2023ಕ್ಕೆ ವಿರಾಟ್ ಕೊಹ್ಲಿಯೇ RCB ಕ್ಯಾಪ್ಟನ್..
ವಿರಾಟ್ ಕೊಹ್ಲಿ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಮುಂದಿನ ವರ್ಷ ವಿರಾಟ್ ಕೊಹ್ಲಿಯೇ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಲಿದ್ದಾರೆ ಎಂದು ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ರು. ಹೀಗಾಗಿ ಆರ್ ಸಿಬಿ ಫ್ರಾಂಚೈಸಿ ಫಾಪ್ ಡುಪ್ಲಸಿಸ್ ಅವರನ್ನ ತಂಡದ ನಾಯಕರನ್ನಾಗಿ ಘೋಷಿಸಿದೆ.
ಈ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ಫಾಫ್ ಡುಪ್ಲಸಿಸ್ ವೃತ್ತಿ ಜೀವನದ ಅಂತ್ಯದಲ್ಲಿದ್ದಾರೆ.
ಅವರು ಹೆಚ್ಚೆಂದರೇ ಮೂರು ವರ್ಷ ಐಪಿಎಲ್ ಆಡಬಹುದು. ಆದ್ರೂ ಆರ್ ಸಿಬಿ ಫ್ರಾಂಚೈಸಿ ಅವರನ್ನ ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಸರಿಯಾದ ನಿರ್ಧಾರವಾಗಿದೆ. ಅವರ ಅನುಭವ ತಂಡಕ್ಕೆ ಅನುಕೂಲವಾಗಲಿದೆ.
ಫಾಫ್, ಎಂಎಸ್ ಧೋನಿ ಅವರ ನಾಯಕತ್ವದ ಕೌಶಲ್ಯಗಳನ್ನು ಹೊಂದಿದ್ದಾರೆ. ನನ್ನ ಪ್ರಕಾರ ಫಾಫ್ ಆರ್ ಸಿಬಿ ತಂಡದ ನಾಯಕರಾಗಿ ಹೆಚ್ಚು ಕಾಲ ಇರೋದಿಲ್ಲ.
ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ನಾಯಕತ್ವ ಒತ್ತಡದಲ್ಲಿದ್ದರು. ಅವರಿಗೆ ಸ್ವಲ್ಪ ವಿಶ್ರಾಂತಿ ಬೇಕಾಗಿದೆ.
ನನ್ನ ಪ್ರಕಾರ ಅವರು ಸದ್ಯ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಅನಿಸುತ್ತಿದೆ. ಮುಂದಿನ ವರ್ಷ ಅವರೇ ಆರ್ ಸಿಬಿಯನ್ನ ಮುನ್ನಡೆಸುತ್ತಾರೆ ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ. virat-kohli-might-captain-rcb-ipl-2023