‘ಜೈ ಶ್ರೀರಾಮ್ ‘ ಎಂದರೆ ಸಿಟ್ಟಾಗೋದ್ಯಾಕೆ ದೀದಿ..! – ಯೋಗಿ ಆದಿತ್ಯನಾಥ್..!

1 min read

‘ಜೈ ಶ್ರೀರಾಮ್ ‘ ಎಂದರೆ ಸಿಟ್ಟಾಗೋದ್ಯಾಕೆ ದೀದಿ..! – ಯೋಗಿ ಆದಿತ್ಯನಾಥ್..!

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.  ಹೌದು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ರೆ ದೀದಿಗೆ ಏಕೆ ಕೋಪ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.

ಅಲ್ದೇ ಯಾವಾಗಲೂ ಜೈ ಶ್ರೀರಾಮ್ ಎಂದವರನ್ನು ದೀದಿ ಜೈಲಿಗೆ ಕಳುಹಿಸುತ್ತಾರೆ, ಶ್ರೀರಾಮನನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಳೆದ 10 ವರ್ಷಗಳಿಂದ ಪಶ್ಚಿಮ ಬಂಗಾಳ ಸರ್ಕಾರವು ಜನರನ್ನು ನಿರ್ಲಕ್ಷಿಸಿದೆ. ಕೇಂದ್ರ ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳನ್ನು ದೀದಿ ಸರ್ಕಾರವು ತಡೆಹಿಡಿದಿದೆ ಎಂದು ಆರೋಪಿಸಿದ್ದಾರೆ.

ಮೇ 2 ರಂದು ಬಂಗಾಳಕ್ಕೆ ಟಿಎಂಸಿ ಸರ್ಕಾರದಿಂದ ಸ್ವಾತಂತ್ರ್ಯ ಸಿಗಲಿದೆ. ಟಿಎಂಸಿ ಗೂಂಡಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್, ಸಿಪಿಎಂ ಹಾಗೂ ಟಿಎಂಸಿಯಂತಹ ಪಕ್ಷಗಳು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಆದರೆ ಅವರನ್ನು ಶೀಘ್ರ ಜೈಲಿಗಟ್ಟಲಾಗುವುದು ಎಂದಿದ್ದಾರೆ..

ಕೊರೊನಾ ಲಸಿಕೆ ಪಡೆದ ಅಪ್ಪು…! ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಕಿವಿಮಾತು..!

ಏಷ್ಯಾದ ಅತಿ ಶ್ರೀಮಂತ ಮುಖೇಶ್ ಅಂಬಾನಿ… ಜಗತ್ತಿನಲ್ಲಿ ಎಷ್ಟನೇ ಸ್ಥಾನ..?

ಉತ್ತರ ಕೊರಿಯಾ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ಯಂತೆ..! 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd