ಐಪಿಎಲ್ ಭಾಗ -2ರ ಟೂರ್ನಿಯಲ್ಲಿ ವಿದೇಶಿ ಆಟಗಾರರು ಆಡ್ತಾರೋ…? ಇಲ್ವೋ…!
ಕೋವಿಡ್ ಮಹಾಮಾರಿಯಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಸ್ಥಗಿತಗೊಂಡಿರುವುದು ಗೊತ್ತಿರುವ ವಿಚಾರರವೇ. ಅದೇ ರೀತಿ ಮುಂಬರುವ ಸೆಪ್ಟಂಬರ್ ಅಕ್ಟೋಬರ್ ನಲ್ಲಿ ಐಪಿಎಲ್ ಟೂರ್ನಿಯನ್ನು ಯುಎಇ ನಲ್ಲಿ ಮುಂದುವರಿಸುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.
ಈ ನಡುವೆ ಬಿಸಿಸಿಐಗೆ ಮತ್ತೊಂದು ತಲೆನೋವು ಎದುರಾಗಿದೆ. ಮುಂದುವರಿಯುವ ಐಪಿಎಲ್ ಟೂರ್ನಿಯಲ್ಲಿ ವಿದೇಶಿ ಆಟಗಾರರು ಲಭ್ಯರಾಗುತ್ತಾರೋ ಅನ್ನೋ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಕೆಲವು ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಅಲಭ್ಯರಾಗುತ್ತಿದ್ದೇವೆ ಎಂಬ ಹೇಳಿಕೆಗಳು ಕೂಡ ಮಾಧ್ಯಮದಲ್ಲಿ ಪ್ರಕಟಗೊಂಡಿವೆ.
ಇನ್ನೊಂದು ಕಡೆ ವಿದೇಶಿ ಕ್ರಿಕೆಟ್ ಮಂಡಳಿಗಳು ತಮ್ಮ ತಂಡದ ವೇಳಾಪಟ್ಟಿಗಳನ್ನು ಮೊಟಕುಗೊಳಿಸುವ ಸಾಧ್ಯತೆಗಳು ತೀರಾ ಕಮ್ಮಿ. ಯಾಕಂದ್ರೆ ಬಿಸಿಸಿಐಗೆ ಐಪಿಎಲ್ ಎಷ್ಟು ಮಹತ್ವದ್ದೋ ಅದೇ ರೀತಿ ವಿದೇಶಿ ತಂಡಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯ ಸರಣಿಗಳು ಕೂಡ ಮುಖ್ಯವಾಗಿರುತ್ತವೆ.
ಹೀಗಾಗಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ಆಟಗಾರರು ಐಪಿಎಲ್ ನಲ್ಲಿ ಆಡಿದ್ರೆ ಮಾತ್ರ ಟೂರ್ನಿಗೆ ಒಂದು ಮಹತ್ವ ಬರುತ್ತೆ. ಇಲ್ಲದೆ ಇದ್ರೆ ಮಾಮೂಲಿ ಸ್ವದೇಶಿ ಟೂರ್ನಿಯಾಗಿರುತ್ತೆ.. ಇದ್ರಿಂದ ಬಿಸಿಸಿಐ ಈಗ ದುಡ್ಡಿನ ರುಚಿ ತೋರಿಸಿ ವಿದೇಶಿ ಅಟಗಾರರನ್ನು ಟೂರ್ನಿಯಲ್ಲಿ ಆಡಿಸುವ ಯೋಜನೆಯನ್ನು ರೂಪಿಸಿಕೊಂಡಿದೆ.
ಈಗಾಗಲೇ ಅಕ್ಟೋಬರ್ -ನವೆಂಬರ್ ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಕೂಡ ಭಾರತದಲ್ಲೇ ನಡೆಯಲಿದೆ. ಇದಕ್ಕಾಗಿ ತಂಡಗಳ ಅಟಗಾರರು ಸನ್ನದ್ಧಗೊಳ್ಳಬೇಕಿದೆ. ಅಲ್ಲದೆ ದ್ವಿಪಕ್ಷೀಯ ಸರಣಿಗಳು ಕೂಡ ನಡೆಯಲಿವೆ. ಇದ್ರಿಂದ ಯುಎಇ ನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಯಾವ ಯಾವ ಆಟಗಾರರು ಆಡುತ್ತಾರೆ ಅನ್ನೋದು ಇನ್ನೂ ಕೂಡ ಗೊಂದಲದಲ್ಲಿದೆ.
ಈ ಬಗ್ಗೆ ಬಿಸಿಸಿಐ ಮುಂದಿನ ಜುಲೈ ತಿಂಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ವಿದೇಶಿ ಕ್ರಿಕೆಟ್ ಮಂಡಳಿಯ ಜೊತೆ ಚರ್ಚೆ ಕೂಡ ನಡೆಸಲಿದೆ. ಒಂದು ವೇಳೆ ಈಗ ಇರುವಂತಹ ವಿದೇಶಿ ಆಟಗಾರರು ಅಲಭ್ಯರಾದ್ರೆ, ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡು ಫ್ರಾಂಚೈಸಿಗಳು ತಮ್ಮ ತಂಡಗಳ ಬಲವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಕೂಡ ಇದೆ..
ಇನ್ನು ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು ಯುಎಇ ನಲ್ಲಿ ಸೆಪ್ಟಂಬರ್ -ಅಕ್ಟೋಬರ್ ನಲ್ಲಿ ಆಯೋಜನೆ ಮಾಡುವುದು ಪಕ್ಕಾ ಆಗಿದೆ. ಬಿಸಿಸಿಐ ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆ ಮಾತುಕತೆ ಕೂಡ ನಡೆಸಿದೆ. ಅಲ್ಲದೆ ಬಿಸಿಸಿಐ ನೀಡಿರುವ ಆಹ್ವಾನವನ್ನು ಯುಎಇ ಕ್ರಿಕೆಟ್ ಮಂಡಳಿ ಖುಷಿಯಿಂದಲೇ ಸ್ವೀಕರಿಸಿದೆ. ಅಲ್ಲದೆ ಟೂರ್ನಿಯನ್ನು ಕಳೆದ ಬಾರಿಯಂತೆ ಯಶಸ್ವಿಯಾಗಿ ಸಂಘಟಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಪಂದ್ಯಗಳು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ.
ಸಿದ್ದರಾಮಯ್ಯ ನಮ್ಮ ನಾಯಕ, ಸಿದ್ದು ಹೆಸರು ದುರ್ಬಳಕೆ ಬೇಡ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವವನ್ನು ಪುನಃ ದೃಢಪಡಿಸಿದ್ದಾರೆ. ಅವರು ಹೇಳಿದ್ದು, "ಸಿದ್ದರಾಮಯ್ಯ ಅವರು ನಮ್ಮ ನಾಯಕ. ಅವರು ಎಲ್ಲಾ ಚುನಾವಣೆಗಳಿಗೆ ಬೇಕು....