Yadagiri | ಮಕ್ಕಳ ಕಳ್ಳ ಎಂದು ವ್ಯಕ್ತಿಗೆ ಥಳಿತ
ಯಾದಗಿರಿ : ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಭೀತಿ ಹೆಚ್ಚಾಗುತ್ತಿದ್ದು, ಯಾದಗಿರಿ ಹೊರವಲಯದ ಗಂಗಾನಗರದಲ್ಲಿ ವ್ಯಕ್ತಿಯೋರ್ವನಿಗೆ ಮಕ್ಕಳ ಕಳ್ಳನೆಂದು ಜನರು ಥಳಿಸಿದ್ದಾರೆ.
ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ.
ಇದರಿಂದ ಜಿಲ್ಲಾಡಳಿತ ಹಲ್ಲೆ ಮಾಡಬೇಡಿ ಮಕ್ಕಳ ಕಳ್ಳರು ಬಂದಿಲ್ಲ ಎಂದು ಡಂಗೂರ ಹಾಗೂ ಮೈಕ್ ಮೂಲಕ ಹೇಳಿದ್ದರು. ಆದರೂ ಗಂಗಾನಗರದ ಗ್ರಾಮಸ್ಥರು ಮಕ್ಕಳ ಕಳ್ಳ ಎಂದು ಅಪರಿಚಿತ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದರಲ್ಲಿ ಜಿಲ್ಲೆಯಾದ್ಯಂತ ಮಕ್ಕಳ ಕಳ್ಳ ಎಂಬ ಭೀತಿ ಶುರುವಾಗಿದ್ದು, ಜಿಲ್ಲೆಯಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಈ ಸಂಬಂಧ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.