ನಮ್ಮ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕುವಂತೆ ನಾವು ಕೇಳುವುದಿಲ್ಲ: ರಷ್ಯಾ – Saaksha Tv
ಅಮೆರಿಕ: ಉಕ್ರೇನ್ ನ ಅಂತಾರಾಷ್ಟ್ರೀಯ ಶಾಂತಿಪಾಲನೆ ಕೇಂದ್ರದ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಅಮೆರಿಕ ವಿದೇಶಾಂಗ ಸಚಿವರು ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಂಟೋನಿ ಬ್ಲಿಂಕನ್, ಪೋಲೆಂಡ್ ಗಡಿಗೆ ಸಮೀಪವಿರುವ ಯಾವೊರಿವ್‌ನಲ್ಲಿರುವ ಶಾಂತಿಪಾಲನೆ ಮತ್ತು ಭದ್ರತೆಗಾಗಿ ಇರುವ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಕ್ರೌರ್ಯ ನಿಲ್ಲಬೇಕು ರಷ್ಯಾ ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ ಪಾಶ್ಚಿಮಾತ್ಯ ಮತ್ತು ಪ್ರಪಂಚದ ಇತರ ರಾಷ್ಟ್ರಗಳು ನಮ್ಮ ಮೇಲೆ ಹಾಕಿರುವ ಒತ್ತಡಗಳಿಂದ ರಷ್ಯಾದ ಯಾವುದೇ ನಿರ್ಧಾರಗಳು ಬದಲಾಗುವುದಿಲ್ಲ ಮತ್ತು ಬದಲಾಯಿಸಲು ಸಾಧ್ಯವಿಲ್ಲ. ಇನ್ನು ಮೇಲಿನ ಯಾವುದೇ ನಿರ್ಬಂಧಗಳನ್ನು ತೆಗೆದುಹಾಕುವಂತೆ ಅಮೆರಿಕ ಹಾಗೂ ಇತರ ರಾಷ್ಟ್ರಗಳನ್ನು ನಾವು ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ವರ್ಶಿನಿನ್ ಹೇಳಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.