ಇನ್ ಸ್ಟಾ ದಲ್ಲಿ ವಿರಾಟ್ ಕೊಹ್ಲಿಗೆ 100 ಮೀಲಿಯನ್ ಫಾಲೋವರ್ಸ್…!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ.
ಹೌದು, ವಿರಾಟ್ ಕೊಹ್ಲಿ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಒಬ್ಬ ಕ್ರಿಕೆಟ್ ಆಟಗಾರನಾಗಿ, ನಾಯಕನಾಗಿ ಕೊಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದೀಗ ಇನ್ ಸ್ಟಾ ಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ನೂರು ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಕ್ಲಬ್ ಗೆ ಸೇರಿಕೊಂಡಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ, ಫುಟ್ ಬಾಲ್ ಆಟಗಾರರಾದ ಕ್ರಿಸ್ಟಿಯಾನೋ ರೊನಾಲ್ಡೊ, ನೈಮರ್, ಲಿಯೊನಲ್ ಮೆಸ್ಸಿ, ಹಾಲಿವುಡ್ ನಟ ಡ್ವೇನ್ ಜಾನ್ಸನ್, ಅಮೆರಿಕಾದ ಸಿಂಗರ್ ಬಿಯೊನ್ಸ್ ಮತ್ತು ಆರಿನಾ ಗ್ರಾಂಡ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಅಂದ ಹಾಗೇ ವಿರಾಟ್ ಕೊಹ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಲ್ಕನೇ ಕ್ರೀಡಾಪಟುವಾಗಿದ್ದಾರೆ. ಗರಿಷ್ಠ ಅಂದ್ರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು 266 ಮಿಲಿಯನ್ ಫಾಲೋವರ್ಸ್ ಹಾಗೂ ಲಿಯೊನಲ್ ಮೆಸ್ಸಿ 187 ಮಿಲಿಯನ್ ಫಾಲೋವಸ್ ಗಳನ್ನು ಹೊಂದಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ನಂಬರ್ ವನ್ ಬ್ಯಾಟ್ಸ್ ಮೆನ್ ಸ್ಥಾನವನ್ನು ಹೊಂದಿದ್ದಾರೆ. 2008ರಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ ವಿರಾಟ್, 251 ಏಕದಿನ ಪಂದ್ಯಗಳಲ್ಲಿ 12,040 ರನ್ ದಾಖಲಿಸಿದ್ದಾರೆ. ಇದ್ರಲ್ಲಿ 43 ಶತಕಗಳಿವೆ. ಅದೇ ರೀತಿ 90 ಟೆಸ್ಟ್ ಪಂದ್ಯಗಳಲ್ಲಿ 7490 ರನ್ ಹಾಗೂ 27 ಶತಕಗಳನ್ನು ಸಿಡಿಸಿದ್ದಾರೆ.