khajuri-mutt ಖಜೂರಿಯ ಕೋರಣೇಶ್ವರ ಮಠಕ್ಕೆ ಮಹಿಳಾ ಉತ್ತರಾಧಿಕಾರಿ
ಕಲಬುರ್ಗಿ : ಜಿಲ್ಲೆಯ ಗಡಿಗ್ರಾಮ ಖಜೂರಿಯ ಕೋರಣೇಶ್ವರ ಮಠದ ಉತ್ತರಾಧಿಕಾರಿಯನ್ನಾಗಿ ನೀಲ ಲೋಚನಾ ತಾಯಿ ಅವರನ್ನು ಘೋಷಣೆ ಮಾಡಲಾಗಿದೆ.
ಪೀಠಾಧಿಪತಿ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಅವರು ಮಠದ ಉತ್ತರಾಧಿಕಾರಿನ್ನಾಗಿ ನೀಲ ಲೋಚನಾ ತಾಯಿಯನ್ನ ಘೋಷಿಸಿದರು.
ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಬಸವಾಶ್ರಮದ ಸತ್ಯಕ್ಕ ತಾಯಿ ಅವರ ಸಮ್ಮುಖದಲ್ಲಿ ಮಠದ ಅಧಿಕಾರ ಹಸ್ತಾಂತರಿಸಲಾಗಿದೆ. ಈ ಮಠಕ್ಕೆ ಈವರೆಗೆ ನಾಲ್ವರು ಮಠಾಧೀಶರು ಆಗಿದ್ದಾರೆ.
ಖಜೂರಿ ಗ್ರಾಮದವರಾದ ನೀಲಲೋಚನಾ ತಾಯಿಯವರು ಚಿತ್ರದುರ್ಗದ ಮುರುಘಾಮಠದಲ್ಲಿ 3 ವರ್ಷ ಅಧ್ಯಾತ್ಮಿಕ, ಧಾರ್ಮಿಕ ಶಿಕ್ಷಣ ಪಡೆದು ಸನ್ಯಾಸ ಸ್ವೀಕರಿಸಿದ್ದಾರೆ.
