ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ – ಬಿಜೆಪಿ-TMC ನಡುವೆ ಟಫ್ ಫೈಟ್..!

1 min read

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ – ಬಿಜೆಪಿ-TMC ನಡುವೆ ಟಫ್ ಫೈಟ್..!

ಪಶ್ಚಿಮ ಬಂಗಾಳ : ಇಂದು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಬಿರುಸಿನಿಂದ ಆರಂಭವಾಗಿದೆ.
ಅದ್ರಲ್ಲೂ ಸದ್ಯಕ್ಕೆ ಭಾರೀ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಆಡಳಿತ ರೂಢ ಪಕ್ಷ TMC ನಡುವೆ ಟಫ್ ಕಾಂಪಿಟೇಶನ್ ಇದ್ದು, ಭರ್ಜರಿ ಮತಯಾಚನೆ, ಹೈಡ್ರಾಮಾಗಳು ನಡೆದುಹೋಗಿವೆ. ಮತದಾರರು ಈ ಬಾರಿ ಯಾರ ಕೈಹಿಡಿಯುತ್ತಾರೆ ಅನ್ನೋ ಕಾತರತೆ ಜೋರಾಗಿದೆ.

ಪಶ್ಚಿಮ ಬಂಗಾಳದ ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ಸದ್ಯ ಜಿದ್ದಾಜಿದ್ದಿನ ಕಣವಾಗಿದ್ದು, ದೀದಿ ನೇತೃತ್ವದ TMC ಹಾಗೂ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ನೆಕ್ ಟು ನೆಕ್ ಕಾಂಪಿಟೇಶನ್ ಇರಲಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ಮತದಾನ ನಡೆಯಲಿದ್ದು ಇಂದು ಮೊದಲ ಹಂತದಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಪಶ್ಚಿಮ ಮೆಡ್ನಾಪುರ, ಬಂಕುರಾ, ಪುರುಲಿಯಾ, ಜಾರ್ಗ್ರಾಮ್, ಪೂರ್ವ ಮಿಡ್ನಾಪುರದಲ್ಲಿ ಚುನಾವಣೆ ನಡೆಯುತ್ತಿದೆ.TMC new slogan

ಪಶ್ಚಿಮ ಬಂಗಾಳದಲ್ಲಿ ಮುಂದಿನ ಹಂತದ ಮತದಾನ ಏಪ್ರಿಲ್ 1 ರಂದು ನಡೆಯಲಿದೆ. ನಂತರ ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ನಡೆಯಲಿದ್ದು ಫಲಿತಾಂಶ ಮೇ 2 ರಂದು ಘೋಷಿಸಲಾಗುತ್ತದೆ. ಇಂದು ಒಟ್ಟು 81,09,815 ಜನರು ಮತ ಚಲಾಯಿಸಲಿದ್ದು, ಈ ಪೈಕಿ 40,77,210 ಪುರುಷ ಮತದಾರರು, 40,32,481 ಮಹಿಳಾ ಮತದಾರರು ಮತ್ತು 114 ಮಂದಿ ತೃತೀಯ ಲಿಂಗ ಮತದಾರರಾಗಿದ್ದಾರೆ.

ಶಾಸಕರಿಗೂ ನಂಬರ್ ಪ್ಲೇಟ್ ರೂಲ್ಸ್ – ವಾಹನಗಳ ಮೇಲೆ ಅನಧಿಕೃತವಾಗಿ ಹೆಸರು, ಚಿಹ್ನೆ / ಲಾಂಛನ ಇರುವಂತಿಲ್ಲ..!

ಅಸ್ಸಾಂ ವಿಧಾನಸಭೆ ಕ್ಷೇತ್ರದ 47 ಸ್ಥಾನಗಳಿಗೆ ಇಂದು ಮತದಾನ..!

ರಾಜಸ್ಥಾನದಲ್ಲಿ ಭಾರತೀಯ ಸೇನೆ ನಡೆಸಿದ ದೇಶೀ ನಿರ್ಮಿತ ಕ್ಷಿಪಣಿಯ ಪರೀಕ್ಷೆ ಯಶಸ್ವಿ..!

ಹುಚ್ಚಾಟ ಮುಂದುವರೆಸಿದ ಕಿಮ್ ಜಾಂಗ್ ಉನ್ – ಮತ್ತೊಂದು ಕ್ಷಿಪಣಿ ಪರೀಕ್ಷೆ..!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ – 22 ಕಚ್ಚಾ ಬಾಂಬ್ ಪತ್ತೆ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd