ಸ್ವಾತಂತ್ರ್ಯ ನಂತರ ಪ್ರಾರಂಭವಾದರೂ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಜರಾಯಿ ಇಲಾಖೆ, ಇದೀಗ ಹೊಸ ಹಾದಿ ಹಿಡಿದಿದ್ದು, ಸ್ವಂತ ಕಟ್ಟಡದ ಕನಸನ್ನು ನನಸು ಮಾಡುತ್ತಿರುವುದು ಗಮನಾರ್ಹವಾಗಿದೆ. ಮಿಂಟೋ ಆಸ್ಪತ್ರೆ ಬಳಿ ಪ್ರತಿ ತಿಂಗಳು 11 ಲಕ್ಷ ಬಾಡಿಗೆ ಪಾವತಿಸುತ್ತಿರುವ ಪ್ರಸ್ತುತ ಕಚೇರಿಯನ್ನು ಸ್ವಂತ ಕಟ್ಟಡ ಕಟ್ಟಿ ವರ್ಗಾಯಿಸಲು ಜೊತೆಗೆ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿರವರು ಬಹಳ ವರ್ಷಗಳ ಕನಸನ್ನು ನನಸು ಮಾಡಲು ಶ್ರಮಿಸುತ್ತಿದ್ದಾರೆ.
ಪ್ರಸ್ತುತ ವಿಧಾನಸೌಧದ ಪಕ್ಕದಲ್ಲಿರುವ ರಾಮಾಂಜನೇಯ ದೇವಸ್ಥಾನ ಹಿಂಭಾಗದ 20 ಗುಂಟೆ ಜಾಗದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಅದನ್ನು ಐತಿಹಾಸಿಕ ಹೊಯ್ಸಳ ಶೈಲಿಯಲ್ಲಿ ಸೌಂದರ್ಯಮಯವಾಗಿ ನಿರ್ಮಿಸಲಾಗುತ್ತದೆ. ಈ ಕಟ್ಟಡವನ್ನು “ಧಾರ್ಮಿಕ ಸೌಧ” ಎಂದು ನಾಮಕರಣ ಮಾಡಲಾಗಿದೆ.
ಈ ಹೊಸ ಕಟ್ಟಡವು ಧಾರ್ಮಿಕ, ಸಾಂಸ್ಕೃತಿಕ, ಮತ್ತು ಆಧುನಿಕ ಕಾರ್ಯಚಟುವಟಿಕೆಗಳಿಗೆ ಕೇಂದ್ರವಾಗಿದ್ದು, ಕರ್ನಾಟಕದ ಧಾರ್ಮಿಕ ಆಸ್ತಿಗಳ ಪ್ರಜ್ಞಾವಂತ ನಿರ್ವಹಣೆಗೆ ಮತ್ತಷ್ಟು ಶಕ್ತಿ ನೀಡಲಿದೆ. ಇದೇ ವೇಳೆ, ಹೊಯ್ಸಳ ಶೈಲಿಯ ವಿನ್ಯಾಸ ಈ ಕಟ್ಟಡವನ್ನು ಐತಿಹಾಸಿಕ ಪ್ರಾಮುಖ್ಯತೆಯೊಂದಿಗೆ ಪ್ರಾದೇಶಿಕ ಗರಿಮೆಗೂ ಕನ್ನಡಿಯಾಗಲಿದೆ.
ಈ ಹೊಸ ಯೋಜನೆ ಮುಜರಾಯಿ ಇಲಾಖೆಗೆ ಆರ್ಥಿಕ ಮತ್ತು ಕಾರ್ಯನಿರ್ವಹಣೆಯ ದೃಷ್ಟಿಯಿಂದ ದೊಡ್ಡ ಸಾಧನೆಯಾಗಲಿದೆ.