂಥದ್ದು ಗೊತ್ತಾ..!
ಉತ್ತರ ಪ್ರದೇಶ: ಮದುವೆ ಮನೆ ಅಂದ್ರೆ ಅಲ್ಲಿ ಸಡಗರ ಸಂಭ್ರಮ ಕಳೆಗಟ್ಟಿರುತ್ತೆ. ನೃತ್ಯ , ಸಂಗೀತ ಜೋರಾಗಿಯೇ ಇರುತ್ತೆ. ಆದರೆ ಅತಿರೇಖಕ್ಕೆ ಹೋದರೆ ಏನೆಲ್ಲಾ ಆಗ್ಬೋದು ಅನ್ನೋದಕ್ಕೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದುಹೋದ ಈ ಘಟನೆ ಉದಾಹರಣೆ.
ಹೆಂಡತಿ ಹುಡುಗಾಟಕ್ಕೆ ಬಲಿಯಾದ ಪತಿ: ಅಸಲಿಗೆ ಆಗಿದ್ದೇನು..!
ಮದುವೆಮನೆಯಲ್ಲಿ ವರ ಹಾಗೂ ವಧು ಕುಣಿದು ಕುಪ್ಪಳಿಸುತ್ತಿದ್ದರು. ಅವರ ಜೊತೆಯಲ್ಲಿ ವರನ ಸ್ನೇಹಿತರು ಸಹ ಡ್ಯಾನ್ಸ್ ಮಾಡ್ತಾಯಿದ್ದರು. ವರನ ಜೊತೆಗೆ ನೃತ್ಯ ಮಾಡ್ತಿದ್ದ ಸ್ನೇಹಿತರು ಏಕಾಏಕಿ ವಧುವನ್ನ ನೃತ್ಯ ಮಾಡುವಂತೆ ಕರೆದಿದ್ದಾರೆ. ಆಕೆ ವರನ ಸ್ನೇಹಿತರೊಂದಿಗೆ ನೃತ್ಯ ಮಾಡಲು ನಿರಾಕರಿಸಿದ್ದಾಳೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ವರನ ಸ್ನೇಹಿತರು ಆಕೆಯನ್ನ ಬಲವಂತವಾಗಿ ಹಿಡಿದು ಎಳೆದಾಡಿದ್ದಾರೆ. ಆದ್ರೆ ಇದನ್ನೆಲ್ಲಾ ನೋಡುತ್ತಾ ವರ ಏನೂ ಮಾತನಾಡದೇ ಮೂಕಬಸವಂತೆ ಇದ್ದದ್ದನ್ನ ಕಂಡು ರೊಚ್ಚಿಗೆದ್ದ ವಧು ಏಕಾಏಕಿ ಕುತ್ತಿಗೆಯಿಂದ ಹಾರ ಬಿಸಾಡಿ ಮದುವೆನೂ ಬೇಡ ಮುಂಜಿನೂ ಬೇಡ ಅಂತ ಎಲ್ಲರಿಗೂ ಶಾಕ್ ಕೊಟ್ಟಿದ್ದಾಲೆ.
ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಇನ್ನೂ ಸಿಟ್ಟಾಗಿದ್ದ ವಧುವಿನ ಮಮನವೊಲಿಸಲು ಯಾರು ಎಷ್ಟೇ ಪ್ರಯತ್ನ ಪಟ್ಟರೂ ಯಾರ ಮಾತಿಗೂ ಜಗ್ಗದೇ ಮದುವೆ ಮುರಿದು ಮಂಟಪದಿಂದ ಹೋಗಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಕೆಲ ಹೊತ್ತು ವಧು ವರರ ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ವಧುವಿನ ಮನೆಯವರು ವರನ ಕುಟುಂಬ ವರದಕ್ಷಿಣೆ ಪಡೆದಿದ್ದಾಗಿ ಪ್ರಕರಣ ದಾಖಲಿಸಿದ್ದರು. ಇದೀಗ ವರನ ಕುಟುಂಬ ತಮಗೆ ನೀಡಲಾಗಿದ್ದ 6.30 ಲಕ್ಷ ರೂಪಾಯಿಯನ್ನ ವಧುವಿನ ಕುಟುಂಬಕ್ಕೆ ವಾಪಸ್ ಮಾಡಿದ್ದಾರೆ.
ಪರಿಷತ್ ನಲ್ಲಿ ಗದ್ದಲ : ಯಾರದ್ದು ತಪ್ಪು..? ಯಾರದ್ದು ಸರಿ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








