Wasim Jaffer | ಆ ಸಂದರ್ಭದಲ್ಲಿ ಪಂತ್ ಒತ್ತಡಕ್ಕೆ ಒಳಗಾಗುತ್ತಾರೆ
ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಟೀಂ ಇಂಡಿಯಾದ ಸಾರಥ್ಯ ವಹಿಸುತ್ತಿರೋದು ಗೊತ್ತೇ ಇದೆ.
ಇದೇ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿರುವ ರಿಷಬ್ ಪಂತ್, ಮೊದಲೆರೆಡು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
ಹೀಗಾಗಿ ವೈಜಾಕ್ ನಲ್ಲಿ ನಡೆಯಲಿರುವ ಮೂರನೇ ಟಿ 20 ಪಂದ್ಯ ಟೀಂ ಇಂಡಿಯಾಗೆ ನಿರ್ಣಾಯಕವಾಗಿದೆ.
ಈ ನಡುವೆ ಪಂತ್ ಕ್ಯಾಪ್ಟನ್ಸಿ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ವಾಸೀಂ ಜಾಫರ್ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಮ್ಯಾಚ್ ಕ್ಲಿಷ್ಟಕರವಾದಾಗ ನಾಯಕ ರಿಷಬ್ ಪಂತ್ ಒತ್ತಡಕ್ಕೆ ಸಿಲುಕುತ್ತಾರೆ ಎಂದು ಜಾಫರ್ ಹೇಳಿದ್ದಾರೆ.

ಇದನ್ನ ನಾವು ಐಪಿಎಲ್ ನಲ್ಲಿ ನೋಡಿದ್ದೇವೆ. ಆತ ಮತ್ತಷ್ಟು ಮ್ಯಾಚ್ ಗಳಲ್ಲಿ ನಾಯಕರಾಗಿದ್ದರೇ ಸುಧಾರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.
ದಕ್ಷಿಣ ಆಫ್ರಿಕಾ ಸರಣಿ ಭಾರತದ ಕೈಯಿಂದ ಜಾರಿ ಹೋಗಿದೆ. ಯಾಕೆಂದರೇ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಹಿನ್ನೆಡೆಯಲ್ಲಿದೆ.
ಮೂರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಒಂದು ಪಂದ್ಯ ಗೆದ್ದರೂ ಸರಣಿ ಗೆಲ್ಲಲಿದೆ.
ಇನ್ನು ವೈಜಾಕ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶ ನೀಡಬೇಕು.
ಟಾಸ್ ಬಗ್ಗೆ ತಲೆಕಡೆಸಿಕೊಳ್ಳದೇ ಕಣಕ್ಕಿಳಿಯಬೇಕು ಎಂದು ಜಾಫರ್ ಸಲಹೆ ನೀಡಿದ್ದಾರೆ.








