ಬೈಕ್ ಸವಾರನ ಮೇಲೆ ಕಾಪರು ಹತ್ತಿಸಿದ ವೈದ್ಯೆ
ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯ
ಬೆಂಗಳೂರಿನ ಪಟ್ಟೇಗಾರಪಾಳ್ಯ ರಸ್ತೆಯಲ್ಲಿ ಘಟನೆ
ಭೀಕರ ಅಪಘಾತದ ದೃಶ್ಯ ಸಿಟಿಟಿವಿಯಲ್ಲಿ ಸೆರೆ
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ವೈದ್ಯೆ ವಿರುದ್ಧ ಕೇಸ್ ದಾಖಲು
ಹೊಸ ಕಾರು ಚಾಲನೆ ವೇಳೆ ವೈದ್ಯೆ ಡಾ. ಲಕ್ಷ್ಮಿ ಬೇಜವಾಬ್ದಾರಿತನ
ಕಾರು ಚಾಲಕಿಯೊಬ್ಬಳು ಬೈಕ್ ಸವಾರನ ಮೇಲೆ ಕಾರು ಹತ್ತಿಸಿರುವ ಭೀಕರ ಅಪಘಾತ ಬೆಂಗಳೂರಿನ ಪಟ್ಟೇಗಾರಪಾಳ್ಯ ರಸ್ತೆಯಲ್ಲಿ ನಡೆದಿದೆ..
ಹೊಸ ಕಾರು ಚಾಲನೆ ವೇಳೆ ವೈದ್ಯೆಯಾಗಿರುವ ಡಾ. ಲಕ್ಷ್ಮಿ ಎಂಬುವವರು ಕಾರು ಚಲಾಯಿಸಿದ್ದು ಅವರ ಬೇಜವಾಬ್ದಾರಿ ತನವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..
ಕಾರು ತಿರುಗಿಸಲು ಹೋದ ವೇಳೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ… ಡಿಕ್ಕಿ ರಭಸಕ್ಕೆ ಸವಾರ ಕೆಳಗೆ ಬಿದ್ದರೂ ಆತನ ಮೇಲೆಯೇ ಕಾರು ಹರಿಸಿದ್ದಾರೆ.,. ಈ ಘಟನೆ 21 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ..
ಗಂಭೀರವಾಗಿ ಗಾಯಗೊಂಡಿದ್ದ ಸವಾರನನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ.. ವೈದ್ಯೆ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..