ನಾಲ್ಕನೇ ಟೆಸ್ಟ್ : ವಿರಾಟ್, ಸ್ಟೋಕ್ಸ್ ಮಧ್ಯೆ ವಾಗ್ವಾದ

1 min read
virat-kohli

ನಾಲ್ಕನೇ ಟೆಸ್ಟ್ : ವಿರಾಟ್, ಸ್ಟೋಕ್ಸ್ ಮಧ್ಯೆ ವಾಗ್ವಾದ

ಅಹಮದಾಬಾದ್ : ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ತಂಡದ ಆಲ್ ರೌಂಡರ್ ಮಧ್ಯೆ ವಾಗ್ವಾದ ನಡೆದಿದೆ.

ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ವೇಗಿ ಮೊಹಮ್ಮದ್ ಸಿರಾಜ್ ಬಗ್ಗೆ ಅಸಹನೆ ವ್ಯಕ್ತಪಡಿಸಿ ಕೆಣಕಿದ್ದಾರೆ. ಇದನ್ನ ಗಮನಿಸಿದ ವಿರಾಟ್ ನಿಂದು ಎಷ್ಟಿದೆ ಅಷ್ಟು ನೋಡ್ಕೊ ಅಂತಾ ಟಕ್ಕರ್ ನೀಡಿದ್ದಾರೆ.

ಸ್ಟಾರ್ ವೇಗಿ ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್‍ಗೆ ಅಂತಿಮ ಟೆಸ್ಟ್‍ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಅದರಂತೆ ಪಂದ್ಯದಲ್ಲಿ 12ನೇ ಓವರ್ ಎಸೆದ ಸಿರಾಜ್ ಇಂಗ್ಲೆಂಡ್ ನಾಯಕ ಜೋ ರೂಟ್ ಗೆ ಪೆವಿಲಿಯನ್ ದಾರಿ ತೋರಿಸಿದ್ರು.

virat-kohli

ಇದಾದ ಬಳಿ ಕ್ರೀಸ್ ಗೆ ಬಂದ ಸ್ಟೋಕ್ಸ್ ಗೂ ಕೂಡ ಸಿರಾಜ್ ಕಮಕ್ ಕಿಮಕ್ ಎನ್ನಲು ಬಿಡಲಿಲ್ಲ. ಸಿರಾಜ್ ರ ಮೂರು ಎಸೆತಗಳಲ್ಲಿ ಒಂದು ರನ್ ಗಳಿಸದ ಸ್ಟೋಕ್ಸ್ ಸಿರಾಜ್ ಅವರನ್ನ ಉದ್ದೇಶಿಸಿ ಏನೋ ಹೇಳಿದ್ರು. ಆದ್ರೆ ಇದಕ್ಕೆ ಸಿರಾಜ್ ಕಿವಿಕೊಡಲಿಲ್ಲ.

ಇದನ್ನೇ ಗಮನಿಸಿದ ವಿರಾಟ್ ಮುಂದೆ ಬಂದ ಸ್ಟೋಕ್ಸ್ ಜೊತೆ ವಾದಕ್ಕೆ ನಿಂತ್ರು. ಈ ವೇಳೆ ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು. ಏತನ್ಮಧ್ಯೆ, ಅಂಪೈರ್‍ಗಳಾದ ನಿತಿನ್ ಮೆನನ್ ಮತ್ತು ವೀರೇಂದ್ರ ಶರ್ಮಾ ಅವರ ಹಸ್ತಕ್ಷೇಪದಿಂದ ವಿವಾದ ಇತ್ಯರ್ಥವಾಯಿತು.

ಈ ಎಲ್ಲಾ ಘಟನಾವಳಿಗೆ ಸಂಬಂಧಿಸಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ತಮ್ಮದೇಯಾದ ಕಹಾನಿಗಳನ್ನ ಕಟ್ಟುತ್ತಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd