ADVERTISEMENT
Saturday, January 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕೋಗಿಲು ಅಕ್ರಮ ನಿವಾಸಿಗಳ ಅಸಲಿ ಬಣ್ಣ ಬಯಲು: 20 ವರ್ಷಗಳ ವಾದ ಸುಳ್ಳು, ಗೂಗಲ್ ಮ್ಯಾಪ್ ಸಾಕ್ಷ್ಯ ಇಟ್ಟು ಕಾಂಗ್ರೆಸ್ ವಿರುದ್ಧ ಗುಡುಗಿದ ಆರ್ ಅಶೋಕ್

What is the origin of the illegal residents of Kogilu?

Shwetha by Shwetha
December 31, 2025
in ರಾಜ್ಯ, Newsbeat, State, ಬೆಂಗಳೂರು
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜಧಾನಿಯ ಕೋಗಿಲು ಬಡಾವಣೆಯ ಒತ್ತುವರಿ ತೆರವು ಕಾರ್ಯಾಚರಣೆಯು ಇದೀಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಫೋಟಕ ತಿರುವು ನೀಡಿದ್ದಾರೆ. ನಿವಾಸಿಗಳು ತಾವು ಕಳೆದ 20 ವರ್ಷಗಳಿಂದ ಇಲ್ಲೇ ನೆಲೆಸಿದ್ದೇವೆ ಎಂದು ಹೇಳುತ್ತಿರುವ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ಇದೊಂದು ಕಾಂಗ್ರೆಸ್ ಪ್ರಾಯೋಜಿತ ಅಕ್ರಮ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ಗೂಗಲ್ ಮ್ಯಾಪ್ ಮತ್ತು ಸ್ಯಾಟಲೈಟ್ ಚಿತ್ರಗಳನ್ನು ಸಾಕ್ಷ್ಯವಾಗಿ ಪ್ರದರ್ಶಿಸಿ, ಕಳೆದ 6 ತಿಂಗಳ ಹಿಂದೆಯಷ್ಟೇ ಇಲ್ಲಿ ಅಕ್ರಮವಾಗಿ ಶೆಡ್ ಮತ್ತು ಮನೆಗಳನ್ನು ನಿರ್ಮಿಸಲಾಗಿದೆ ಎಂದು ದಾಖಲೆ ಸಮೇತ ವಿವರಿಸಿದರು.

Related posts

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

January 24, 2026
ರಾಜ್ಯ ಸರ್ಕಾರದಿಂದ ಐತಿಹಾಸಿಕ ತೀರ್ಮಾನ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಬೆಂಗಳೂರಿನಲ್ಲಿ ಭೂಮಿ ಮಂಜೂರು

ರಾಜ್ಯ ಸರ್ಕಾರದಿಂದ ಐತಿಹಾಸಿಕ ತೀರ್ಮಾನ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಬೆಂಗಳೂರಿನಲ್ಲಿ ಭೂಮಿ ಮಂಜೂರು

January 24, 2026

2023ರಲ್ಲಿ ಜಾಗ ಖಾಲಿ ಇತ್ತು: ಗೂಗಲ್ ಮ್ಯಾಪ್ ಸಾಕ್ಷ್ಯ

ತಮ್ಮ ವಾದಕ್ಕೆ ಪೂರಕವಾಗಿ 2023ರ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿದ ಆರ್. ಅಶೋಕ್, ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿರುವ ಜಾಗ 2023ರಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಆಗ ಅಲ್ಲಿ ಪಾಚಿ ಕಟ್ಟಿದ ಮತ್ತು ಕೆಸರು ತುಂಬಿದ ಹೊಂಡಗಳು ಮಾತ್ರ ಇದ್ದವು. ಮನುಷ್ಯರ ಸಂಚಾರವೇ ಇಲ್ಲದ ಜಾಗದಲ್ಲಿ ಕಳೆದ ಆರು ತಿಂಗಳಿಂದ ಏಕಾಏಕಿ ಮನೆಗಳು ತಲೆ ಎತ್ತಿವೆ. ಹೀಗಿರುವಾಗ 20 ವರ್ಷಗಳಿಂದ ವಾಸವಿದ್ದೇವೆ ಎನ್ನುವುದು ಹಸಿ ಸುಳ್ಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮವಾಗಿ ಆಧಾರ್ ಕಾರ್ಡ್ ಮತ್ತು ಭೂ ಹಗರಣ
ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ಹಣಕಾಸಿನ ದಂಧೆ ನಡೆದಿದೆ ಎಂದು ಆರೋಪಿಸಿದ ಅಶೋಕ್, ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮೂಲಕ ಬರುವ ವಲಸಿಗರಿಗೆ ಕೇವಲ 20 ಸಾವಿರ ರೂ. ನೀಡಿದರೆ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡ ವಾಸಿಂ ಎಂಬುವವರು ಪ್ರತಿಯೊಬ್ಬರಿಂದ ತಲಾ 4 ಲಕ್ಷ ರೂ. ಪಡೆದು ಈ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

100 ಕೋಟಿ ರೂ. ಯೋಜನೆಯ ಜಾಗವಿದು
ಒತ್ತುವರಿಯಾಗಿರುವ ಜಾಗದ ಕುರಿತು ಮಾಹಿತಿ ನೀಡಿದ ಅವರು, ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಒಟ್ಟು 14 ಎಕರೆ 38 ಗುಂಟೆ ಸರ್ಕಾರಿ ಜಮೀನಿತ್ತು. ಇದರಲ್ಲಿ 5 ಎಕರೆಯನ್ನು ಬಿಬಿಎಂಪಿಗೆ ನೀಡಲಾಗಿದೆ. ಉಳಿದ 9 ಎಕರೆ 38 ಗುಂಟೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದ ಸ್ಯಾನಿಟರಿ ಬರ್ನಿಂಗ್ ಪಾಯಿಂಟ್ (ಘನತ್ಯಾಜ್ಯ ವಿಲೇವಾರಿ ಘಟಕ) ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಹಿಂದೆ ಕಲ್ಲು ಕ್ವಾರಿಯಾಗಿದ್ದ ಈ ಜಾಗದಲ್ಲಿ ಹೊಂಡ ಬಿದ್ದಿತ್ತು. ಇದೀಗ ಕಸ ಹಾಕುವ ಜಾಗದಲ್ಲಿ ಕಾಂಗ್ರೆಸ್ ಬೆಂಬಲಿತರು ಮನೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿ

ಈ ಅಕ್ರಮದ ಹಿಂದೆ ಪ್ರಭಾವಿ ಸಚಿವರ ಕೈವಾಡವಿದೆ ಎಂದು ದೂರಿದ ಅಶೋಕ್, ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಅವರ ವಿಶೇಷ ಅಧಿಕಾರಿ ಸರ್ಪರಾಜ್ ಖಾನ್ ಅವರು ಅಕ್ರಮ ನಿವಾಸಿಗಳ ಪರವಾಗಿ ನಿಂತಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ರಾಜ್ಯಾದ್ಯಂತ ಒತ್ತುವರಿ ತೆರವು ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ನೋಡಿದರೆ ಸರ್ಕಾರಿ ಜಮೀನಿನಲ್ಲಿ ಕಾಂಗ್ರೆಸ್ಸಿಗರೇ ಅಕ್ರಮವಾಗಿ ಬಡಾವಣೆ ನಿರ್ಮಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಕೇರಳದ ಸಂಸದರು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕೋಗಿಲು ಪ್ರಕರಣವನ್ನು ಅಂತಾರಾಷ್ಟ್ರೀಯ ಸುದ್ದಿಯನ್ನಾಗಿ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಇದು ಸಂಪೂರ್ಣವಾಗಿ ಸರ್ಕಾರಿ ಜಮೀನಾಗಿದ್ದು, ಇದನ್ನು ಕಬಳಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಅಧಿಕಾರಿಗಳ ಪತ್ರ ವ್ಯವಹಾರ

ಈ ಅಕ್ರಮದ ಬಗ್ಗೆ ತಹಸೀಲ್ದಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಪತ್ರ ವ್ಯವಹಾರಗಳು ನಡೆದಿವೆ. 2023 ಮತ್ತು 2024ರಲ್ಲಿ ಇಲ್ಲಿ ಅನಧಿಕೃತ ಮನೆ ನಿರ್ಮಾಣವಾಗುತ್ತಿರುವ ಬಗ್ಗೆ ಮತ್ತು ಸರ್ಕಾರಿ ನಿವೇಶನ ಒತ್ತುವರಿ ಮಾಡಿ ಸೈಟ್ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುವಂತೆ ಪತ್ರ ಬರೆದಿದ್ದಾರೆ. ಈ ಎಲ್ಲಾ ದಾಖಲೆಗಳು ಅಕ್ರಮವನ್ನು ಸಾಬೀತುಪಡಿಸುತ್ತವೆ ಎಂದು ಆರ್. ಅಶೋಕ್ ವಿವರಿಸಿದರು.

ShareTweetSendShare
Join us on:

Related Posts

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

by Shwetha
January 24, 2026
0

ಬೆಂಗಳೂರು: ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅಬ್ಬರಕ್ಕೆ ಸಿಲುಕಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಭೀತಿ ಎದುರಾಗಿರುವಾಗಲೇ, ಭಾರತದ ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್...

ರಾಜ್ಯ ಸರ್ಕಾರದಿಂದ ಐತಿಹಾಸಿಕ ತೀರ್ಮಾನ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಬೆಂಗಳೂರಿನಲ್ಲಿ ಭೂಮಿ ಮಂಜೂರು

ರಾಜ್ಯ ಸರ್ಕಾರದಿಂದ ಐತಿಹಾಸಿಕ ತೀರ್ಮಾನ ಹಿಂದುಳಿದ ಮತ್ತು ದಲಿತ ಸಮುದಾಯದ 22 ಮಠಗಳಿಗೆ ಬೆಂಗಳೂರಿನಲ್ಲಿ ಭೂಮಿ ಮಂಜೂರು

by Shwetha
January 24, 2026
0

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳ ಸಬಲೀಕರಣದ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ...

ಮತ್ತೆ ಟ್ರೆಂಡ್ ಆಯ್ತು #GoBackModi: ದಕ್ಷಿಣ ಭಾರತ ಪ್ರವಾಸದ ವೇಳೆ ಆನ್‌ಲೈನ್ ವಿರೋಧ

ಮತ್ತೆ ಟ್ರೆಂಡ್ ಆಯ್ತು #GoBackModi: ದಕ್ಷಿಣ ಭಾರತ ಪ್ರವಾಸದ ವೇಳೆ ಆನ್‌ಲೈನ್ ವಿರೋಧ

by Shwetha
January 24, 2026
0

ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ರಾಜ್ಯಗಳ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣ X ನಲ್ಲಿ #GoBackModi ಹ್ಯಾಶ್‌ಟ್ಯಾಗ್ ಮತ್ತೆ ಭಾರೀ ಪ್ರಮಾಣದಲ್ಲಿ ಟ್ರೆಂಡಿಂಗ್...

ದಾವೋಸ್ ನಲ್ಲಿ ಭಾರತದ ಆರ್ಥಿಕತೆಗೆ ಜೈ ಎಂದ ಡಿಕೆಶಿ: ರಾಹುಲ್ ಗಾಂಧಿಗೆ ಮುಜುಗರ, ಬಿಜೆಪಿಗೆ ಸಂಭ್ರಮ

ದಾವೋಸ್ ನಲ್ಲಿ ಭಾರತದ ಆರ್ಥಿಕತೆಗೆ ಜೈ ಎಂದ ಡಿಕೆಶಿ: ರಾಹುಲ್ ಗಾಂಧಿಗೆ ಮುಜುಗರ, ಬಿಜೆಪಿಗೆ ಸಂಭ್ರಮ

by Shwetha
January 24, 2026
0

ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ (World Economic Forum) ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳು ಈಗ ರಾಷ್ಟ್ರ ರಾಜಕಾರಣದಲ್ಲಿ...

ಸುಷ್ಮಾ ಸ್ವರಾಜ್ ಪಾದ ಪೂಜೆ ಮಾಡಿ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಅಮಿತ್ ಶಾ ಉಗಿದಿದ್ದು ಮರೆತಂತಿದೆ: ಬಿ.ಕೆ.ಹರಿಪ್ರಸಾದ್ ಆಕ್ರೋಶ

ಸುಷ್ಮಾ ಸ್ವರಾಜ್ ಪಾದ ಪೂಜೆ ಮಾಡಿ ಲಾಭ ಗಿಟ್ಟಿಸಿಕೊಂಡ ರೆಡ್ಡಿಗೆ ಅಮಿತ್ ಶಾ ಉಗಿದಿದ್ದು ಮರೆತಂತಿದೆ: ಬಿ.ಕೆ.ಹರಿಪ್ರಸಾದ್ ಆಕ್ರೋಶ

by Shwetha
January 24, 2026
0

ಬೆಂಗಳೂರು: ಗಣಿ ಉದ್ಯಮಿ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದು, ರೆಡ್ಡಿಯವರ ರಾಜಕೀಯ ಜೀವನ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram