Yadagiri | ಬಸವಸಾಗರ ಜಲಾಶಯ ಭರ್ತಿ ಸಾಧ್ಯತೆ : ಜಿಲ್ಲಾಡಳಿತ ಫುಲ್ ಅಲರ್ಟ್
ಯಾದಗಿರಿ : ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ.
ಪ್ರವಾಹ ಬರುವ ಆತಂಕದಲ್ಲಿ ಯಾದಗಿರಿ ಜಿಲ್ಲಾಡಳಿತ ಇದ್ದರೇ ಕೃಷ್ಣಾ ತೀರದಲ್ಲಿರುವ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಹೀಗಾಗಿ ಡಂಗೂರ ಬಾರಿಸಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಕೃಷ್ಣಾ ನದಿ ತಟದಲಗಲ್ಲಿರುವ ಹುಣಸಗಿ ತಾಲೂಕಿನ ಜಮಾಲಾಪುರ ಗ್ರಾಮದಲ್ಲಿ ಡಂಗೂರ ಬಾರಸಿ ಜನರು ಮತ್ತು ಜಾನುವಾರುಗಳು ನದಿಯ ದಡಕ್ಕೆ ಬೀಡದಂತೆ ಎಚ್ಚರಿಕೆ ನೀಡಿದ್ದಾರೆ.
ಇತ್ತ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ–ಜಾನುವಾರು ಸುರಕ್ಷತೆಗೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳೊಂದಿಗೆ ಡಿಸಿ ಸಭೆ ನಡೆಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಮೀಟಿಂಗ್ ನಡೆದಿದೆ.
ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದರಿಂದಾಗಿ ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾದ್ರೆ ಯಾವುದೇ ಕ್ಷಣದಲ್ಲಾದ್ರು ನೀರು ಬೀಡಬಹುದು.








