ಅಪ್ಪು ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17ಕ್ಕೆ ರಿಲೀಸ್ ಆಗಲಿದೆಯಾ ?

1 min read
Appu saaksha tv

ಅಪ್ಪು ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17ಕ್ಕೆ ರಿಲೀಸ್ ಆಗಲಿದೆಯಾ ?

ಪುನೀತ್ ರಾಜ್ ಕುಮಾರ್ ಅವರ ಅಕಾಲಿನ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

46ರ ಹರೆಯದಲ್ಲೇ ಈ ಲೋಕದ ಯಾತ್ರೆಯನ್ನು ಮುಗಿಸಿದ್ದ ಅಪ್ಪು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ.

ಒಬ್ಬ ಕಲಾವಿದನಾಗಿ ಸಾಕಷ್ಟು ಹೆಸರು, ಸಾಧನೆ ಮಾಡಿರುವ ಅಪ್ಪು, ಮಾನವೀಯತೆಯ ಗುಣಗಳ ಮೂಲಕವೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಡಾ. ರಾಜ್ ಕುಮಾರ್ ನಡೆದ ಹಾದಿಯಲ್ಲಿ ಮುನ್ನಡೆದಿದ್ದ ಅಪ್ಪು ತಂದೆಗೆ ತಕ್ಕ ಮಗನಾಗಿ ಕರುನಾಡಿನ ಯುವ ರತ್ನನಾಗಿ ರಾರಾಜಿಸಿ ಮರೆಯಾಗಿದ್ದಾರೆ.

ಯುವ ರತ್ನ ಸಿನಿಮಾದ ಬಳಿಕ ಜೇಮ್ಸ್ ಚಿತ್ರದಲ್ಲಿ ನಟಿಸಿದ್ದ ಅಪ್ಪು, ಕೈಯಲ್ಲಿ ಇನ್ನೂ ನಾಲ್ಕೈದು ಚಿತ್ರಗಳು ಇದ್ದವು. ಆದ್ರೆ ಜೇಮ್ಸ್ ಚಿತ್ರದ ಶೂಟಿಂಗ್ ಮುಗಿಸಿ ತನ್ನ ಕಲಾ ಸೇವೆಗೆ ಅಂತ್ಯ ಹಾಡಿದ್ದಾರೆ.

ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಅಪ್ಪು ನಮ್ಮೊಂದಿಗಿಲ್ಲ ಎನ್ನುವುದನ್ನು ಯಾರು ಕೂಡ ಊಹೆ ಕೂಡ ಮಾಡೋಕೆ ಆಗುತ್ತಿಲ್ಲ.

ಅಷ್ಟರ ಮಟ್ಟಿಗೆ ಅವರ ಮುಗ್ದ ನಗು, ಸರಳತೆ ಮತ್ತೆ ಮತ್ತೆ ಕಣ್ಣ ಮುಂದೆ ಹಾದು ಹೋಗುತ್ತಿವೆ.

Appu saaksha tv

ಅಂದ ಹಾಗೇ ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಅವರ ಪಾತ್ರದ ಶೂಟಿಂಗ್ ಎಲ್ಲಾ ಮುಗಿದು ಹೋಗಿದೆ.

ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇತ್ತು. ಆದ್ರೆ ಅವರು ಈಗ ನಮ್ಮೊಂದಿಗಿಲ್ಲ.

ಅವರ ಕಡೆಯ ಚಿತ್ರವನ್ನು ಅಭಿಮಾನಿ ದೇವರುಗಳು ಥಿಯೇಟರ್ ನಲ್ಲಿ ನೋಡಬಹುದು ಎಂದು ಹೇಳುತ್ತಿದೆ ಜೇಮ್ಸ್ ಚಿತ್ರ ತಂಡ.

ಇನ್ನೊಂದೆಡೆ ಪುನೀತ್ ಅವರ ಜೇಮ್ಸ್ ಚಿತ್ರಕ್ಕೆ ಶಿವರಾಜ್ ಕುಮಾರ್ ವಾಯ್ಸ್ ನೀಡುತ್ತಾರೆ ಅನ್ನೋ ಸುದ್ದಿ ಕೂಡ ಇದೆ.

ಈ ಬಗ್ಗೆ ಶಿವಣ್ಣ ಕೂಡ ಸ್ಪಷ್ಟನೆ ನೀಡಿದ್ದಾರೆ. ಚಿತ್ರ ತಂಡ ಹೇಳಿದ್ರೆ ಅಪ್ಪು ಚಿತ್ರಕ್ಕೆ ವಾಯ್ಸ್ ಕೊಡುತ್ತೇನೆ. ಅಪ್ಪ ಚಿತ್ರಕ್ಕೆ ವಾಯ್ಸ್ ಕೊಡುವುದೇ ನನಗೆ ಹಮ್ಮೆ ಅಂತನೂ ಹೇಳಿದ್ದಾರೆ.

ಕಿಶೋರ್ ಪತಿಕೊಂಡ ನಿರ್ಮಾಣ ಹಾಗೂ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಮಾರ್ಚ್ 17ರಂದು ಬಿಡುಗಡೆಯಾಗುವ ಸಾಧ್ಯತೆ ಕೂಡ ಇದೆ.

ಯಾಕಂದ್ರೆ ಮಾರ್ಚ್ 17 ಪುನಿತ್ ಅವರ ಹುಟ್ಟುಹಬ್ಬ.. ಆದ್ರೆ ಅದನ್ನು ಸಂಭ್ರಮಿಸಲು ಅವರು ನಮ್ಮೊಂದಿಗಿಲ್ಲ. ಆದ್ರೂ ಅವರ ನೆನಪು ಮಾತ್ರ ಸದಾ ನಮ್ಮೊಂದಿಗಿರುತ್ತೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd