ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹದ ಕುರಿತು ಭಾರೀ ಚರ್ಚೆ ನಡೆಯುತ್ತಿತ್ತು. ಸದ್ಯ ಅವರ ವಿವಾಹ ಭಾರತದಲ್ಲಿಯೇ ನಡೆಯಲಿದೆ ಎನ್ನಲಾಗಿದೆ.
ಹಿಂದೆ ಲಂಡನ್ ನ ಪ್ರತಿಷ್ಠಿತ ಸ್ಟೋಕ್ ಪಾರ್ಕ್ ಎಸ್ಟೇಟ್ ನಲ್ಲಿ ಮದುವೆಯಾಗುವುದಾಗಿ ಸುದ್ದಿ ತಿಳಿದು ಬಂದಿತ್ತು. ಆದರೆ, ಲಂಡನ್ ಬದಲಾಗಿ ಭಾರತದಲ್ಲೇ ಮಗನ ಮದುವೆ ಮಾಡಲು ಮುಖೇಶ್ ಅಂಬಾನಿ ನಿರ್ಧಾರ ಮಾಡಿದ್ದಾರೆ.
ಸ್ಟೋಕ್ ಪಾರ್ಕ್ ಅನ್ನು ಬ್ರಿಟನ್ ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಪಾರ್ಕನ್ನು ಮಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರಿಯು 592 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಮಾಡಿದೆ. ಅದೇ ಪಾರ್ಕ್ ನಲ್ಲಿ ವಿವಾಹ ನಡೆಯಬಹುದು ಎನ್ನಲಾಗಿತ್ತು. ಆದರೆ, ಸದ್ಯದ ಮಾಹಿತಿಯಂತೆ ದೇಶದಲ್ಲಿಯೇ ವಿವಾಹ ನಡೆಯಲಿದೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಎಂಗೇಜ್ ಮೆಂಟ್ ನಡೆದಿತ್ತು. ಗುಜರಾತ್ ನ ಜಾಮ್ ನಗರದಲ್ಲಿ ಮೂರು ದಿನಗಳ ಕಾಲ ಬರೋಬ್ಬರಿ 1200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಕ್ರಮ ನಡೆದಿತ್ತು.