ವಿ ಮಿಸ್ ಯು ABD… ಥ್ಯಾಂಕ್ಯೂ ಸ್ಪೈಡರ್ ಮ್ಯಾನ್

1 min read
abde villiers saaksha tv

ವಿ ಮಿಸ್ ಯು ABD… ಥ್ಯಾಂಕ್ಯೂ ಸ್ಪೈಡರ್ ಮ್ಯಾನ್

ಅಬ್ರಾಹಂ ಬೆಂಜಮಿನ್ ಡಿವಿಲಿಯರ್ಸ್

ಕ್ರಿಕೆಟ್ ಮೈದಾನದಲ್ಲಿ ಚೆಂಡನ್ನು ಗಾಳಿಯಲ್ಲಿಯೇ ಹಿಡಿಯುವ ಸ್ಪೈಡರ್ ಮೆನ್.. 22 ಯಾರ್ಡ್ ನ ಪಿಚ್ ನಲ್ಲಿ ಚಿರತೆಯಂತೆ ಓಡುವ ಸೂಪರ್ ಮೆನ್.

ಕ್ರೀಸ್ನಲ್ಲಿ ಗಿರಗಿರನೆ ನಲಿದಾಡುತ್ತ ಬ್ಯಾಟ್ ಬೀಸುವ ಸ್ಫೋಟಕ ಬ್ಯಾಟ್ಸ್ಮೆನ್. ಕನಸಲ್ಲೂ ಯಾರು ಕೂಡ ಕಲ್ಪಿಸಿಕೊಳ್ಳಲು ಅಸಾಧ್ಯವಾದಂತಹ ವಿನೂತನಶಾಟ್ ಗಳನ್ನು ಹೊಡೆಯುವ ಮ್ಯಾಜಿಶಿಯನ್.

ಹೊಡಿಬಡಿ ಆಟವನ್ನೇ ಮೂಲಮಂತ್ರವನ್ನಾಗಿಸಿಕೊಂಡಿರುವ ವಿಶ್ವಕ್ರಿಕೆಟ್ ಸಾಮ್ರಾಟ್.

ಸವಾಲನ್ನು ಸವಾಲಾಗಿ ಸ್ವೀಕರಿಸಿ ಅಭಿಮಾನಿಗಳನ್ನು ಕೊನೆ ತನಕ ತುದಿಗಾಲಿನಲ್ಲಿನರ್ತಿಸುವಂತೆ ಮಾಡುವ ಕ್ರಿಕೆಟ್ ನ ಮೈಕೆಲ್ ಜಾಕ್ಸನ್.

abde villiers saaksha tv

ಆಟಆಡುತ್ತಾ, ಲೈಫ್ ನ್ನು ಎಂಜಾಯ್ ಮಾಡುತ್ತಾ, ಕೈಯಲ್ಲಿಗಿಟಾರ್ ಹಿಡಿದುಕೊಂಡು ಹಾಡು ಹಾಡುವ ಮ್ಯೂಜಿಷಿಯನ್.

ಸೋಲು -ಗೆಲುವುಗಳನ್ನು ಕ್ರೀಡಾಸ್ಪೂರ್ತಿಯಿಂದಲೇ ಸ್ವೀಕರಿಸುವ ವಿಶ್ವಕ್ರಿಕೆಟ್ನ ಅಪರೂಪದ ಜಂಟಲ್ಮೆನ್.

ಸದಾ ಚೈತನ್ಯದ ಚಿಲುಮೆಯಾಗಿರುವ ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಯಾವತ್ತಿಗೂ ಎವಗ್ರ್ರೀನ್.

ಹೌದು..! ಎಬಿಡಿವಿಲಿಯರ್ಸ್, ಸರಿಯಾಗಿ ಎಲ್ಲರಿಗೂ ಸದಾ ನೆನಪಿನಲ್ಲಿಯುವಂತಹ ಆಟಗಾರ.

ಕ್ರಿಕೆಟ್ ನ ಘನತೆಯನ್ನು ಕಾಪಾಡಿಕೊಂಡಿರುವ ಎಬಿಡಿಯ ಟೆಸ್ಟ್ ಕ್ರಿಕೆಟ್ ನ ಆಟ ಮಾತ್ರ ಕ್ಲಾಸ್.

ಆದ್ರೆ ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ ಪಕ್ಕಾ ಮಾಸ್. ತನ್ನ ಅದ್ಭುತ ಬ್ಯಾಟಿಂಗ್ ವೈಖರಿಯಿಂದಲೇ ಎಂಥವರನ್ನು ಕೂಡ ಅಚ್ಚರಿಗೊಳಿಸುವ ಮೋಡಿಗಾರ.

ಹಾಗೇ ನೋಡೋಕೆ ಎಬಿಡಿ ಸೈಲೆಂಟ್. ಆದ್ರೆ ಮೈದಾನದಲ್ಲಿ ಬ್ಯಾಟ್ ಹಿಡಿದು ನಿಂತ್ರೆ ಮಾತ್ರ ವಾಲೈಂಟ್.

ಕ್ರಿಕೆಟ್ ನ ಗ್ರಾಮರ್ಗಳನ್ನು ಚೆನ್ನಾಗಿ ಕಲಿತುಕೊಂಡಿದ್ರೂ, ಕೆಲವೊಂದು ಸಲ ಆಡುವ ಆಟ ಮಾತ ಬಟ್ಲರ್ ಇಂಗ್ಲೀಷ್ನಂತಿದೆ.

abde villiers saaksha tv

ಯಾಕಂದ್ರೆ ಎಬಿಡಿ ಹೊಡೆಯುವ ಪ್ರತಿ ಶಾಟ್ ಗಳಿಗೆ ಹೆಸರಿಡಲು ಸಾಧ್ಯವಿಲ್ಲ. ಅವರ ಬ್ಯಾಟಿಂಗ್ ಶೈಲಿಗೆ ಹೆಸರಿಡಲು ಕ್ರಿಕೆಟ್ ಪುಸ್ತಕದಲ್ಲೂ ಇಲ್ಲ. ಕ್ರಿಕೆಟ್ ಪಂಡಿತರ ಬಳಿಯೂ ಇಲ್ಲ.

ತನ್ನದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಎಬಿಡಿ ವಿಲಿಯರ್ಸ್ ಗೆ ಎಬಿಡಿವಿಲಿಯರ್ಸ್ ಸರಿಸಾಟಿ.

ಇದೀಗ ಎಬಿಡಿ ವಿಲಿಯರ್ಸ್ ತನ್ನ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅಚ್ಚರಿ ಎಂಬಂತೆ ಎಲ್ಲಾ ಮಾದರಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

37ರ ಹರೆಯದ ಎಬಿಡಿ ನಿರ್ಧಾರವನ್ನು ಅರಗಿಸಿಕೊಳ್ಳಲಲು ಸಾಧ್ಯವಿಲ್ಲ. ಆದ್ರೂ ಅರಗಿಸಿಕೊಳ್ಳಲೇಬೇಕು.

ಎಬಿಡಿಯವರ ದಿಢೀರ್ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಬಿಡಿಯ ಬ್ಯಾಟಿಂಗ್ ವೈಭವವನ್ನು ನೋಡಲು ಇನ್ನೂ ಸಾಧ್ಯವಾಗಲ್ಲ ಎಂಬ ಕೊರಗು, ಬೇಸರ, ನಿರಾಸೆ ಅಭಿಮಾನಿಗಳಲ್ಲಿದೆ.

ಒಂದಂತೂ ಸತ್ಯ, ಎಬಿಡಿ ಬ್ಯಾಟಿಂಗ್ ಮಾಡ್ತಾ ಇದ್ರೆ ಎದುರಾಳಿ ಬೌಲರ್ಗಳು ತಳಮಳಗೊಳ್ಳುವುದರಲ್ಲಿಎರಡು ಮಾತಿಲ್ಲ.

ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬ ಒತ್ತಡ ಪ್ರತಿ ಬೌಲರ್ಗಳಿರುತ್ತದೆ. ಇನ್ನು ಎದುರಾಳಿ ತಂಡದ ನಾಯಕನಂತೂ ತಲೆಚಚ್ಚಿಕೊಂಡು ಕ್ಷೇತ್ರ ರಕ್ಷಣೆಗೆ ಪ್ಲಾನ್ ಮಾಡಿಕೊಳ್ಳುತ್ತಾನೆ ಎಂಬುದು ಅಷ್ಟೇ ಸತ್ಯ.

360 ಡಿಗ್ರಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಪ್ಪಳಿಸುವ ಸಾಮಥ್ಯವಿರುವ ಆಟಗಾರ ಎಬಿಡಿ.

abde villiers saaksha tv

ಅದ್ರಲ್ಲೂ 2012 ಮತ್ತು 2014ರಲ್ಲಿ ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಡೇಲ್ ಸ್ಟೇನ್ ವರನ್ನು ದಂಡಿಸಿದ ಪರಿಗೆ ಕ್ರಿಕೆಟ್ ಜಗತ್ತೇ ಬೆಚ್ಚಿಬಿದ್ದಿತ್ತು.

ಮಾರಕ ವೇಗಿ, ಒಡನಾಡಿಯಾಗಿದ್ರೂ ಸ್ಟೆನ್ ಒಂದೇ ಓವರ್ನಲ್ಲಿ ಎಬಿಡಿ 23 ರನ್ ಬಾರಿಸಿದ್ದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.

ಅಂದಹಾಗೇ, ಎಬಿಡಿಗೆ ಬೆಂಗಳೂರು ಎರಡನೇ ತವರು ಮನೆ ಇದ್ದಂತೆ. ಐಪಿಎಲ್ನಲ್ಲಿ ಬೆಂಗಳೂರು ರಾಯಲ್ ಚಾಲೆಂಜಸ ತಂಡವನ್ನು ಪ್ರತಿನಿಧಿಸುತ್ತಿರುವ ಎಬಿಡಿಗೆ ಅಭಿಮಾನಿಗಳ ಬಳಗವೇ ಇದೆ.

