Virat Kohli | ಸಕ್ಸಸ್ ಇಸ್ ದ ಬೆಸ್ಟ್ ರಿವೇಂಜ್.. ವಿರಾಟ್ ಸೆಂಚೂರಿ
33 ತಿಂಗಳು.. 146 ವಾರಗಳು.. 1020 ದಿನಗಳು.. 24,447 ಗಂಟೆಗಳು.. 14,68,624 ನಿಮಿಷಗಳು.. 8,81,17,453 ಸೆಕೆಂಡುಗಳು..ಇದಕ್ಕಾಗಿ ಎಲ್ಲರು ಜಾತಕ ಪಕ್ಷಿಗಳಂತೆ ಕಾಡಿದ್ದರು. ಈ ಒಂದು ಸಿಕ್ಸರ್ ನೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಿ, ಕೊಹ್ಲಿ ತಮ್ಮ 71 ನೇ ಶತಕವನ್ನು ಮತ್ತು ಟಿ 20 ಕ್ರಿಕೆಟ್ ನಲ್ಲಿ ಚೊಚ್ಚಲ ಸೆಂಚೂರಿ ಸಿಡಿಸಿ ಸೆಕೆಂಡ್ ಹೈಯೆಸ್ಟ್ ಶತಕ ಸಿಡಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಸುಮಾರು ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ಕಾದಿದ್ದು ಈ ಶತಕಕ್ಕಾಗಿಯೇ. ಕೊಹ್ಲಿ ಆಟ ಮೂಗಿತು. ವಿರಾಟ್ ಗೆ ತಂಡದಿಂದ ಗೇಟ್ ಪಾಸ್ ಕೊಡಬೇಕು. ಕೊಹ್ಲಿ ನಿವೃತ್ತಿ ಪಡೆಯಬೇಕು, ಹೀಗೆ ಅವರವರ ಇಷ್ಟಕ್ಕೆ ತಕ್ಕಂತೆ ಅವರವರು ಟೀಕೆ ಮಾಡಿದ್ದರು. ಆದ್ರೆ ಆಗಿದ್ದು.. !!
ಕಿಂಗ್ ಇಸ್ ಬ್ಯಾಕ್..
ವಿರಾಟ್ ಕೊಹ್ಲಿ ಸೆಂಚೂರಿ ಸಿಕ್ಸರ್ ಬಾರಿಸುತ್ತಿದ್ದಂತೆ ಇಡೀ ಕ್ರಿಕೆಟ್ ಜಗತ್ತು ನಿಟ್ಟುಸಿರು ಬಿಟ್ಟಂತೆ ಅನಿಸಿತ್ತು. ಮೊದಲ 50 ರನ್ ಗಳಿಸಲು 32 ಎಸೆತಗಳನ್ನು ತೆಗೆದುಕೊಂಡ ವಿರಾಟ್ ಕೊಹ್ಲಿ, ಇದಾದ ನಂತರ ಕೇವಲ 22 ಎಸೆತಗಳಲ್ಲಿಯೇ 71 ರನ್ ಚಚ್ಚಿ ವಿರಾಟ್ ರೂಪ ಪ್ರದರ್ಶಸಿದ್ರು.
ಇದಕ್ಕೂ ಮುನ್ನ ಕೊಹ್ಲಿ ಸೆಂಚೂರಿ ಸಿಡಿಸಿದ್ರೆ ಆ ಅಗ್ರೇಸ್ಸಿವ್, ಆಂಗ್ರಿ ಸೆಲೆಬ್ರೇಷನ್ ಹೇಗಿತ್ತು ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಈ ಬಾರಿ ಆ ಸೆಲೆಬ್ರೇಷನ್ ಗೆ ವಿರಾಟ್ ಕೊಹ್ಲಿ ಮುಂದಾಗಲ್ಲ. ಜಸ್ಟ್ ಸ್ಮೈಲ್ ಮಾಡಿದ್ರಷ್ಟರೆ. ಆ ಸ್ಮೈಲ್ ನೊಂದಿಗೆ ಇದು ಇಲ್ಲಿಗೆ ನಿಲ್ಲಲ್ಲ ಅನ್ನೋ ಸಂದೇಶವನ್ನು ವಿರಾಟ್ ಸಾರಿಸಿದ್ದಾರೆ.

ಈ ಏಷ್ಯಾಕಪ್ ಜಸ್ಟ್ ಟ್ರೈಲರ್ ಅಷ್ಟೆ.. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಕಿಂಗ್ ದಂಡಯಾತ್ರೆ ಹೇಗಿರಲಿದೆ ಅನ್ನೋದನ್ನ ವಿರಾಟ್ ಕ್ರಿಕೆಟ್ ಪ್ರಪಂಚಕ್ಕೆ ತೋರಿಸಲಿದ್ದಾರೆ.
ಸಚಿನ್ ನೂರನೇ ಶತಕಕ್ಕಾಗಿ ಅಂದು ಎಷ್ಟು ಕ್ರಿಕೆಟ್ ಅಭಿಮಾನಿಗಳು ಕಾದಿದ್ದರೋ ಅದೇ ರೀತಿ ವಿರಾಟ್ ಕೊಹ್ಲಿ ಕಂ ಬ್ಯಾಕ್ ಗೂ ಅಷ್ಟೆ ಕ್ರಿಕೆಟ್ ಅಭಿಮಾನಿಗಳು ಕಾದಿದ್ದರು. ಸಾರಿ.. ಅದು ಕಂ ಬ್ಯಾಕ್ ಅಲ್ಲ.. ಸೆಂಚೂರಿಗಾಗಿ.. ಯಾಕಂದರೇ ಕಳೆದ ಮೂರು ವರ್ಷಗಳಲ್ಲಿ ವಿರಾಟ್ ಬ್ಯಾಟಿಂದ ಸೆಂಚೂರಿ ಬಂದಿಲ್ಲ. ಆದ್ರೆ ಒಳ್ಳೆಯ ಇನ್ನಿಂಗ್ಸ್ ಗಳು ಬಂದಿವೆ.
ಅಂದಹಾಗೆ ಕೊಹ್ಲಿಯಿಂದ ನಾವು ಕಲಿಯೋದು ತುಂಬಾ ಇದೆ. ನಾವೆಷ್ಟು ಕೆಟ್ಟ ಪರಿಸ್ಥಿತಿಯಲ್ಲಿದ್ದರೂ, ಎಲ್ಲರೂ ನಮ್ಮನ್ನ ಟೀಕೆ ಮಾಡಿದ್ದರೂ, ಜಸ್ಟ್ ಸ್ಮೈಲ್ ಮಾಡುತ್ತಾ ನಮ್ಮ ವರ್ಕ್ ಮೇಲೆ ಫೋಕಸ್ ಮಾಡುತ್ತಿದ್ದರೇ ಇಟ್ ಜಸ್ಟ್ ಮ್ಯಾಟರ್ ಆಫ್ ಟೈಂ. ಸಕ್ಸಸ್ ಇಸ್ ದ ಬೆಸ್ಟ್ ರಿವೇಂಜ್ ಅನ್ನೋದಕ್ಕೆ ಬೆಸ್ಟ್ ಎಕ್ಸಾಮ್ ಪಲ್ ವಿರಾಟ್ ಕೊಹ್ಲೀಸ್ 71 ಸೆಂಚೂರಿ.