Virat Kohli – Ram Charan : ಕಿಂಗ್ ಕೊಹ್ಲಿ ಬಯೋಪಿಕ್ ನಲ್ಲಿ ರಾಮ್ ಚರಣ್..???
ಕಿಂಗ್ ಕೊಹ್ಲಿ ಬಯೋಪಿಕ್ ನಲ್ಲಿ ರಾಮ್ ಚರಣ್
RRR ಗೆ ಆಸ್ಕರ್ ಒಲಿದ ಖುಷಿಯಲ್ಲಿರುವ ನಟ
ಕಿಂಗ್ ಕೊಹ್ಲಿ ಬಯೋಪಿಕ್ ನಲ್ಲಿ ನಟಿಸುವ ಆಸೆ
ಕೊಹ್ಲಿ – ಚರಣ್ ಫ್ಯಾನ್ಸ್ ಎಕ್ಸೈಟೆಡ್
ವೈರಲ್ ಆದ ರಾಮ್ ಚರಣ್ ಹೇಳಿಕೆ
ರಾಜಮೌಳಿ ನಿರ್ದೇಶನ ರಾಮ್ ಚರಣ್ , ಜ್ಯೂ. NTR ನಟನೆಯ RRR ನಮ್ಮ ಭಾರತ ದೇಶಕ್ಕೆ ಹೆಮ್ಮೆಯನ್ನ ತಂದಿದೆ. ವಿಶ್ವಾದ್ಯಂತ ಸೌಂಡ್ ಮಾಡಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನ ಗೆದ್ದು ಇತಿಹಾಸ ಬರೆದಿದೆ. ಇದೇ ಖುಷಿಯಲ್ಲಿ ನ್ಯಾಷನಲ್ ಸ್ಟಾರ್ ರಾಮ್ ಚರಣ್ ಇದ್ದಾರೆ. ಶಂಕರ್ ನಿರ್ದೇಶನದ ಸಿನಿಮಾದಲ್ಲೂ ರಾಮ್ ಚರಣ್ ನಟಿಸುತ್ತಿದ್ದಾರೆ..
ಇದೆಲ್ಲದರ ನಡುವೆ ರಾಮ್ ಚರಣ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿದೆ. ಜೊತೆಗೆ ಒಂದಷ್ಟು ಅಂತೆ ಕಂತೆಗಳೂ ಇವೆ..
ಅಂದ್ಹಾಗೆ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಕಿಂಗ್ ಕೊಹ್ಲಿ ಅವರ ಬಯೋಪಿಕ್ ನಲ್ಲಿ ರಾಮ್ ಚರಣ್ ನಟನೆ ಬಗ್ಗೆ ಭಾರೀ ಚರ್ಚೆಯಾಗ್ತಿದ್ದು , ವಿರಾಟ್ ಹಾಗೂ ಚರಣ್ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಆಸ್ಕರ್ ಗೆದ್ದ ನಂತರ ಇಂಡಿಯಾ ಟುಡೆ ಕಾನ್ಕ್ಲೇವ್ ನ ವೇದಿಕೆಯಲ್ಲಿ ರಾಮ್ ಚರಣ್ ಕಾಣಿಸಿಕೊಂಡರು. ಈ ವೇಳೆ ಅವರಿಗೆ ನಾನಾ ಪ್ರಶ್ನೆಗಳನ್ನ ಕೇಳಲಾಗಿದೆ..
ಈ ವೇಳೆ ತಾವು ನಟಿಸಲು ಇಷ್ಟಪಡುವ ಪಾತ್ರದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೂ ನಟ ಆನ್ಸರ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚರಣ್ ಕ್ರೀಡೆಗೆ ಸಂಬಂಧಿಸಿದ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಅವರ ಮೇಲೆ ಸಿನಿಮಾ ಮಾಡಿದರೆ ಅದರಲ್ಲಿ ನಿಮಗೆ ಪಾತ್ರ ಮಾಡಲು ಅವಕಾಶ ಸಿಕ್ಕರೆ ಅದನ್ನು ಮಾಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ ಆಗ ನಾನು ಖಂಡಿತ ಮಾಡುವೆ ಎಂದು ಒಪ್ಪಿಕೊಂಡರು. ರಾಮ್ ಚರಣ್ ಅವರ ಹೇಳಿಕೆ ಸಖತ್ ವೈರಲ್ ಆಗ್ತಿದ್ದು , ನಿಜವಾಗಿಯೂ ವಿರಾಟ್ ಬಯೋಪಿಕ್ ನಲ್ಲಿ ಚರಣ್ ನ ನೋಡೋ ತವಕ ಕೊಹ್ಲಿ ಹಾಗೂ ರಾಮ್ ಚರಣ್ ಅಭಿಮಾನಿಗಳಲ್ಲಿ ಮೂಡಿದೆ..
ಅಂದ್ಹಾಗೆ ಬಾಲಿವುಡ್ ನಲ್ಲಿ ಸದ್ಯಕ್ಕಂತೂ ಬಯೋಪಿಕ್ ಟ್ರೆಂಡ್ ನಡೀತಿದೆ.. ಸಿನಿಮಾ ಓಡ್ಲಿ ಬಿಡ್ಲಿ , ಫ್ಲಾಪ್ ಆಗಲಿ , ಬಯೋಪಿಕ್ ಹಿಂದೆ ಬಿಂದಿದ್ದಾರೆ ನಿರ್ಮಾಪಕರು.. ಸಾಲು ಸಾಲು ಬಯೋಪಿಕ್ ಗಳ ನಡುವೆ , ಮತ್ತೊಂದು ಬಯೋಪಿಕ್ ತಂದ್ರೂ ಅಚ್ಚರಿಯೇನಿಲ್ಲ..
ಅದ್ರಲ್ಲೂ ಚರಣ್ ಹೇಳಿಕೆ ವೈರಲ್ ಬೆನ್ನಲ್ಲೇ ಕೊಹ್ಲಿ ಬಯೋಪಿಕ್ ಬಂದ್ರೂ ಅಚ್ಚರಿಯೇನಿಲ್ಲ ಎನ್ನುತ್ತಿದ್ದಾರೆ ನೆಟಿಜನ್ಸ್..
Virat Kohli – Ram Charan : Ram Charan in King Kohli biopic..???