ಕಳೆದ 11 ಆವೃತ್ತಿಗಳಲ್ಲೂ ಆರ್ಸಿಬಿ ತಂಡದ ಹೀರೋ ಆಗಿ ಮೆರೆದಾಡಿದ ಎಬಿಡಿಗೆ ಬೆಂಗಳೂರಿನ ಅಭಿಮಾನಿಗಳು ಸಲಾಂ ಅನ್ನುತ್ತಿದ್ದಾರೆ.

ಇದೀಗ ಎಲ್ಲಾ ಮಾದರಿ ಕ್ರಿಕೆಟ್ ಗೆ ಎಬಿಡಿ ವಿದಾಯಘೋಷಿಸಿರುವು ಆರ್ ಸಿಬಿಯನ್ಸ್ ಗೆ ಆಘಾತ ನೀಡಿದೆ.

abde villiers saaksha tv

2004ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಎಬಿಡಿ, ತನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ.

20 ಹರೆಯದಲ್ಲೇ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಎಬಿಡಿ ಹೆಸರಿನಲ್ಲಿ ಹಲವು ದಾಖಲೆಗಳು ಸೇರಿಕೊಂಡಿವೆ.

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮೆನ್ ಆಗಿರುವ ಎಬಿಡಿ ದಕ್ಷಿಣ ಆಪ್ರಿಕಾ ಪರ ಆರಂಭಿಕ ಆಟಗಾರನಿಂದ ಹಿಡಿದು ಎಂಟನೇ ಕ್ರಮಾಂಕದ ತನಕವೂ ಬ್ಯಾಟಿಂಗ್ ಮಾಡಿದ್ದಾರೆ.

ಅಂಕಿ ಅಂಶ

ಟೆಸ್ಟ್ ಪಂದ್ಯ – 114
ರನ್ – 8765
ಶತಕ – 22, ಅರ್ಧಶತಕ – 46

ಏಕದಿನ ಪಂದ್ಯ – 228
ರನ್ – 9577
ಶತಕ – 25, ಅರ್ಧಶತಕ – 53

ಟಿ-20 ಪಂದ್ಯ – 78
ರನ್ – 1672
ಅರ್ಧಶತಕ -10

ಐಪಿಎಲ್ 164 ಪಂದ್ಯ
ರನ್ – 5162
ಶತಕ -3, ಅರ್ಧಶತಕ – 40

ಇನ್ನು, ಎಬಿಡಿವಿಲಿಯರ್ಸ್ ಒಂದರಾ ಸಕಲಕಲಾವಲ್ಲಭ. ಆಡುಮುಟ್ಟದ ಸೊಪ್ಪಿಲ್ಲ ಅನ್ನೋ ಗಾದೆ ಮಾತಿನಂತೆ, ಎಬಿಡಿ ಹಾಕಿ ಆಟಗಾರ, ಟೆನಿಸ್ ಆಟಗಾರ, ರಗ್ಬಿ ಆಟಗಾರ, ಫುಟ್ಬಾಲ್ ಆಟಗಾರ, ಗಾಲ್ಫ್ ಆಟಗಾರ, ಈಜುಗಾರನೂ ಹೌದು.

ಈ ಎಲ್ಲಾ ಕ್ರೀಡೆಗಳಲ್ಲಿ ಎಬಿಡಿ ವಿಲಿಯಸ್ ದಕ್ಷಿಣ ಆಫ್ರಿಕಾ ಪರ ರಾಷ್ಟ್ರೀಯ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ.

abde villiers saaksha tv

ಆದ್ರೆ ಹೆಸರು ಮಾಡಿದ್ದು ಮಾತ್ರ ಕ್ರಿಕೆಟ್ನಲ್ಲಿ. ಆದ್ರೆ ತನ್ನ ವರ್ಣರಂಜಿತ ಕ್ರಿಕೆಟ್ ಬದುಕಿನಲ್ಲಿ ವಿಶ್ವಕಪ್ ಗೆಲ್ಲಲು ಆಗಲಿಲ್ಲ ಎಂಬ ಬೇಸರ ಅವರಲ್ಲಿದೆ.

ಹಾಗೇ ಸಾಕಷ್ಟು ಪ್ರೀತಿ ತೋರಿಸಿದ ಆರ್ ಸಿಬಿ ಅಭಿಮಾನಿಗಳಿಗಾಗಿ ಕಪ್ ಗೆದ್ದು ಕೊಟ್ಟಿಲ್ಲ ಅನ್ನೋ ನೋವು ಅವರಲ್ಲಿದೆ.

ಆಟಗಾರನಾಗಿ, ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಎಬಿಡಿ ಕ್ರಿಕೆಟ್ ಜಗತ್ತು ಕಂಡ ಅಪರೂಪದ ಅಪರಂಜಿ. ವಿ ಮಿಸ್ ಯು ಎಬಿಡಿ. ಥ್ಯಾಂಕ್ ಯೂ ಸ್ಪೈಡರ್ ಮ್ಯಾನ್.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd