NIA ದಾಳಿ ಬಗ್ಗೆ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಹೇಳಿದ್ದೇನು ?
ಮಂಗಳೂರು : ನಗರದಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿ ಮೇಲೆ ಜಾವ ಸುಮಾರು 3:30ರ ವೇಳೆಗೆ ದಾಳಿ ಮಾಡಲಾಗಿದೆ.
ಸದ್ಯ ಮಂಗಳೂರಿನಲ್ಲಿ ಎನ್ ಐಎ ದಾಳಿ ಮುಕ್ತಾಯಗೊಂಡಿದ್ದು, ಅಧಿಕಾರಿಗಳು ಹಲವು ಮಹತ್ವದ ಕಡತಗಳೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದಾಳಿ ಬಗ್ಗೆ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಬೂಬುಕರ್ ಕುಳಾಯಿ ಪ್ರತಿಕ್ರಿಯೆ ನೀಡಿದ್ದು, ಎನ್ ಐ ಎ ಅಧಿಕಾರಿಗಳು ಮುಂಜಾನೆ 3.30 ರ ವೇಳೆಗೆ ಕಚೇರಿಗೆ ಬಂದಿದ್ದಾರೆ. ನನಗೆ 5 ಗಂಟೆಯ ವೇಳೆಗೆ ಮಾಹಿತಿ ಲಭ್ಯವಾಗಿದೆ.
ಎನ್ ಐ ಎ ಅಧಿಕಾರಿಗಳು ಪಿಎಫ್ ಐ ಕಚೇರಿಗೆ ದಾಳಿ ಮಾಡುವ ಸಲುವಾಗಿ ಬಂದಿದ್ದರು. ಆದರೆ ನಮ್ಮ ಕಚೇರಿಯೂ ಹತ್ತಿರದಲ್ಲಿ ಇದ್ದ ಕಾರಣ ನಮ್ಮ ಕಚೇರಿ ಮೇಲೂ ದಾಳಿ ಮಾಡಿದ್ದಾರೆ.
ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ, ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ ಪಡೆದುಕೊಂಡು ಹೋಗಿದ್ದಾರೆ.
ಕಚೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ.
ನಮ್ಮ ಪಕ್ಷದ ಸಂಬಂಧಿಸಿದ ಕೆಲವು ಫೋಟೋ ಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಯಾವುದೇ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.